“ಡಿವೋರ್ಸ್ ಗೆ ಕಾರಣ ಅವನೇ ” ಕರಣ್ ಶೋ ನಲ್ಲಿ ಶಾಕಿಂಗ್ ಸತ್ಯ ಹೇಳಿದ ನಟಿ ಸಮಂತಾ, ಇಷ್ಟಕ್ಕೂ ಯಾರು ಆ ಅವನು??

Entertainment Featured-Articles Movies News

ಬಾಲಿವುಡ್ ನ ಬಹು ಚರ್ಚಿತ ಹಾಗೂ ವಿ ವಾ ದಿತ ಸೆಲೆಬ್ರಿಟಿ ಚಾಟ್ ಶೋ ಎಂದರೆ ತಟ್ಟನೆ ಸಿಗುವ ಉತ್ತರ ಕಾಫಿ ವಿತ್ ಕರಣ್. ಬಾಲಿವುಡ್ ನ ಜನಪ್ರಿಯ ನಿರ್ಮಾಪಕ, ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಈ ಶೋ ನಲ್ಲಿ ಸೆಲೆಬ್ರಿಟಿಗಳನ್ನು ಎಲ್ಲಾ ತರಹದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕರಣ್ ಜೋಹರ್ ಕೇಳುವ ಪ್ರಶ್ನೆಗಳು ಯಾವ ಮಟ್ಟಕ್ಕೆ ಬೋಲ್ಡ್ ಆಗಿರುತ್ತವೆ ಎಂದರೆ ಕೆಲವೊಮ್ಮೆ ನಟಿಯರು ಉತ್ತರ ಹೇಳಲು ನಾಚಿಕೆ ಪಡುತ್ತಾ ಅಥವಾ ಮುಜುಗರದಿಂದ ಮೌನಕ್ಕೆ ಜಾರಿ ಬಿಡುತ್ತಾರೆ. ಖಾಸಗಿ ವಿಷಯಗಳು ಇಲ್ಲಿ ಪ್ರಶ್ನೋತ್ತರದ ಭಾಗವಾಗಿರುತ್ತದೆ.

ಇನ್ನು ಈ ಬಾರಿ ಕಾಫಿ ವಿತ್ ಕರಣ್ ನ ಏಳನೇ ಸೀಸನ್ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದೆ. ಶೋ ಆರಂಭದಿಂದಲೇ ಸಾಕಷ್ಟು ಸದ್ದು, ಸುದ್ದಿಯಾಗುತ್ತಿದೆ. ಎಲ್ಲೆಲ್ಲೂ ಈ ಶೋ ನದ್ದೇ ಮಾತು. ಈ ಬಾರಿ ವಿಶೇಷ ಎನ್ನುವಂತೆ ದಕ್ಷಿಣ ಜನಪ್ರಿಯ ನಟಿ ಸಮಂತಾ ಕೂಡಾ ಈ ಶೋ ಗೆ ಆಹ್ವಾನ ಪಡೆದ ಸೆಲೆಬ್ರಿಟಿ ಆಗಿದ್ದು, ನಟ ಅಕ್ಷಯ್ ಕುಮಾರ್ ಜೊತೆಗೆ ಸಮಂತಾ ಶೋ ಗೆ ಎಂಟ್ರಿ ನೀಡಿದ್ದು, ಈ ವೇಳೆ ಅಕ್ಷಯ್ ಕುಮಾರ್ ಸಮಂತಾರನ್ನು ಎತ್ತಿಕೊಂಡು ಶೋ ಗೆ ಬಂದ ಪ್ರೋಮೋ ಭರ್ಜರಿ ವೈರಲ್ ಆಗಿ, ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಈಗ ಅದರ ಬೆನ್ನಲ್ಲೇ ಹೊಸ ವಿಚಾರವೊಂದು ಇನ್ನೂ ಹೆಚ್ಚು ಸುದ್ದಿಯಾಗಿದೆ. ಶೋ ನಲ್ಲಿ ಸಮಂತಾ ಮುಂದೆ ಸಾಕಷ್ಟು ಪ್ರಶ್ನೆಗಳನ್ನು ಇಟ್ಟಿರುವ ಕರಣ್ ಅತಿ ಪ್ರಮುಖವಾದ ವಿಚಾರ, ಸಮಂತಾ ವಿಚ್ಛೇದನದ ವಿಚಾರವನ್ನು ಕುರಿತಾಗಿ ಕೂಡಾ ಪ್ರಶ್ನೆಗಳನ್ನು ಮಾಡಿದ್ದಾರೆ. ಸಮಂತಾ ಬದುಕಿನಲ್ಲಿ ವಿಚ್ಚೇದನ ಎನ್ನುವ ಬಿರುಗಾಳಿ ಎದ್ದಿದ್ದು ಯಾವಾಗ? ಮೊದಲು ವಿಚ್ಚೇದನ ನೀಡಲು ಮುಂದಾಗಿದ್ದು ಯಾರು ? ಎನ್ನುವ ಪ್ರಶ್ನೆಗಳನ್ನು ಕರಣ್ ಜೋಹರ್ ಸಮಂತಾ ಮುಂದೆ ಇಟ್ಟಿದ್ದಾರೆ. ಇದುವರೆಗೂ ಸಮಂತಾ ತಮ್ಮ ವಿಚ್ಚೇದನದ ಕಾರಣ ಎಲ್ಲೂ ಬಹಿರಂಗ ಪಡಿಸಿಲ್ಲ ಎನ್ನುವುದು ಸತ್ಯ.

ಬಿಡುಗಡೆ ಆಗಿರುವ ಪ್ರೊಮೋದಲ್ಲಿ ಡಿವೋರ್ಸ್ ಗೆ ಅವನೇ ಕಾರಣ ಎಂದು ಸಮಂತಾ ಹೇಳಿರುವುದು ಕಂಡಿದೆ. ಆ ಅವನು ಯಾರು? ನಟಿ ಸಮಂತಾ ಯಾರ ಬಗ್ಗೆ ಹೇಳಲು ಹೊರಟಿದ್ದಾರೆ ಎನ್ನುವುದನ್ನು ತಿಳಿಯಲು ಈಗ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಸಹಾ ತಿಳಿಯಲು ಬಯಸಿದ್ದು, ಆ ಅವನು ಸಮಂತಾ ಅವರ ಪತಿಯೋ ಅಥವಾ ಸಮಂತಾ ಬೇರೆ ಯಾರಾದರೂ ವ್ಯಕ್ತಿಯ ಉಲ್ಲೇಖ ಮಾಡಲಿದ್ದಾರೆಯೋ ಎಪಿಸೋಡ್ ನೋಡುವ ವರೆಗೂ ಉತ್ತರ ಸಿಗುವುದಿಲ್ಲ. ಒಟ್ಟಾರೆ ಪ್ರೋಮೋ ಕುತೂಹಲ ಹೆಚ್ಚಿಸಿದೆ.

Leave a Reply

Your email address will not be published.