ನಾನೊಬ್ಬ ಗೃಹಿಣಿ, ಕ್ಯಾಸಿನೊ ಆಡುವಷ್ಟು ಶ್ರೀಮಂತಿಕೆ ಇಲ್ಲ: ತನಗಾದ ಮೋಸ ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಸಂಜನಾ ಗಲ್ರಾನಿ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ತಮಗೆ ವಂಚನೆಯಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರು ತಮಗೆ ವಂಚನೆಯಾಗಿದೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲು ಮಾಡಿದ್ದು, ನ್ಯಾಯಾಲಯವು ಅದರ ವಿಚಾರಣೆಯನ್ನು ನಡೆಸಿದ ನಂತರ ಪೊಲೀಸ್ ಅಧಿಕಾರಿಗಳಿಗೆ ತನಿಖೆಯನ್ನು ನಡೆಸುವಂತೆ ಸೂಚನೆಯನ್ನು ನೀಡಿದೆ. ನಟಿ ಸಂಜನಾ ಗಲ್ರಾನಿ ತಮ್ಮ ಸ್ನೇಹಿತ ರಾಹುಲ್ ಥೋನ್ಸೆ ಸೇರಿದಂತೆ ಮೂರು ಜನರ ಮೇಲೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ತನಿಖೆ ಆರಂಭವಾಗಿದೆ. ನಟಿ ಸಂಜನಾ ಗಲ್ರಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಗೆ ಅನ್ಯಾಯವಾದ ವಿಷಯನ್ನು ಸಂಪೂರ್ಣವಾಗಿ ವಿವರಿಸಿ ಒಂದು ಪತ್ರ ಬರೆದು, ಅದನ್ನು ಶೇರ್ ಮಾಡಿಕೊಂಡಿದ್ದಾರೆ.

ಸಂಜನಾ ಅವರು ಹೇಗೆ ತನಗೆ ತನ್ನ ಆಪ್ತರಿಂದಲೇ ವಂಚನೆಯಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಸಂಜನಾ ಬರೆದ ಪತ್ರದ ಸಾರ ಹೀಗಿದೆ.. ಮಾಧ್ಯಮ ಮಿತ್ರರಿಗೆ ನಮಸ್ಕಾರ, ನಿನ್ನೆಯಿಂದ ಹೊಸದೊಂದು ಸುದ್ದಿ ಹಬ್ಬುತ್ತಿದೆ. ಏನಂದರೆ ಈಗಾಗಲೇ ನೊಂದು ಹೋಗಿರುವ ನನಗೆ ಈ ವದಂತಿಗಳೂ ಇನ್ನೂ ದುಃಖಕ್ಕೆ ತಳ್ಳಿವೆ . ಹೌದು ನಾನು ಸಹೋದರನಂತೆ ನಂಬಿದ್ದ ರಾಹುಲ್ ಮತ್ತು ಅವರ ತಂದೆ – ತಾಯಿ ನನಗೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ ನಂತರ ವಾಪಸ್ಸು ಕೂಡುವುದಾಗಿ ನಂಬಿಸಿ ಆತನ ವ್ಯವಹಾರಕ್ಕೆ ನಾನು ಕಷ್ಟ ಪಟ್ಟು ದುಡಿದ ಹಣವನ್ನ ಆತನ ತಂದೆ ತಾಯಿಗಳೇ ಕೇಳಿದರೆಂದೇ ಅವರ ಖಾತೆಗೇ ಕೊಟ್ಟಿದ್ದೆ.

ಆತ ಹಲವಾರು ತಿರುವಿನ ನಂತರ ಹಣ ವಾಪಾಸು ಮಾಡದೇ ಹೋದಾಗ ನ್ಯಾಯಾಲಯದ ಮೊರೆ ಹೋದೆ. ನಾನು ನೀಡಿದ ಹಣ ಕ್ಯಾಸಿನೊ ವ್ಯವಹಾರಕ್ಕಲ್ಲ. ಕ್ಯಾಸಿನೋ ಆಡುವಷ್ಟು ಶ್ರೀಮಂತಳೂ ಅಲ್ಲ, ಅಂತಹ ಜೂಜಿನ ಯಾವುದೇ ಹವ್ಯಾಸಗಳಿಲ್ಲ. ಇದು ಸಹೋದರನೊಬ್ಬ ಮಾಡಿದ ಮೋಸದ ನೊಂದ ಹೆಣ್ಣಿನ ಕಥೆ. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಬೇಡುತ್ತೇನೆ. ಹಣವನ್ನು ನಾನು ವಾಪಸ್ ಕೇಳಿದಾಗ ಆತ ಮತ್ತು ಆತನ ಪೋಷಕರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಮಾನಹಾನಿ ಮಾಡಿರುತ್ತಾರೆ ಹಾಗೂ ಪ್ರಾ ಣ ಬೆ ದರಿಕೆ ಹಾಕಿರುತ್ತಾರೆ.

ಈ ಸಲುವಾಗಿ ನಾನು ನ್ಯಾಯಾಲಯದ ಮೊರೆ ಹೋಗಿ ನಾನು ರಾಹುಲ್ ಮತ್ತು ಆತನ ಪೋಷಕರ ವಿರುದ್ಧ ದೂರು ಸಲ್ಲಿಸಿರುತ್ತೇನೆ.‌ ನಾನು ಕೌಟುಂಬಿಕ ಚೌಕಟ್ಟಿನಲ್ಲಿರುವ ಗೃಹಿಣಿ ಈಗ ನೀವು ತೋರಿಸುವ ಒಂದೊಂದು ಸುದ್ದಿಯೂ ನನ್ನ ಕುಟುಂಬವನ್ನೂ ಘಾಸಿಗೊಳಿಸುತ್ತದೆ. ನಾ ಎಲ್ಲದಕೂ ಉತ್ತರದಾಯಿಯಾಗಿದ್ದೇನೆ. ಈ ಸಹೋದರನ ಕಾರಣಕ್ಕಾಗಿ ನಾನು ಹಲವಾರು ಸಂಕಷ್ಟಗಳನ್ನ ಅನುಭವಿಸಿದ್ದೇನೆ. ಮಾನಹಾನಿಯೂ ಆಗಿ ಈಗ ಜೀವಂತವಿರುವುದಕ್ಕೆ ಸಂಘರ್ಷಮಾಡುವಂತಹ
ಸಂಧರ್ಭದಲ್ಲಿ ಈತನ ಈ ನೋವನ್ನೂ ಸಹಿಸಬೇಕಾಗಿದೆ.

ಇದು ನಾನು ಮನೆಯಲ್ಲಿಲ್ಲದ ಕಾರಣ ಈ ಪತ್ರ ಮತ್ತು ವಿನಮ್ರಪೂರ್ವಕ ವಿವರಣೆಯನ್ನು ಕಳಿಸುತ್ತಿದ್ದೇನೆ. ದಯಮಾಡಿ ನಿಮ್ಮ ಮನೆಯ ಮಗಳೆಂದು ಪರಿಗಣಿಸಿ. ನ್ಯಾಯಾಲಯದ ಮೇಲೆ ಕಾನೂನು ವ್ಯವಸ್ಥೆಯ ಬಗ್ಗೆ ಅಪಾರ ನಂಬಿಕೆ ಇರುವ ನನಗೆ ನ್ಯಾಯ ಸಿಗುತ್ತದೆಂದು ನಂಬಿದ್ದೇನೆ. ಒಬ್ಬ ವ್ಯಕ್ತಿಯನ್ನು ನಾನು ನನ್ನ ಒಡಹುಟ್ಟಿದ ಸಹೋದರ ಎಂದು ಪರಿಗಣಿಸಿದ್ದೆ. ನಾವು ಒಂದೇ ತಟ್ಟೆಯಲ್ಲಿ ಊಟ ಮಾಡಿದ ಸಮಯವಿದೆ. ಆತ ಊಟ ಮಾಡಿದ ತಟ್ಟೆಯಲ್ಲಿ ಎಂಜಲು ಉಗುಳುವ ಕೆಲಸ ಮಾಡಿ , ನನಗೆ ದ್ರೋಹ ಬಗೆದಿದ್ದಾನೆ.

ನನ್ನ ಹೆಸರು , ನನ್ನ ಖ್ಯಾತಿ , ನನ್ನ ಘನತೆಗೆ ಧಕ್ಕೆ ತಂದಿದ್ದಲ್ಲದೆ, ನನ್ನ ಆರ್ಥಿಕವಾಗಿಯೂ ನಾಶ ಮಾಡಿದ್ದಾನೆ. ಇಷ್ಟಾದರೂ ನಾನು ಮಾನವೀಯತೆಯ ದೃಷ್ಟಿಯಿಂದ ದೇವರಲ್ಲಿ ಪ್ರಾರ್ಥಿಸುತ್ತೇನೆ.‌ ಅವರ ತಂದೆ , ತಾಯಿಯರು ಹಿರಿಯರಿದ್ದಾರೆ. ಅವರ ಸಲುವಾಗಿ ನಾನು ದೇವರಲ್ಲಿ ಮತ್ತೊಮ್ಮೆ ಪ್ರಾರ್ಥಿಸುವುದು ಇಷ್ಟೇ , ಆದಷ್ಟು ಬೇಗ ಈ ಎಲ್ಲಾ ಪ್ರಕರಣಗಳು ಸಖಾಂತ್ಯವಾಗಲಿ. ವಿನಮ್ರ ವಿನಂತಿ ನಾನು ನನ್ನ ನಿವಾಸದಲ್ಲಿ ಲಭ್ಯವಿಲ್ಲದ ಕಾರಣ ಮಾಧ್ಯಮ ಮಿತ್ರರಿಗೆ ಲಭ್ಯವಿಲ್ಲ.

ದಯವಿಟ್ಟು ನನ್ನ ವಿವರಣೆಯನ್ನು ನನ್ನ ತೀರ್ಮಾನ ಎಂದು ಪರಿಗಣಿಸಿ , ಈ ದೇಶದ ಕಾನೂನು ಮತ್ತು ನ್ಯಾಯಾಲಯದ ವ್ಯವಸ್ಥೆ ಬಗ್ಗೆ ನನಗೆ ಅಪಾರ ನಂಬಿಕೆ ಇದೆ . ವಿಶ್ವಾಸದಿಂದ ಶ್ರೀಮತಿ ಸಂಜನಾ ಎಂದು ಬರೆದುಕೊಂಡಿದ್ದಾರೆ.

Leave a Comment