ಡ್ರ” ಗ್ಸ್ ಕೇಸ್ ವಿಚಾರದಲ್ಲಿ ಮತ್ತೆ ಸಂಕಷ್ಟ ಸಿಲುಕಲಿದ್ದಾರೆಯೇ ರಾಗಿಣಿ ಮತ್ತು ಸಂಜನಾ? ಲ್ಯಾಬ್ ರಿಪೋರ್ಟ್ ನಲ್ಲಿ ಏನಿದೆ??
ಕಳೆದ ವರ್ಷ ಸ್ಯಾಂಡಲ್ವುಡ್ ನಲ್ಲಿ ಡ್ರ” ಗ್ಸ್ ಪ್ರಕರಣ ಭಾರೀ ಸದ್ದು ಸುದ್ದಿ ಮಾಡಿದಂತಹ ವಿಷಯವಾಗಿತ್ತು. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರೂ ಸಹಾ ಈ ಪ್ರಕರಣದಲ್ಲಿ ಸಿಲುಕಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಅನಂತರ ನಡೆದ ಬೆಳವಣಿಗೆಗಳು ಎಲ್ಲವೂ ಸಹ ಜನರಿಗೆ ತಿಳಿದೇ ಇದೆ. ಈ ಪ್ರಕರಣದಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದ ಇಬ್ಬರೂ ನಟಿಯರು ಅನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಹೊರಗೆ ಅವರು ತಮ್ಮ ತಮ್ಮ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆ ಫೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಆದರೆ ಇದೀಗ ಮತ್ತೊಮ್ಮೆ ಈ ಇಬ್ಬರು ನಟಿಯರಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.
ಹೌದು ಮಾದ್ಯಮವೊಂದಕ್ಕೆ ಈ ಇಬ್ಬರು ನಟಿಯರು ಸಹಾ ಮಾ ದ ಕ ವಸ್ತು ಸೇವನೆ ಮಾಡಿರುವ ವಿಷಯವಾಗಿ ಸಾಕ್ಷ್ಯ ಗಳು ಲಭ್ಯವಾಗಿದೆ ಎನ್ನಲಾಗಿದೆ. ಹೈದರಾಬಾದ್ ನ ಸಿಎಸ್ಎಫ್ಎಲ್ ಲ್ಯಾಬ್ ನೀಡಿರುವಂತಹ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ ಎನ್ನಲಾಗಿದೆ. ಕಳೆದ ವರ್ಷ ಈ ಇಬ್ಬರು ನಟಿಯರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ವೇಳೆಯಲ್ಲಿ ಅವರ ತಲೆಗೂದಲನ್ನು ಪಡೆದು ಡ್ರ” ಗ್ಸ್ ಸೇವನೆಯ ಬಗ್ಗೆ ಪತ್ತೆ ಹಚ್ಚಲು ಅದನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮೊದಲು ಮಾದರಿ ಸಂಗ್ರಹ ಸರಿಯಾಗಿ ಆಗದ ಕಾರಣ ಅದು ತಿರಸ್ಕೃತವಾಗಿತ್ತು. ಆದರೆ ಎರಡನೇ ಬಾರಿ ಕಳುಹಿಸಿದ ಮಾದರಿಯ ಆಧಾರದಲ್ಲಿ ದೃಢವಾದ ವರದಿ ಈಗ ಬಂದಿದೆ.
ಸಾಮಾನ್ಯವಾಗಿ ಆ ರೋ ಪಿಗಳು ಡ್ರ” ಗ್ಸ್ ಸೇವನೆಯ ಪ್ರಕರಣ ಹೊರಗೆ ಬರುತ್ತಿದ್ದಂತೆ ವರ್ಷಾನುಗಟ್ಟಲೆ ತಲೆ ಮರೆಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಆದ್ದರಿಂದಲೇ ಮಾ ದ ಕ ವಸ್ತು ಸೇವನೆ ಮಾಡಿರುವುದನ್ನು ದೃಢ ಪಡಿಸಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು ಎನ್ನಲಾಗಿದೆ. ಆದ್ದರಿಂದಲೇ ದೃಢವಾದ ಮಾಹಿತಿಯನ್ನು ಪಡೆಯುವುದಕ್ಕಾಗಿ ನಟಿ ಮಣಿಯರ ತಲೆ ಕೂದಲ ಮಾದರಿಯನ್ನು ಸಂಗ್ರಹಿಸಿ ಅದನ್ನು ಹೈದರಾಬಾದಿನ ಸಿಎಸ್ಎಫ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ. ಪ್ರಯೋಗಾಲಯದಿಂದ ಬಂದಿರುವ ವರದಿಯು ಈಗ ನಟಿ ಮಣಿಯರಿಗೆ ಮತ್ತೊಂದು ಸಂ ಕಷ್ಟ ತಂದೊಡ್ಡಬಹುದು ಎನ್ನಲಾಗುತ್ತಿದೆ.