ತನ್ನ ಇಷ್ಟದ ಹಾಡು ಹಾಕಿಲ್ಲವೆಂದು ಮದುವೆ ಮಂಟಪಕ್ಕೆ ಎಂಟ್ರಿ ನೀಡಲು ಹಿಂದೇಟು ಹಾಕಿದ ವಧು: ವೈರಲ್ ಆಯ್ತು ವೀಡಿಯೋ

Entertainment Featured-Articles News Viral Video
42 Views

ಬಹಳಷ್ಟು ಜನ ಹೆಣ್ಣುಮಕ್ಕಳು ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶ್ರೀಮಂತರು ವೆಡ್ಡಿಂಗ್ ಪ್ಲಾನ್ ಗಳನ್ನೇ ಮಾಡಿಸಿ, ಬಹಳ ವಿಜೃಂಭಣೆಯಿಂದ ಮದುವೆ ನಡೆಸುವುದು ಒಂದು ಟ್ರೆಂಡ್ ಆಗಿದೆ‌. ಇನ್ನು ಮದುವೆಯಾಗುವ ಹೆಣ್ಣು ತನ್ನ ಮದುವೆಯಲ್ಲಿ ಅರಿಶಿನ ಶಾಸ್ತ್ರ, ಮೆಹಂದಿ, ಸಂಗೀತ್, ವಧುವಿನ ಆಗಮನ ಹೀಗೆ ಪ್ರತಿಯೊಂದು ಸಂಪ್ರದಾಯದ ಆಚರಣೆಯ ವಿಷಯವಾಗಿ ಕೆಲವು ನಿರ್ದಿಷ್ಟವಾದ ಯೋಜನೆಗಳನ್ನು ಸಿದ್ಧಪಡಿಸಿ ಕೊಂಡಿರುತ್ತಾಳೆ. ಆದರೆ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಯಾವುದಾದರೂ ಒಂದು ಸಂದರ್ಭದಲ್ಲಿ ಅವರಿಗೆ ತಾವು ಅಂದುಕೊಂಡಂತೆ ನಡೆಯದಿದ್ದರೆ ಸಿಕ್ಕಾಪಟ್ಟೆ ಕೋಪಗೊಳ್ಳುತ್ತಾರೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಇಂತಹದೇ ಹಿನ್ನೆಲೆಯನ್ನು ಒಳಗೊಂಡ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮದುವೆಯಲ್ಲಿ ವಧುವಿನ ಕೋಪ, ಅಸಮಾಧಾನ ಹಾಗೂ ಹಠ ಹೇಗಿತ್ತು ಎನ್ನುವುದು ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪಕ್ಕೆ ವಧು ಎಂಟ್ರಿ ನೀಡುವಾಗ ಅದಕ್ಕೆ ಅನುಗುಣವಾಗಿ ಹಾಡು, ಡಾನ್ಸ್ ಮತ್ತು ಕೊರಿಯೋಗ್ರಫಿ ಯೋಜಿಸಲಾಗುತ್ತದೆ. ವೈರಲ್ ವಿಡಿಯೋದಲ್ಲಿ ಗಮನಿಸಿದಾಗ ಅಲ್ಲಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ, ಬಹಳ ಅದ್ಭುತವಾಗಿ ಸಿದ್ಧವಾದ ಮದುವೆಯ ಹೆಣ್ಣು ಮಂಟಪಕ್ಕೆ ಬರುವ ವೇಳೆಯಲ್ಲಿ ಬಹಳ ಅಸಮಾಧಾನಗೊಂಡಿದ್ದಾಳೆ. ಅದಕ್ಕೆ ಕಾರಣ ತನಗೆ ಇಷ್ಟವಾದ ಹಾಡು ಅಲ್ಲಿ ಹಾಕಿಲ್ಲವೆಂದು. ಆಕೆ ತನ್ನ ಇಷ್ಟದ ಹಾಡು ಹಾಕಿಲ್ಲವೆಂದು ತಾನು ಮದುವೆ ಮಂಟಪ ಪ್ರವೇಶಿಸಲು ಹಿಂದೇಟು ಹಾಕಿದ್ದಾಳೆ. ಅಲ್ಲದೇ ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತನ್ನ ಇಷ್ಟದ ಹಾಡನ್ನು ಹಾಕುವಂತೆ ಹೇಳುತ್ತಾಳೆ.

ಆದರೆ ಆ ಹಾಡು ಪ್ಲೇ ಆಗದಿರುವುದನ್ನು ನೋಡಿ ವಧು ತ್ರೀವ್ರ ಅ ಸಮಾಧಾನಗೊಳ್ಳುತ್ತಿದ್ದಾಳೆ. ವಧುವಿನ ಸ್ನೇಹಿತರು ಆಕೆಯನ್ನು ಅಸಮಾಧಾನವನ್ನು ಮಾಡುತ್ತಿರುವುದನ್ನು ನಾವು ನೋಡಬಹುದು. ಅಲ್ಲದೇ ಆಕೆಗೆ ಇಷ್ಟವಾದ ಹಾಡನ್ನು ಹಾಕುವಂತೆ ಹೇಳುತ್ತಿರುವುದು ಕೂಡಾ ನಮಗೆ ಕಾಣುತ್ತದೆ. ಒಟ್ಟಾರೆ ತನಗೆ ಇಷ್ಟವಾದ ಹಾಡು ಬರಲಿಲ್ಲವೆಂದು ಮದುವೆ ಮಂಟಪಕ್ಕೆ ಎಂಟ್ರಿ ಕೊಡಲು ಹಿಂದೇಟು ಹಾಕಿದ ವಧುವಿನ ಈ ವಿಡಿಯೋ ನೆಟ್ಟಿಗರಿಗೆ ಬಹಳ ಇಷ್ಟವಾಗಿದೆ. ಅಲ್ಲದೇ ವಧುವಿನ ಸ್ಥಿತಿಗೆ ಕೆಲವರು ಅಯ್ಯೋ ಪಾಪ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ನಡೆಯುತ್ತಿರುವ ಇಂತಹ ವಿಚಿತ್ರ ಸಂಗತಿಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Leave a Reply

Your email address will not be published. Required fields are marked *