ಡ್ರ ಗ್ಸ್ ಪ್ರಕರಣದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹೋದರನ ಮಗಳು!! ಒಟ್ಟು 150 ಮಂದಿ ಅರೆಸ್ಟ್

Entertainment Featured-Articles News

ಮಾ ದ ಕ ವಸ್ತುಗಳು ಹಾಗೂ ಸಿನಿಮಾ ರಂಗದ ನಡುವೆ ಅವಿನಾಭಾವವಾದ ಸಂಬಂಧ ಇದೆಯೇನೋ ಎನ್ನುವಂತಹ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ಆಗಾಗ ಕಂಡು ಬರುತ್ತಲೇ ಇವೆ. ಡ್ರ ಗ್ಸ್ ವಿಚಾರವಾಗಿ ಸ್ಯಾಂಡಲ್ವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ಆದ ಸುದ್ದಿಗಳು ಎಲ್ಲರಿಗೂ ತಿಳಿದೇ ಇದೆ. ಇವೆಲ್ಲವುಗಳ ಬೆನ್ನಲ್ಲೇ ಪ್ರಸ್ತುತ ಒಂದು ಹೊಸ ಬೆಳವಣಿಗೆಯಲ್ಲಿ ಮತ್ತೊಮ್ಮೆ ಡ್ರ ಗ್ಸ್ ವಿಚಾರದಲ್ಲಿ ಸಿನಿಮಾ ರಂಗದವರು ಸದ್ದು, ಸುದ್ದಿಯನ್ನು ಮಾಡಿದ್ದಾರೆ. ಈ ಬಾರಿ ಮತ್ತೊಮ್ಮೆ ಟಾಲಿವುಡ್ ಅಥವಾ ತೆಲುಗು ಚಿತ್ರರಂಗದಲ್ಲಿನ ಡ್ರ ಗ್ಸ್ ವಿಚಾರ ಚರ್ಚೆಯಾಗುತ್ತಿದೆ.

ಹೈದರಾಬಾದ್ ಪಬ್ ವೊಂದರಲ್ಲಿ ಸಿನಿಮಾರಂಗದವರನ್ನು ಸೇರಿದಂತೆ, ವಿಐಪಿಗಳು ಹಾಗೂ ರಾಜಕಾರಣಿಗಳ ಕುಟುಂಬಗಳಿಗೆ ಸಂಬಂಧಪಟ್ಟಂತಹ ಒಟ್ಟು 150ಮಂದಿಯನ್ನು ಪೊಲೀಸರು ಬಂ ಧಿ ಸಿದ್ದಾರೆ. ಹೈದರಾಬಾದ್ ನಗರದ ಪ್ರತಿಷ್ಠಿತ ಏರಿಯಾ, ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ವಿಐಪಿ ಗಳು ವಾಸವಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಜಾರ ಹಿಲ್ಸ್ ನಲ್ಲಿ ಪ್ರಮುಖ ಹೋಟೆಲ್ ಆಗಿರುವ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ದಿ ಮಿಂಕ್ ಪಬ್ ಮೇಲೆ ಪೊಲೀಸರು ನಡೆಸಿದಂತಹ ದಾ ಳಿ ಯ ವೇಳೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮಾ ದ ಕ ವಸ್ತುಗಳು ದೊರೆತಿವೆ. ಈ ವೇಳೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಖ್ಯಾತಿಯ ಚಿರಂಜೀವಿ ಅವರ ಸಹೋದರ ಜನಪ್ರಿಯ ನಟ ಹಾಗೂ ನಿರ್ಮಾಪಕ ನಾಗಬಾಬು ಅವರ ಮಗಳು ನಿಹಾರಿಕಾ ಕೊನಿಡೇಲಾ ಅಲ್ಲಿ ಇದ್ದರು ಎಂದು ಅವರನ್ನು ಪೊಲೀಸರು ಬಂ ಧಿ ಸಿದ್ದರು.

ಇದಲ್ಲದ ತೆಲುಗು ಬಿಗ್ ಬಾಸ್ ವಿನ್ನರ್ ರಾಹುಲ್ ಸಿಪ್ಲಿಗಂಜ್ ಕೂಡಾ ಪಾರ್ಟಿಯಲ್ಲಿ ಹಾಜರಿದ್ದರು ಎಂದು ಹೇಳಲಾಗಿದ್ದು, ಪೊಲೀಸರು ಅವರನ್ನು ಕೂಡಾ ತಮ್ಮ ವಶಕ್ಕೆ ಪಡೆದಿದ್ದರು. ಇದಲ್ಲದೇ ಸೇವೆಯಲ್ಲಿರುವ ಒಬ್ಬ ಐಪಿಎಸ್ ಅಧಿಕಾರಿಯ ಮಗಳು ಇದ್ದರು, ಪ್ರಮುಖ ರಾಜಕಾರಣಿಗಳ ಮಕ್ಕಳು ಇದ್ದರು ಎನ್ನಲಾಗಿದೆ. ಇನ್ನು ತಮ್ಮ ಮಗಳು ಬಂಧಿತರಾದ ವಿಷಯ ಸುದ್ದಿಯಾಗುತ್ತಲೇ, ನಟ ನಾಗಬಾಬು ಅವರು ವಿಡಿಯೋ ಸಂದೇಶವನ್ನು ನೀಡುವ ಮೂಲಕ ತಮ್ಮ ಮಗಳಿಗೂ ಹಾಗೂ ಡ್ರ ಗ್ಸ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಆ ಸಮಯದಲ್ಲಿ ಮಗಳು ಅಲ್ಲಿದ್ದುದೇ ಸಮಸ್ಯೆಯಾಗಿದ್ದು ಅಷ್ಟೇ ಎಂದಿದ್ದಾರೆ ನಾಗಬಾಬು. ಪಬ್ ಅನುಮತಿಸಲಾದ ಅವಧಿಗಿಂತ ಹೆಚ್ಚು ಹೊತ್ತು ಕಾರ್ಯನಿರತವಾಗಿದ್ದು, ಇದೇ ಕಾರಣದಿಂದ ಅಲ್ಲಿದ್ದವರನ್ನು ಪೊ ಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೆ ತಮ್ಮ ಮಗಳಿಗೆ ಒಂದು ಸಣ್ಣ ಪರೀಕ್ಷೆಯನ್ನು ಮಾಡಲಾಗಿತ್ತು, ಡ್ರ ಗ್ಸ್ ಹಾಗೂ ತಮ್ಮ ಮಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರೇ ಸ್ಪಷ್ಟನೆ ನೀಡಿದ್ದಾರೆ ಎನ್ನುವ ಮಾತನ್ನು ನಾಗಬಾಬು ಹೇಳಿದ್ದಾರೆ.

Leave a Reply

Your email address will not be published.