ಡ್ರ ಗ್ಸ್ ಪ್ರಕರಣದ ವಿಚಾರಣೆಯಿಂದ ಆರ್ಯನ್ ಖಾನ್ ಎಸ್ಕೇಪ್: ಅದಕ್ಕೆ ಕೊಟ್ಟ ಕಾರಣ ಏನು ಗೊತ್ತಾ??

Written by Soma Shekar

Published on:

---Join Our Channel---

ಐಶಾರಾಮೀ ಕ್ರೂಸ್ ಹಡಗಿನಲ್ಲಿ ಡ್ರ ಗ್ಸ್ ರೇವ್ ಪಾರ್ಟಿಯಲ್ಲಿ ತೊಡಗಿದ್ದನೆಂಬ ಆರೋಪದ ಮೇಲೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಎನ್ ಸಿ ಬಿ ಬಂಧಿಸಿದ್ದ ವಿಚಾರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕೆಲವೇ ದಿನಗಳ ಹಿಂದೆಯಷ್ಟೇ ಆರ್ಯನ್ ಖಾನ್ ಗೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆ ಹೊಂದಿ ತನ್ನ ಮನೆಯನ್ನು ಸೇರಿದ್ದಾನೆ ಆರ್ಯನ್ ಖಾನ್. ಮಗ ಮನೆಗೆ ಬಂದ ಖುಷಿಯಲ್ಲಿ ಶಾರೂಖ್ ಹಾಗೂ ಪತ್ನಿ ಗೌರಿ ಖಾನ್ ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡಿದ್ದು, ಮನೆಯನ್ನು ಅಲಂಕರಿಸಿದ್ದ ಫೋಟೋ ಗಳು ವೈರಲ್ ಆಗಿವೆ‌.

ಇನ್ನು ಆರ್ಯನ್ ಖಾನ್ ಗೆ ಜಾಮೀನು ನೀಡಿದ ನಂತರವೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಎನ್ ಸಿ ಬಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ ನವೆಂಬರ್ 7 ರಂದು ನಡೆಯಬೇಕಿದ್ದ ವಿಚಾರಣೆಗೆ ಆರ್ಯನ್ ಖಾನ್ ಹಾಜರಾಗಿಲ್ಲ.‌ ಅಲ್ಲದೇ ತಾನೇಕೆ ವಿಚಾರಣೆಗೆ ಹಾಜರಾಗಿಲ್ಲ ಎನ್ನುವುದಕ್ಕೆ ಆರ್ಯನ್ ಖಾನ್ ಅಧಿಕಾರಿಗಳಿಗೆ ಕಾರಣವನ್ನು ಸಹಾ ನೀಡಿದ್ದಾನೆ ಎನ್ನಲಾಗಿದೆ.

ಡಿಡಿಜಿ ಎನ್ ಸಿ ಬಿ ಸಂಜಯ್ ಸಿಂಗ್ ಅವರು ಆರ್ಯನ್ ಖಾನ್ ಗೆ ವಿಚಾರಣೆಗೆ ಹಾಜರಾಗುವಂತೆ ಕರೆ ನೀಡಿದ್ದರು. ಆದರೆ ಆರ್ಯನ್ ಖಾನ್ ತನಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ, ಈ ಕಾರಣಕ್ಕೆ ತಾನು ವಿಚಾರಣೆಗೆ ಹಾಜರಾಗುತ್ತಿಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಕೊರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ವಿಚಾರಣೆಗೆ ಬೇರೊಂದು ದಿನಾಂಕ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆನ್ನಲಾಗಿದೆ.

ಆರ್ಯನ್ ತಿಳಿಸಿದ ಕಾರಣ ಹಾಗೂ ಇಟ್ಟ ಬೇಡಿಕೆಯನ್ನು ಪುರಸ್ಕರಿಸಿರುವ ಎನ್ ಸಿ ಬಿ ಅಧಿಕಾರಿಗಳು ಪರಿಸ್ಥಿತಿಯನ್ನು ನೋಡಿಕೊಂಡು, ಮುಂದಿನ ವಿಚಾರಣೆಯ ದಿನಾಂಕವನ್ನು ನಿಗಧಿ ಪಡಿಸಿ ಮಾಹಿತಿಯನ್ನು ನೀಡಲು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಆರ್ಯನ್ ಬಂ ಧ ನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಧಿಕಾರಿ ಸಮೀರ್ ವಾಂಖೇಡೆ ಅವರಿಗೆ ಈ ಪ್ರಕರಣದ ವಿಚಾರಣೆಯ ತಂಡದಿಂದ ಕೊಕ್ ನೀಡಲಾಗಿದ್ದು, ಅವರ ಮೇಲೆ ತನಿಖೆ ಆರಂಭವಾಗಿದೆ.

Leave a Comment