ತನ್ನಷ್ಟಕ್ಕೆ ತಾನೇ ರಸ್ತೆಗೆ ಬಂದ ರಿಕ್ಷಾ: ಇದು ದೆವ್ವದ ಆಟ ಎಂದ ನೆಟ್ಟಿಗರು, ವೀಡಿಯೋ ವೈರಲ್ !!

Written by Soma Shekar

Published on:

---Join Our Channel---

ಯಾವುದಾದರೂ ವೀಡಿಯೋ ವೈರಲ್ ಆಗುತ್ತದೆ ಎಂದರೆ ಅದು ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪ್ರತಿದಿನ ಕೂಡಾ ಹುಲಿಗಳು, ಸಿಂಹಗಳು, ಮೊಸಳೆಗಳು, ಹಾವುಗಳು ಹೀಗೆ ಅನೇಕ ಪ್ರಾಣಿಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಲೇ ಇರುತ್ತದೆ. ಕೆಲವು ವೀಡಿಯೋಗಳು ಫನ್ನಿ ಯಾಗಿರುತ್ತದೆ. ಅವು ಭರ್ಜರಿ ಮನೆರಂಜನೆಯನ್ನು ಸಹಾ ನೀಡುತ್ತವೆ. ಇಂತಹ ವೀಡಿಯೋಗಳು ಬಹಳ ಬೇಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಸಹಾ ಆಗುತ್ತದೆ.

ಈಗ ಹೊಸದಾಗಿ ಒಂದು ರಿಕ್ಷಾದ ವೀಡಿಯೋ ವೈರಲ್ ಆಗಿದೆ. ಈ ವಿಚಿತ್ರವಾದ ವೀಡಿಯೋ ಈಗ ಸಖತ್ ಸದ್ದು ಮಾಡುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಸಹಾ ಶಾ ಕ್ ಗೆ ಗುರಿಯಾಗುತ್ತಿದ್ದಾರೆ. ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಶೇರ್ ಆಗಿರುವ ಈ ವೀಡಿಯೋ ಸಖತ್ ಕ್ರೇಜ್ ಎನ್ನುವ ಹಾಗೆ ವೈರಲ್ ಆಗುತ್ತಿದೆ. ಈ ವೀಡಿಯೋ ನಿಮ್ಮನ್ನು ಕೂಡಾ ಅಚ್ಚರಿಯಲ್ಲಿ ಮುಳುಗುವಂತೆ ಮಾಡುತ್ತದೆ ಎನ್ನುವುದರಲ್ಲಿ ಅನುಮಾನ ಇಲ್ಲ. ವೀಡಿಯೋ ನೋಡಿದ ನೆಟ್ಟಿಗರು ಇದು ದೆವ್ವದ ಎಫೆಕ್ಟ್ ಎಂದೆಲ್ಲಾ ಹೇಳುತ್ತಿದ್ದಾರೆ. ವೀಡಿಯೋ ಮಾತ್ರ ಗಮನ ಸೆಳೆಯುತ್ತಿದೆ.

ಜೋರು ಮಳೆ ಬೀಳುವ ಸಮಯದಲ್ಲಿ ವಾಹನ ಸಂಚಾರ ಇರುವ ರಸ್ತೆಯೊಂದರಲ್ಲಿ ಒಂದು ರಿಕ್ಷಾವನ್ನು ನಿಲ್ಲಿಸಲಾಗಿದೆ. ಹಾಗೆ ನಿಂತಿದ್ದ ಕೆಲವು ಸೆಕೆಂಡ್ ಗಳ ನಂತರ ರಿಕ್ಷಾ ಇದ್ದಕ್ಕಿದ್ದ ಹಾಗೆ ರಸ್ತೆಯ ಮೇಲಕ್ಕೆ ಚಲಿಸುತ್ತದೆ. ತನ್ನಷ್ಟಕ್ಕೆ ತಾನೇ ಮುಂದೆ ಹೋಗುವ ರಿಕ್ಷಾವನ್ನು ನೋಡಿ ನೆಟ್ಟಿಗರು ಹಾಗೂ ಆ ಸಂದರ್ಭದಲ್ಲಿ ಅಲ್ಲಿದ್ದ ಜನರು ಸಹಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ರಿಕ್ಷಾ ಹಾಗೆ ಮುಂದಕ್ಕೆ ಹೋಗಿದ್ದು ನೋಡಿದಾಗ ಅದು ಗಾಳಿಯ ಪರಿಣಾಮ ಎನಿಸುತ್ತದೆ.

ಆದರೆ ವಿಚಿತ್ರ ಏನೆಂದರೆ ವಾಹನ ಸಂಚಾರವಿದ್ದ ರಸ್ತೆಯ ಮೇಲೆ ಯಾವುದೇ ಅಡ್ಡಿ ಆತಂಕವನ್ನು ಉಂಟು ಮಾಡದೇ ರಸ್ತೆಗೆ ಹೋಗಿದ್ದು, ಅನಂತರ ಅದು ಹಿಂದಕ್ಕೆ ವಾಪಸ್ಸು ಸಹಾ ಬಂದಿದೆ. ವೈರಲ್ ಆದ ಈ ವೀಡಿಯೋವನ್ನು ಇದುವರೆಗೂ ಸುಮಾರು ಏಳು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಸಾವಿರಾರು ಮಂದಿ ವೀಡಿಯೋಗೆ ಲೈಕ್ ನೀಡಿದ್ದು, ಅಸಂಖ್ಯಾತ ಮಂದಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ನೆಟ್ಟಿಗರು ವೈವಿದ್ಯಮಯವಾದ ಕಾಮೆಂಟ್ ಗಳನ್ನು ಸಹಾ ನೀಡಿದ್ದಾರೆ.

Leave a Comment