ನನ್ನನ್ನು “ನಿಕ್ ಜೋನಸ್ ಪತ್ನಿ” ಎಂದಿದ್ದೇಕೆ? ಸ್ಪೋಟಗೊಂಡ ಪ್ರಿಯಾಂಕ ಚೋಪ್ರಾ ಆ ಕ್ರೋ ಶ

Entertainment Featured-Articles News
38 Views

ಬಾಲಿವುಡ್‌ ನಿಂದ ಹಾಲಿವುಡ್ ವರೆಗೆ ಹೆಸರು ಮಾಡಿರುವ ನಟಿ ಪ್ರಿಯಾಂಕ ಚೋಪ್ರಾ. ಈಕೆ ಬಹು ಮುಖ ಪ್ರತಿಭಾವಂತೆ. ಮಾಜಿ ಮಿಸ್ ವರ್ಲ್ಡ್ ಕೂಡಾ ಹೌದು, ಇದಲ್ಲದೇ ಬರಹಗಾರ್ತಿ, ಸೂಪರ್ ಮಾಡೆಲ್, ನಿರ್ಮಾಪಕಿ, ನಿರ್ದೇಶಕಿ, ಬ್ಯುಸಿನೆಸ್ ವುಮೆನ್, ಗಾಯಕಿ ಹಾಗೂ ಯುನಿಸೆಫ್ ನ ರಾಯಭಾರಿ, ವಿಶ್ವಮಟ್ಟದ ಹಲವು ಬ್ರಾಂಡ್ ಗಳ ರಾಯಭಾರಿಯೂ ಕೂಡಾ ಆಗಿರುವ ಪ್ರಿಯಾಂಕ ಚೋಪ್ರಾಗೆ ವಿಶ್ವ ಮಟ್ಟದಲ್ಲಿ ತನ್ನದೇ ಆದ ಹೆಸರಿದೆ. ಈ ನಟಿಗೆ ಪ್ರತ್ಯೇಕ ಪರಿಚಯದ ಅಗತ್ಯವೇ ಇಲ್ಲ. ಪ್ರಿಯಾಂಕ ಚೋಪ್ರಾ ಎನ್ನುವುದೇ ಒಂದು ದೊಡ್ಡ ಬ್ರಾಂಡ್ ಕೂಡಾ‌ ಹೌದು.

ಆದರೆ ಇತ್ತೀಚಿಗೆ ಅಮೆರಿಕಾ ಒಂದು ನಿಯತಕಾಲಿಕೆ ತನ್ನ ವರದಿಯೊಂದರಲ್ಲಿ ಪ್ರಿಯಾಂಕ ಕುರಿತಾಗಿ ಬರೆದ ಒಂದು ಸಾಲು ನಟಿಯ ಸಿಟ್ಟು, ಆ ಕ್ರೋ ಶ ಹಾಗೂ ಅಸಮಾಧಾನಕ್ಕೆ ಕಾರಣವಾಗಿರುವುದು ಮಾತ್ರವೇ ಅಲ್ಲದೇ ಇದೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಮೆರಿಕಾದ ಪ್ರಮುಖ ನಿಯತಕಾಲಿಕೆ ಡೈಲಿ ಮೇಲ್ ತನ್ನ ವರದಿಯೊಂದರಲ್ಲಿ, “ದಿ ವೈಫ್ ಆಫ್ ನಿಕ್ ಜೋನಸ್” ಎನ್ನುವ ಸಾಲನ್ನು ಬರೆದಿದೆ. ಇದು ಒಂದರ್ಥದಲ್ಲಿ ವಾಸ್ತವ. ಪ್ರಿಯಾಂಕ ನಿಕ್ ಜೋನಸ್ ಅವರ ಪತ್ನಿ ಎನ್ನುವುದು ಇಡೀ ಜಗತ್ತಿಗೇ ತಿಳಿದ ವಿಷಯವಾಗಿದೆ.

ಆದರೆ ನಿಯತಕಾಲಿಕೆಯು ಈ ರೀತಿ ಬರೆದಿದ್ದೇ ಪ್ರಿಯಾಂಕ ಅವರ ಸಿಟ್ಟಿಗೆ ಕಾರಣವಾಗಿದೆ. ನಿಕ್ ಜೋನಸ್ ಪತ್ನಿ ಎಂದು ಪ್ರಿಯಾಂಕ ಅವರ ಪರಿಚಯ ನೀಡಿದ್ದು ನಟಿಗೆ ಬೇಸರ ಮೂಡಿಸಿದೆ. ಇಷ್ಟೊಂದು ಜನಪ್ರಿಯತೆ ಇರುವಾಗ ಈ ರೀತಿ ಗಂಡನ ಹೆಸರಿನೊಂದಿಗೆ ತನ್ನ ಪರಿಚಯ ನೀಡುವುದು ಎಷ್ಟು ಸರಿ ಎನ್ನುವುದು ಪ್ರಿಯಾಂಕ ಚೋಪ್ರಾ ಅವರ ಪ್ರಶ್ನೆಯಾಗಿದ್ದು, ಇದು ಮಹಿಳಾ ಸಮಾನತೆಗೆ ಧಕ್ಕೆ ತರುವ ವಿಚಾರವಾಗಿದೆ ಎನ್ನುವುದು ಅವರ ವಾದವಾಗಿದೆ.

ಪ್ರಿಯಾಂಕ ಈ ಕುರಿತಾಗಿ, ತಾನೊಂದು ಸರ್ವಕಾಲಿಕ ಸಿನಿಮಾ ಫ್ರಾಂಚೈಸಿಯ ರಾಯಭಾರಿಯಾಗಿ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದೇನೆ. ಇದರ ಹೊರತಾಗಿಯೂ ನನ್ನನ್ನು ನಿಕ್ ಜೋನಸ್ ಪತ್ನಿ ಎಂದು ಕರೆಯುವುದು ಎಷ್ಟು ಸರಿ?? ಮಹಿಳೆಯರ ವಿ ರು ದ್ಧ ಇಂತಹ ಘಟನೆಗಳು ಹೇಗೆ ನಡೆಯುತ್ತವೆ?? ನಾನೇನು ನನ್ನ IMbD ಲಿಂಕನ್ನು ಕೂಡಾ ಶೇರ್ ಮಾಡಬೇಕಾ?? ಎಂದು ಡೈಲಿ ಮೇಲ್ ನ ವರದಿಯ ಬಗ್ಗೆ ಆ ಕ್ರೋ ಶವನ್ನು ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *