ತಗ್ಗೋದೇ ಇಲ್ಲಾ ಅಂತಿದ್ದಾರೆ ನಟಿ ರಮ್ಯಾ: ಸ್ಯಾಂಡಲ್ವುಡ್ನ ಟಾಪ್ ಹೀರೋಯಿನ್ ಅಂತ ಮತ್ತೆ ಸಾಬೀತು!!

Entertainment Featured-Articles Movies News

ಸ್ಯಾಂಡಲ್ವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿ, ಸ್ಯಾಂಡಲ್ವುಡ್ ನಲ್ಲಿ ನಂಬರ್ ಒನ್ ನಟಿಯಾಗಿ ಮೆರೆದವರು ನಟಿ ರಮ್ಯ. ಆದರೆ ಈ ನಟಿಯು ರಾಜಕೀಯ ರಂಗವನ್ನು ಪ್ರವೇಶ ಮಾಡಿದ ನಂತರ ಸಿನಿಮಾ ರಂಗದಿಂದ ದೂರವೇ ಉಳಿದರು. ಆದರೆ ನಟಿಯನ್ನು ಅಭಿಮಾನಿಸುವ ಅಸಂಖ್ಯಾತ ಅಭಿಮಾನಿಗಳು ಅಭಿಮಾನ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನುವುದು ವಾಸ್ತವ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರೂ ಸಹಾ ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ.

ನಟಿ ರಮ್ಯ ಅವರು ಪ್ರಸ್ತುತ ದಿನಗಳಲ್ಲಿ ರಾಜಕೀಯದಿಂದ ದೂರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಾಗ ಅವರು ಸಿನಿಮಾ‌ ರಂಗಕ್ಕೆ ರೀ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಗಳು ಸದ್ದು ಮಾಡುತ್ತಲೇ ಇರುತ್ತವೆ. ಅಲ್ಲದೇ ನಟಿ ಸಹಾ ಆಗಾಗ ಸೋಶಿಯಲ್ ಮೀಡಿಯಾ ಮೂಲಕ ಹೊಸ ಸಿನಿಮಾಗಳ ಬಗ್ಗೆ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಲ್ಲದೇ ಶೀಘ್ರದಲ್ಲೇ ಸಿನಿಮಾಕ್ಕೆ ರೀ ಎಂಟ್ರಿ ನೀಡುವ ಒಂದು ಸುಳಿವನ್ನು ಸಹಾ ನೀಡಿದ್ದಾರೆ.

ಈಗ ಇವೆಲ್ಲವುಗಳ ನಡುವೆಯೇ ನಟಿ ರಮ್ಯಾ ಅವರ ಚಾರ್ಮ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನಟಿ ರಮ್ಯಾ ಅವರು ಕನ್ನಡದ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದು ಮಿಂಚಿದ್ದಾರೆ. ಓರಾಮ್ಯಾಕ್ಸ್ ಸಂಸ್ಥೆಯು ಕನ್ನಡದ ಟಾಪ್ ಐದು ನಟಿಯರು ಯಾರು ಎನ್ನುವ ಒಂದು ಸಮೀಕ್ಷೆಯನ್ನು ನಡೆಸಿದ್ದು, ಈ ಸಮೀಕ್ಷೆ ವರದಿಯ ಪ್ರಕಾರ ನಟಿ ರಮ್ಯಾ ಅವರು ಸ್ಯಾಂಡಲ್ವುಡ್ ನ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸಂಸ್ಥೆ ನಡೆಸಿದ ಸಮೀಕ್ಷೆಯ ವಿಚಾರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ನಟಿ ರಮ್ಯಾ ಅವರು, ನಾನು ಕಳೆದ ಎಂಟು ವರ್ಷಗಳಿಂದಲೂ ಸಿನಿಮಾ ದಿಂದ ದೂರ ಉಳಿದಿದ್ದರೂ, ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದು ಖುಷಿಯನ್ನು ನೀಡಿದೆ ಎಂದಿದ್ದಾರೆ. ರಚಿತಾ ರಾಮ್, ಆಶಿಕಾ ರಂಗನಾಥ್, ರಾಧಿಕಾ ಪಂಡಿತ್ ಹಾಗೂ ರಶ್ಮಿಜಾ ಜೊತೆಗೆ ಜೊತೆಗೆ ಸ್ಥಾನವನ್ನು ಪಡೆದಿರುವುದಕ್ಕೆ ಸಂತೋಷವಾಗಿದೆ ಎಂದು ರಮ್ಯ ಅವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ಅವರ ಅಭಿಮಾನಿಗಳು ಸಹಾ ಖುಷಿಗೊಂಡಿದ್ದಾರೆ.

ಸಮೀಕ್ಷೆಯ ಪ್ರಕಾರ ನಟಿ ಆಶಿಕಾ ರಂಗನಾಥ್ ಐದನೇ ಸ್ಥಾನದಲ್ಲಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಮ್ಯಾ, ಸಿನಿಮಾಗಳಿಂದ ದೂರವೇ ಉಳಿದರೂ ನಟಿ ರಾಧಿಕಾ ಪಂಡಿತ್ ಮೂರನೇ ಸ್ಥಾನದಲ್ಲಿ, ರಚಿತಾ ರಾಮ್ ಎರಡನೇ ಸ್ಥಾನದಲ್ಲಿ ಇದ್ದು, ಮೊದಲನೇ ಸ್ಥಾನವನ್ನು ರಶ್ಮಿಕಾ ಮಂದಣ್ಣ‌ ಪಡೆದುಕೊಂಡಿದ್ದಾರೆ. ನಟಿ ರಮ್ಯಾ ಜೊತೆಗೆ ಸಿನಿಮಾ ರಂಗದಿಂದ ದೂರವಿದ್ದರೂ ತನ್ನ ಚಾರ್ಮ್ ಸಹಾ ಕಡಿಮೆಯಾಗಿಲ್ಲ ಎನ್ನುವಂತೆ ರಾಧಿಕಾ ಪಂಡಿತ್ ಮೂರನೇ ಸ್ಥಾನದಲ್ಲಿ ಮಿಂಚಿದ್ದಾರೆ.

Leave a Reply

Your email address will not be published.