ಡ್ರ’ ಗ್ಸ್ ಪ್ರಕರಣ: ಆರ್ಯನ್ ಇನ್ನೂ ಮಗು, ಅವನಿಗೆ ಉಸಿರಾಡಲು ಬಿಡಿ ಎಂದ ಸುನೀಲ್ ಶೆಟ್ಟಿ

Written by Soma Shekar

Published on:

---Join Our Channel---

ಮುಂಬೈ ನಗರದ ಸಾಗರ ತೀರದಲ್ಲಿ ಐಶಾರಾಮೀ ಕ್ರೂಸ್ ಹಡಗಿನಲ್ಲಿ ನಡೆದಂತಹ ಒಂದು ರೇವ್ ಪಾರ್ಟಿಯ ವಿಷಯ ಇದೀಗ ಮಾದ್ಯಮಗಳಲ್ಲಿ ದೊಡ್ಡ ಸದ್ದು ಮಾಡಿದೆ. ಇದಕ್ಕೆ ಪ್ರಮುಖ ಕಾರಣ, ಕ್ರೂಸ್ ನ ರೇವ್ ಪಾರ್ಟಿಯಲ್ಲಿ ಮಾ ದ ಕ ವಸ್ತುಗಳ ಬಳಕೆ ನಡೆದಿದೆ ಎನ್ನುವ ನಿಖರವಾದ ಮಾಹಿತಿಯ ಮೇರೆಗೆ ಎನ್ ಸಿ ಬಿ ( ಮಾ ದ ಕ ವಸ್ತು ನಿಯಂತ್ರಣ ಮಂಡಳಿ ) ಕ್ರೂಸ್ ಮೇಲೆ ನಡೆಸಿದ ಧಾ ಳಿ ಯಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ ಕಿಂಗ್ ಖಾನ್ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಎನ್ ಸಿ ಬಿ ಬಲೆಗೆ ಬಿದ್ದಿದ್ದು, ಇದೀಗ ಸಂಚಲನ ಸೃಷ್ಟಿಸಿದೆ.

ಶಾರೂಖ್ ಖಾನ್ ಮಗನನ್ನು ಎನ್ ಸಿ ಬಿ ವಿಚಾರಣೆಯನ್ನು ನಡೆಸಿರುವ ಹಿನ್ನೆಲೆಯಲ್ಲಿ ನಟ ಶಾರೂಖ್ ಖಾನ್ ತಮ್ಮ ಸಿನಿಮಾ ಚಿತ್ರೀಕರಣ ವನ್ನು ರದ್ದು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರ ರಾಷ್ಟೀಯ ಮಾದ್ಯಮಗಳಿಂದ ಹಿಡಿದು,‌‌ ಸೋಶಿಯಲ್ ಮೀಡಿಯಾಗಳ ವರೆಗೂ ಎಲ್ಲೆಲ್ಲೂ ಸಹಾ ಈ ವಿಷಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶಾರೂಖ್ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡಲಾಗುತ್ತಿದ್ದು, ಈ ಬೆಳವಣಿಗೆ ಡ್ರ ಗ್ಸ್ ಪ್ರಕರಣದಲ್ಲಿ ಅನಿರೀಕ್ಷಿತ ತಿರುವನ್ನು ನೀಡಿದೆ.

ನಟನ ಮಗನು ಎನ್ ಸಿ ಬಿ ವಿಚಾರಣೆಗೆ ಒಳ ಪಟ್ಟ ಬೆನ್ನಲ್ಲೇ ನೆಟ್ಟಿಗರು ಈ ವಿಚಾರದಲ್ಲಿ ಶಾರೂಖ್ ಖಾನ್ ಅವರನ್ನು ನೇರವಾಗಿ ಎಳೆದು ತಂದಿದ್ದಾರೆ. ಅಲ್ಲದೇ ಬಹಳಷ್ಟು ಜನರು ಮಗನನ್ನು ಬೆಳೆಸುವ ರೀತಿ ಇದೇನಾ?? ಎಂದು ಟೀಕೆಗಳನ್ನು ಮಾಡುತ್ತಾ ಪ್ರಶ್ನೆಯನ್ನು ಮಾಡಿದ್ದಾರೆ. ಶಾರೂಖ್ ಖಾನ್ ಹಾಗೂ ಅವರ ಮಗನ ವಿಚಾರವಾಗಿ ನೆಟ್ಟಿಗರು ಮಾಡಿರುವ ಟೀಕೆ ಟಿಪ್ಪಣಿಗಳಿಂದ ಅಸಾಮಾಧಾನಗೊಂಡ ಮತ್ತೊಬ್ಬ ನಟ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಬಾಲಿವುಡ್ ನ ಹಿರಿಯ ನಟ ಸುನೀಲ್ ಶೆಟ್ಟಿ ಅವರು ಶಾರೂಖ್ ಖಾನ್ ಬಗ್ಗೆ ನೆಟ್ಟಿಗರು ಮಾಡುತ್ತಿರುವ ಟೀಕೆಗಳ ಬಗ್ಗೆ ಅಸಮಾಧಾನ ಹೊರಹಾಕುತ್ತಾ, ಎನ್ ಸಿ ಬಿ ಧಾ ಳಿ ಮಾಡಿದಾಗ, ಮೊದಲು ಕೂಲಂಕಷವಾಗಿ ವಿಚಾರಣೆಯನ್ನು ಮಾಡುತ್ತದೆ. ಆದ್ದರಿಂದಲೇ ಆರ್ಯನ್ ನನ್ನು ವಿಚಾರಣೆ ಮಾಡಲಾಗುತ್ತಿದೆ. ಆರ್ಯನ್ ಇನ್ನೂ ಮಗು. ಅವನಿಗೆ ಉಸಿರಾಡಲು ಬಿಡಿ” ಎಂದು ಮನವಿಯನ್ನು ಮಾಡಿದ್ದಾರೆ.

ತನಿಖೆ ನಡೆಯುತ್ತಿದೆ. ಅದು ಮುಗಿದು ಎಲ್ಲಾ ವಿಚಾರಗಳು ಹೊರ ಬರಲಿ ಅಲ್ಲಿಯವರೆಗೂ ಸಮಾಧಾನದಿಂದ ಇರಿ ಎನ್ನುವ ಮಾತನ್ನು ಸುನೀಲ್ ಶೆಟ್ಟಿಯವರು ಹೇಳಿದ್ದಾರೆ. ಶಾರೂಖ್ ಖಾನ್ ಮಗನ ಸಹಿತ ಇನ್ನೂ ಹತ್ತು ಜನರನ್ನು ವಿಚಾರಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳಿಲ್ಲದೇ ತಮ್ಮ ಚಾರ್ಮ್ ಕುಗ್ಗುತ್ತಿರುವ ಬಗ್ಗೆ ಆಲೋಚನೆಯಲ್ಲಿ ಇದ್ದ ಶಾರೂಖ್ ಗೆ ಈಗ ಮಗನ ಈ ವಿಚಾರ ಮುಜುಗರ ಉಂಟು ಮಾಡಿದೆ‌.

Leave a Comment