ಡೆಲ್ಲಿ ಟು ಲಂಡನ್ ಬಸ್ ಪ್ರವಾಸ, 70 ದಿನಗಳು, 18 ದೇಶಗಳಿಗೆ ಭೇಟಿ: ಸುವರ್ಣ ಅವಕಾಶ, ಆದ್ರೆ ದರ ಎಷ್ಟು ಗೊತ್ತಾ?

Entertainment Featured-Articles News Wonder

ವಿದೇಶ ಪ್ರವಾಸ ಮಾಡುವುದು ಅನೇಕರ ಕನಸಾಗಿರುತ್ತದೆ. ಆದರೆ ಈ ಕನಸು ನನಸಾಗಬೇಕಾದರೆ ಶ್ರೀಮಂತರಿಗೆ, ಸೆಲೆಬ್ರಿಟಿಗಳಿಗೆ ಸಾಮಾನ್ಯ ವಿಷಯವಾಗಿರಬಹುದು ಆದರೆ ಸಾಮಾನ್ಯ ಜನರಿಗೆ, ಮದ್ಯಮ ವರ್ಗದವರಿಗೆ ಮಾತ್ರ ಈ ಕನಸು ನನಸಾಗಬೇಕಾದರೆ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ವಿದೇಶ ಪ್ರವಾಸ ಎನ್ನುವುದು ಬಹಳ ದುಬಾರಿ, ವಿಮಾನಗಳಲ್ಲಿ ಪ್ರಯಾಣ ಎಲ್ಲವೂ ಕೂಡಾ ಅಷ್ಟೊಂದು ಸುಲಭ ಖಂಡಿತ ಅಲ್ಲ. ವಿದೇಶ ಪ್ರವಾಸ ಎಂದೊಡನೆ ನೆನಪಾಗುವುದು ವಿಮಾನ ಹಾಗೂ ಅದರ ಖರ್ಚು ವೆಚ್ಚ ಎನ್ನುವುದು ವಾಸ್ತವ.

ಆದರೆ ಇದೀಗ ದೆಹಲಿಯಿಂದ ಲಂಡನ್ ಗೆ ಬಸ್ ನಲ್ಲಿ ಪ್ರಯಾಣ ಮಾಡಬಹುದು!! ಎಂದರೆ ನಿಮಗೆ ಆಶ್ಚರ್ಯ ಆಗಬಹುದು, ಅರೇ ಇದೆಂತ ವ್ಯಂಗ್ಯ ಎನ್ನಬಹುದು, ಆದರೆ ಒಂದು ನಿಮಿಷ ತಾಳ್ಮೆಯಿಂದ ಈ ಆಸಕ್ತಿಕರ ವಿಚಾರವನ್ನು ಪೂರ್ತಿಯಾಗಿ ಓದಿ ನೋಡಿ, ನಿಮ್ಮ ಅಚ್ಚರಿಗೆ ರೆಕ್ಕೆಗಳು ಬಂದು ನಿಮಗೂ ಕೂಡಾ ಈ ಪ್ರವಾಸವನ್ನು ಒಮ್ಮೆ ಏಕೆ ಪ್ರಯತ್ನ ಮಾಡಬಾರದು ಎನ್ನುವ ಆಲೋಚನೆ ಬಂದರೂ ಬರಬಹುದು. ಹಾಗಾದರೆ ಏನು ಈ ಡೆಲ್ಲಿ ಟು ಲಂಡನ್ ಬಸ್ ನಲ್ಲಿ ಪ್ರವಾಸ?? ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಭಾರತದ ಅಡ್ವೆಂಚರ್ಸ್ ಓವರ್ ಲ್ಯಾಂಡ್ ಕಂಪನಿಯು ಭಾರತದ ರಾಜಧಾನಿ ದೆಹಲಿಯಿಂದ ಲಂಡನ್ ವರೆಗೆ ಬಸ್ ನಲ್ಲಿ ಪ್ರಯಾಣ ಮಾಡುವ‌ ಒಂದು ಹೊಸ ಪ್ರವಾಸವನ್ನು ಆರಂಭಿಸುವ ಯೋಜನೆಯನ್ನು ಸಿದ್ಧಪಡಿಸಿದೆ. ದೆಹಲಿಯಿಂದ ಲಂಡನ್ ಗೆ ಪ್ರವಾಸ ಹೊರಡುವ ಬಸ್ ಒಟ್ಟು 70 ದಿನಗಳ ಕಾಲ ಸಂಚಾರವನ್ನು ಮಾಡುತ್ತದೆ. ಈ ಪ್ರವಾಸದ ಅವಧಿಯಲ್ಲಿ ಬಸ್ ಒಟ್ಟು 20 ಸಾವಿರ ಕಿಮೀ ದೂರವನ್ನು ಕ್ರಮಿಸಲಿದ್ದು, ಒಟ್ಟು 18 ದೇಶಗಳನ್ನು ಸುತ್ತಲಿದೆ ಈ ವಿಶೇಷವಾದ ಬಸ್ ಪ್ರವಾಸ.

ಅಡ್ವೆಂಚರ್‌ ಓವರ್ ಲ್ಯಾಂಡ್ ಕಂಪನಿಯು ಬಸ್ ನಲ್ಲಿ ಮಾಡುವ ಈ ವಿದೇಶ ಪ್ರವಾಸದ ಪ್ಯಾಕೇಜ್ ಗೆ ದರವನ್ನು ಸಹಾ ಈಗಾಗಲೇ ನಿಗಧಿ ಮಾಡಿದೆ. ಈ ಪ್ರವಾಸ ಕ್ಕೆ ಒಂದು ಟಿಕೆಟ್ ಬೆಲೆ 15 ಲಕ್ಷ ರೂ.ಗಳು. ಟಿಕೆಟ್, ವೀಸಾ, ವಸತಿ, ಆಹಾರ ಎಲ್ಲವನ್ನೂ ಸೇರಿಸಿ ಈ ದರದಲ್ಲೇ ಪ್ರವಾಸ ಮುಗಿಸಲು ಕಂಪನಿಯು ಪ್ಲಾನ್ ಮಾಡುವ ಮೂಲಕ ಪ್ರವಾಸಿಗರ ಮುಂದೆ ಒಂದು ಅದ್ಭುತ ವಿದೇಶಿ ಪ್ರವಾಸದ ಅವಕಾಶವನ್ನು ಇರಿಸಿದೆ. ಈ ಪ್ರವಾಸಕ್ಕೆ ಬಳಸುವ ಬಸ್ ನಲ್ಲಿ ಕೇವಲ 20 ಸೀಟುಗಳು ಮಾತ್ರವೇ ಇರುತ್ತದೆ.

ಪ್ರತಿಯೊಬ್ಬ ಪ್ರಯಾಣಿಕನಿಗೂ ಸಹಾ ಒಂದು ಪ್ರತ್ಯೇಕ ಕ್ಯಾಬಿನ್ ಇರುತ್ತದೆ. ಇಂತಹ ಬಸ್ ಪ್ರವಾಸ ಇದೇ ಮೊದಲಲ್ಲ, 1976 ರಲ್ಲಿ ಬ್ರಿಟನ್ ಮೂಲದ ಆಲ್ಬರ್ಟ್ ಟೂರ್ಸ್ ಕಂಪನಿಯು ಕೊಲ್ಕತ್ತಾದಿಂದ ಲಂಡನ್ ಗೆ ಇಂತಹುದೇ ಒಂದು ಪ್ರವಾಸವನ್ನು ಏರ್ಪಾಟು ಮಾಡಿತ್ತು. ಆದರೆ ರಸ್ತೆಗಳಲ್ಲಿ ಎದುರಾದ ಕೆಲವು ಸಮಸ್ಯೆಗಳ ಪರಿಣಾಮವಾಗಿ ಈ ಪ್ರವಾಸವನ್ನು ಅನಂತರ ರದ್ದು ಮಾಡಲಾಗಿತ್ತು. ಈಗ ಅಡ್ವೆಂಚರ್‌ ಓವರ್ ಲ್ಯಾಂಡ್ ಕಂಪನಿ ಮತ್ತೊಮ್ಮೆ ಇಂತಹ ಟೂರ್ ಪ್ಲಾನ್ ಮಾಡಿದ್ದು, ಯಾವ ಮಟ್ಟಕ್ಕೆ ಯಶಸ್ಸು ಪಡೆಯಲಿದೆ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *