ತಂದೆಯೊಬ್ಬರ ಕೋರಿಕೆಗೆ ಅದ್ಭುತ ಚಿತ್ರ ಅರಳಿಸಿದ ಕರಣ್ ಆಚಾರ್ಯ: ಸಾಕ್ಷಾತ್ ಲಕ್ಷ್ಮಿ ರೂಪ ಪಡೆದ ಹೆಣ್ಣು ಮಗು

Entertainment Featured-Articles News

ಗ್ರಾಫಿಕ್ಸ್ ವಿನ್ಯಾಸಕಾರ ಕರಣ್ ಆಚಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲವನ್ನು ಹುಟ್ಟುಹಾಕಿರುವ ಆಧುನಿಕ ಚಿತ್ರ ಕಲಾಕಾರ ಎಂದರೆ ಖಂಡಿತ ತಪ್ಪಾಗುವುದಿಲ್ಲ. ಅವರು ತಮ್ಮ ಆಧುನಿಕ ಕಲಾಕುಂಚದಲ್ಲಿ ಅರಳಿಸುವ ಅದ್ಭುತವಾದ ಕಲಾಕೃತಿಗಳು ಜನರ ಮನಸ್ಸನ್ನು ಮುಟ್ಟುವುದು ಮಾತ್ರವೇ ಅಲ್ಲದೆ ಅಸಂಖ್ಯಾತ ಮೆಚ್ಚುಗೆಗಳು ಹರಿದುಬರುತ್ತದೆ. ಅವರ ಚಿತ್ರಕಲಾ ಸಾಮರ್ಥ್ಯವನ್ನು ನೋಡಿದ ನೆಟ್ಟಿಗರು ಅವರ ಈ ಪ್ರತಿಭೆಯು ಅವರಿಗೆ ಸಿಕ್ಕಿರುವ ಅತ್ಯಮೂಲ್ಯವಾದ ಕೊಡುಗೆ ಎಂದು ಹಾಡಿ ಹೊಗಳುವುದುಂಟು. ಕರಣ್ ಆಚಾರ್ಯ ಅವರು ಶೇರ್ ಮಾಡುವ ವಿಡಿಯೋಗಳು ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.

ಅವರು ವಿಡಿಯೋಗಳ ಮೂಲಕ ತಾವು ಅರಳಿಸುವ ಅದ್ಭುತ ಕಲಾಕೃತಿಗಳ ದೃಶ್ಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅಪರೂಪದ ಚಿತ್ರಗಳು ರೂಪುಗೊಳ್ಳುತ್ತಿರುವ ವಿಡಿಯೋಗಳನ್ನು ನೋಡುತ್ತಾ ಜನ ಮೈಮರೆಯುತ್ತಾರೆ. ಒಂದು ಸಾಮಾನ್ಯ ದೃಶ್ಯವನ್ನು ಅಸಾಮಾನ್ಯ ಹಾಗೂ ಅತ್ಯಮೋಘ ವಾಗಿ ಬದಲಿಸುವ ಕರಣ್ ಆಚಾರ್ಯ ಅವರ ಕಲೆಯ ಮಾಯಾ ಜಾಲವು ಜನರಲ್ಲಿ ಒಂದು ರೋಮಾಂಚನದ ಅನುಭವ ಉಂಟು ಮಾಡುತ್ತದೆ. ಕರಣ್ ಆಚಾರ್ಯ ಅವರು ಈಗಾಗಲೇ ಸಾಕಷ್ಟು ಅದ್ಭುತ ಕಲಾಕೃತಿಗಳನ್ನು ರಚಿಸಿದ್ದಾರೆ.

ದೇವಾನು ದೇವತೆಗಳಿಂದ ಹಿಡಿದು, ಸಿನಿಮಾ ಸೆಲೆಬ್ರಿಟಿಗಳು ಮಾತ್ರವೇ ಅಲ್ಲದೇ, ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯವಾಗಿ ತೋರಿಸುವ, ಸಮಯಕ್ಕೆ ಅನುಗುಣವಾದ ಮನೋಹರ ಚಿತ್ರಗಳನ್ನು ಮೂಡಿಸಿರುವ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿವೆ. ಕರಣ್ ಆಚಾರ್ಯ ಅವರ ಚಿತ್ರಕಲಾ ನೈಪುಣ್ಯವನ್ನು ಮೆಚ್ಚಿ ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ಕೂಡಾ ದೊಡ್ಡದಾಗಿದೆ. ಇದೀಗ ಕರಣ್ ಆಚಾರ್ಯ ಅವರು ರಚಿಸಿರುವ ಹೊಸ ಚಿತ್ರವೊಂದು ವೈರಲ್ ಆಗುತ್ತಿದೆ.

ತಂದೆಯೊಬ್ಬರು ನಾನು ಮತ್ತು ನನ್ನ ಕುಟುಂಬ ಒಂದು ಹೆಣ್ಣು ಮಗುವಿನಿಂದ ಹರಸಲ್ಪಟ್ಡಿದ್ದೇವೆ. ಆ ಮಗು ತನಗೆ ಲಕ್ಷ್ಮಿಯ ರೂಪ. ನನ್ನ ಮಗುವನ್ನು ಲಕ್ಷ್ಮಿ ದೇವಿಯ ರೂಪದಲ್ಲಿ ಒಂದು ಫೋಟೋ ಎಡಿಟಿಂಗ್ ಮಾಡಿಕೊಂಡುವಂತೆ ಗ್ರಾಫಿಕ್ ವಿನ್ಯಾಸಕರ ಕರಣ್ ಆಚಾರ್ಯ ಅವರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರಣ್ ಅವರು ತಾವರೆ ಮೇಲೆ ಪುಟ್ಟ ಲಕ್ಷ್ಮಿ ದೇವಿಯಂತೆ ಮಲಗಿರುವ ಮಗುವಿನ ಒಂದು ಚಿತ್ರವನ್ನು ರಚಿಸಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿ ಮೆಚ್ಚುಗೆಗಳು ಹರಿದು ಬರುತ್ತಿವೆ.

Leave a Reply

Your email address will not be published.