ತನ್ನ ಅಸ್ತಿತ್ವದ ವಾಸ್ತವ ರಾಜನಂದಿನಿ ಎನ್ನುವ ಸತ್ಯ ಅರಿತಳೇ ಅನು!! ರೋಚಕ ಘಟ್ಟ ತಲುಪಿದ ಜೊತೆ ಜೊತೆಯಲಿ

Entertainment Featured-Articles News
59 Views

ಜೊತೆ ಜೊತೆಯಲಿ ಕನ್ನಡ ಕಿರುತೆರೆಯ ಲೋಕದ ಒಂದು ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟು ನೋಡುವ ಒಂದು ದೊಡ್ಡ ಅಭಿಮಾನ ಬಳಗವೇ ಇದೆ ಎನ್ನುವ ವಿಷಯವನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಆರಂಭದಿಂದಲೂ ಈ ಧಾರಾವಾಹಿ ಟಾಪ್ ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಆರಂಭದಲ್ಲೇ ಕಿರುತೆರೆಯ ಲೋಕದಲ್ಲಿ ಹೊಸ ದಾಖಲೆ ಬರೆದು, ಹೊಸ‌ ಇತಿಹಾಸ ರಚಿಸಿದ ಸೀರಿಯಲ್ ಜೊತೆ ಜೊತೆಯಲಿ ಈಗ ಮಹತ್ವದ ಘಟ್ಟವನ್ನು ತಲುಪಿದೆ.

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ರಾಜನಂದಿನಿ ಅಧ್ಯಾಯದ ಆರಂಭದ ಜೊತೆಗೆ ಸಮಾಜದ ಮುಂದೆ ಸಭ್ಯರಂತೆ ಕಾಣುತ್ತಿದ್ದ ಆರ್ಯವರ್ಧನ್ ಹಾಗೂ ಕೇಶವ್ ಜೇಂಡೆಯ ಅಸಲಿ ಮುಖ, ಕುತಂತ್ರಗಳು ಅನು ಕಣ್ಮುಂದೆ ಅನಾವರಣಗೊಳ್ಳುತ್ತಾ ಸಾಗಿ, ಅವರ ನಿಜ ರೂಪ ಬಯಲಾಗಿದೆ. ರಾಜನಂದಿನಿ ಅಧ್ಯಾಯ ಕೂಡಾ ತನ್ನ ಕೊನೆಯ ಘಟ್ಟವನ್ನು ತಲುಪಿದ್ದು ಇದು ವೀಕ್ಷಕರಿಗೆ ಇನ್ನಷ್ಟು ಕುತೂಹಲವನ್ನು ಕೆರಳಿಸಿದ್ದು, ಕಥೆಯು ರೋಚಕ ಘಟ್ಟವನ್ನು ತಲುಪಿದ್ದು, ವೀಕ್ಷಕರ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

ರಾಜ ನಂದಿನಿ ಜೀವನದ ಒಂದೊಂದು ಪ್ರಮುಖ ಘಟ್ಟವೂ ಸಹಾ ಅನು ಕಣ್ಮುಂದೆ ಚಿತ್ರಗಳಾಗಿ ಮೂಡಿ ಬಂದಿದೆ. ರಾಜನಂದಿನಿ ಬದುಕಿನ ಕರಾಳ ಸತ್ಯಗಳನ್ನು ಅನು ಅರ್ಥ ಮಾಡಿಕೊಂಡಿದ್ದಾಳೆ. ಆದರೆ ತಾನೇ ರಾಜನಂದಿನಿ ಎನ್ನುವ ವಿಚಾರದಲ್ಲಿ ಅನು ಇನ್ನೂ ಗೊಂದಲದಲ್ಲಿ ಇದ್ದು, ಅಷ್ಟಮಿ ರಾತ್ರಿಯಂದು ಕೊನೆಯದಾಗಿ ನಡೆದಿದ್ದೇನು ಎಂದು ತಿಳಿಯುವ ಆಸಕ್ತಿಯು ಅವಳನ್ನು ರಾಜನಂದಿನಿ ಹಾಗೂ ಆರ್ಯ ಕೊನೆಯದಾಗಿ ಭೇಟಿಯಾದ ಜಾಗಕ್ಕೆ ಬರುವಂತೆ ಮಾಡಿದೆ.

ಯಾವ ಜಾಗದಲ್ಲಿ ರಾಜನಂದಿನಿ ಕೊನೆಯ ಬಾರಿ ಜೋಗತವ್ವನನ್ನು ಭೇಟಿಯಾಗಿದ್ದಳೋ, ಅದೇ ಜಾಗದಲ್ಲಿ ಅನು ಸಿರಿಮನೆ ಜೋಗತವ್ವನನ್ನು ಭೇಟಿಯಾಗಿ, ಆ ರಾತ್ರಿ ರಾಜನಂದಿನಿಗೆ ಅಪಾಯ ಇದೆ ಎಂದು ತಿಳಿದಿದ್ದರೂ ಕಾಪಾಡಲಿಲ್ಲ ಏಕೆ ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ಜೋಗತವ್ವ ವಿಧಿಯನ್ನು ಯಾರು ಬದಲಿಸಲು ಸಾಧ್ಯವೇ ಇಲ್ಲ, ಅಂದು ನಾನು ತಡೆದಿದ್ದರೆ ಇಂದು ನೀನು ಇಲ್ಲಿಗೆ‌ ಬರ್ತಾ ಇರ್ಲಿಲ್ಲ ಎಂದು ಮಾರ್ಮಿಕವಾಗಿ ಅನುವೇ ರಾಜನಂದಿನಿ ಎನ್ನುವ ಸುಳಿವನ್ನು ನೀಡಿದ್ದಾಳೆ.

ಇನ್ನು ಅನು ತನ್ನ ಅಸ್ತಿತ್ವದ ವಾಸ್ತವವನ್ನು ಅರಿತುಕೊಳ್ಳುವಳಾ?? ತಾನೇ ರಾಜನಂದಿನಿ ಎನ್ನುವ ನಿಜವನ್ನು ಅವಳು ಅರ್ಥ ಮಾಡಿಕೊಂಡು ಅದನ್ನು ಒಪ್ಪುವಳಾ?? ರಾಜನಂದಿನಿಯ ಪುನರ್ಜನ್ಮವೇ ತಾನು ಎಂದು ತಿಳಿದ ಮೇಲೆ ಅನು ಆರ್ಯವರ್ಧನ್ ಮಾಡಿದ ಮೋಸಕ್ಕೆ ಯಾವ ರೀತಿ ಸೇಡು ತೀರಿಸಿಕೊಳ್ಳುವಳು, ಒಟ್ಟಾರೆ ಜೊತೆ ಜೊತೆಯಲಿ ಸೀರಿಯಲ್ ಕುತೂಹಲ ಹಾಗೂ ರೋಚಕತೆಯ ಒಂದು ಆಸಕ್ತಿಕರ ಘಟ್ಟವನ್ನು ತಲುಪಿದ್ದು ಮುಂದೆ ಏನಾಗಲಿದೆ ಎನ್ನುವುದಕ್ಕೆ ಸೀರಿಯಲ್ ನೋಡಬೇಕಿದೆ.

Leave a Reply

Your email address will not be published. Required fields are marked *