ಡೇಟಿಂಗ್ ಗೆ ಶ್ರೀಮಂತ ಮುದುಕ ಬೇಡ: ಮಿಸ್ ಯೂನಿವರ್ಸ್ ಹರ್ನಾಜ್ ಯಾರ ಜೊತೆ ಡೇಟಿಂಗ್ ಗೆ ಸಿದ್ಧ ಅಂದ್ರು??

Entertainment Featured-Articles News
78 Views

ಮಿಸ್ ಯೂನಿವರ್ಸ್ ಪಟ್ಟ ಗೆದ್ದ ಭಾರತೀಯ ಸುಂದರಿ ಹರ್ನಾಜ್‌ಸಂಧು ಸದ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಜನರ ಗಮನ ಸೆಳೆದಿರುವ ಜನಪ್ರಿಯ ತಾರೆಯಾಗಿದ್ದಾರೆ. ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ಮಿಸ್ ಯೂನಿವರ್ಸ್ ಪಟ್ಟ ದಕ್ಕಿರುವುದರಿಂದ ಹರ್ನಾಜ್ ಸಂಧು ಅವರ ಗೆಲುವು ಬಹಳ ವಿಶೇಷ ಎನಿಸಿದೆ. ಇನ್ನು ಹರ್ನಾಜ್ ಸಂಧು ಅವರ ಸಂದರ್ಶನ ಪಡೆಯಲು ಮಾದ್ಯಮಗಳು ಸಹಾ ಹಾತೊರೆಯುತ್ತಿವೆ. ಇಂತಹ ಒಂದು ಸಂದರ್ಶನದಲ್ಲಿ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ತಮ್ಮ ಡೇಟಿಂಗ್ ಬಗ್ಗೆ ಬಿಂದಾಸ್ ಆಗಿ ಮಾತನಾಡಿದ್ದಾರೆ.

ಹರ್ನಾಜ್ ಅವರು ತಾನು ವಯಸ್ಸಾದ ಶ್ರೀಮಂತನ ಜೊತೆಗೆ ಯಾವುದೇ ಕಾರಣಕ್ಕೂ ಡೇಟಿಂಗ್ ನಡೆಸುವುದಿಲ್ಲ. ಬದಲಿಗೆ ಕಷ್ಟದಲ್ಲಿ ಇರುವ ಯುವಕನೊಡನೆ ಬೇಕಾದರೆ ಡೇಟಿಂಗ್ ಮಾಡುತ್ತೇನೆ, ಏಕೆಂದರೆ ನಾನು ಕಷ್ಟಪಟ್ಟಿದ್ದೇನೆ ಮತ್ತು ಮುಂದೆಯೂ ಕಷ್ಟ ಪಡುತ್ತೇನೆ. ಒಬ್ಬ ಮನುಷ್ಯ ಜೀವನದಲ್ಲಿ ಹೋರಾಟ ಮಾಡುವುದು ಮುಖ್ಯ ಎಂದು ನಾನು ನಂಬುತ್ತೇನೆ. ಆಗ ಮಾತ್ರ ನಾವು ನಮ್ಮ ಸಾಧನೆಗಳಿಗೆ ಬೆಲೆಯನ್ನು ನೀಡಲು ಸಾಧ್ಯ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಇನ್ನು ಈಗಾಗಲೇ ಪಂಜಾಬಿ ಭಾಷೆಯಲ್ಲಿ ನಟಿಸಿರುವ ಹರ್ನಾಜ್ ಸಂಧು ಅವರು ಬಾಲಿವುಡ್ ನಲ್ಲಿ ಸಹಾ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ತನ್ನ ಗೆಲುವಿನ ಕುರಿತಾಗಿ ಮಾತನಾಡಿದ ಹರ್ನಾಜ್ ನಾನು ತುಂಬಾ ಅದೃಷ್ಟಶಾಲಿ, ನನ್ನ ಪ್ರಮಾಣಿಕತೆ ಹಾಗೂ ಪರಿಶ್ರಮಕ್ಕೆ ಪ್ರತಿಫಲ ದೊರೆತಿದೆ. ದಿ ಮಿಸ್ ಯೂನಿವರ್ಸ್ ಈಸ್ ಎಂದು ಭಾರತದ ಹೆಸರು ಹೇಳಿದಾಗ ನಾನು ಪುಳಕಗೊಂಡೆ, ನನ್ನ ಕಣ್ಣಲ್ಲಿ ನೀರು ಬಂದು ಅಳಲು ಪ್ರಾರಂಭಿಸಿದೆ ಎನ್ನುವ ಮಾತುಗಳನ್ನು ಹರ್ನಾಜ್ ಹೇಳಿದ್ದಾರೆ.

Leave a Reply

Your email address will not be published. Required fields are marked *