ಡಿವೋರ್ಸ್ ಆದ್ಮೇಲೆ ಮೈ ತೋರಿಸೋದು ಹೆಚ್ಚಾಗಿದೆ: ನಟಿ ಸಮಂತಾ ಮೇಲೆ ನೆಟ್ಟಿಗರ ಈ ಸಿಟ್ಟು ಎಷ್ಟು ಸರಿ??
ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿರುವ ನಟಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬ್ಯುಸಿಯಾಗಿರುವ ಸಮಂತಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ನಟಿ ಸಮಂತಾ ಹಳದಿ ಬಣ್ಣದ ಒಂದು ಹೊಸ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದು ಎಂದಿನಂತೆ ಈ ಫೋಟೋ ಸಹಾ ವೈರಲ್ ಆಗಿದೆ. ನಟಿಯನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ನೀಡಿದರೆ ಇದೇ ವೇಳೆ ಅನೇಕ ಮಂದಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅಲ್ಲದೇ ಅನೇಕರು ನಟಿಯ ನಡೆಯನ್ನು ಪ್ರಶ್ನೆ ಮಾಡುವಂತೆ, ಟೀಕಿಸುವಂತೆ ನಾರುಗಳನ್ನು ಆಡುತ್ತಿದ್ದು, ಸಮಂತಾ ಬೋಲ್ಟ್ ಲುಕ್ ನೋಡಿ ಸಿಟ್ಟಾಗಿದ್ದಾರೆ. ಇದಕ್ಕೆ ಅವರ ಕಡೆಯಿಂದ ಕಾರಣ ಕೂಡಾ ನೀಡಿದ್ದಾರೆ.
ನಟಿ ಸಮಂತಾ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ನಂತರ ಮತ್ತು ನಾಗಚೈತನ್ಯ ಜೊತೆಗೆ ವೈವಾಹಿಕ ಸಂಬಂಧದಲ್ಲಿ ಇರುವಾಗ ಬಹಳ ಸರಳವಾದ ಡ್ರೆಸ್ ಮತ್ತು ಸೀರೆಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡು ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಿಲ್ಲ. ಸಣ್ಣ ಸಣ್ಣ ಈವೆಂಟ್ ಅಥವಾ ಪಾರ್ಟಿಗಳಿಗೂ ಸಹಾ ನಟಿ ಸಖತ್ ಬೋಲ್ಡ್ ಆಗಿ ಸಿದ್ಧವಾಗುತ್ತಾರೆ, ಬೋಲ್ಡ್ ಲುಕ್ ನಲ್ಲೇ ಗಮನ ಸೆಳೆಯುತ್ತಾರೆ. ಈಗ ಅದನ್ನು ಗಮನಿಸಿರುವ ನೆಟ್ಟಿಗರು ವಿಚ್ಚೇದನದ ನಂತರ ನಟಿ ಸಮಂತಾ ಮೈ ತೋರಿಸುವುದು ಹೆಚ್ಚಾಗಿದೆ ಎಂದು ಟೀಕೆಗಳನ್ನು ಮಾಡಲು ಆರಂಭಿಸಿದ್ದಾರೆ. ನಟಿಯ ಬೋಲ್ಡ್ ಲುಕ್ ಗಳನ್ನು ನೋಡಿ ಅಸಮಾಧಾನವನ್ನು ಸಹಾ ವ್ಯಕ್ತಪಡಿಸುತ್ತಿದ್ದಾರೆ.
ಸಮಂತಾ ಅವರ ಡಿಸೈನರ್ ಪ್ರೀತಮ್ ಮಾದ್ಯಮವೊಂದರ ಸಂದರ್ಶನದಲ್ಲಿ, ಸಮಂತಾ ಡ್ರೆಸ್ಸಿಂಗ್ ಸೆನ್ಸ್ ಬಹಳ ಚೆನ್ನಾಗಿದೆ. ಅವರ ಬಳಿ ಡ್ರೆಸ್ ಗಳ ಅತ್ಯುತ್ತಮ ಕಲೆಕ್ಷನ್ ಇದೆ. ಸಮಂತಾ ರೂಮ್ ಗೆ ಎಂಟ್ರಿ ಕೊಟ್ಟರೆ ಅಲ್ಲಿ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಡ್ರೆಸ್ ಗಳು ಇವೆ. ಆದರೆ ಸೆಲೆಬ್ರಿಟಿಗಳನ್ನು ಫಾಲೋ ಮಾಡುವವರಿಗೆ ಏನಾದ್ರು ವಿಶೇಷ ನೀಡಬೇಕು ಎನ್ನುವ ಪ್ರೆಶರ್ ಡಿಸೈನರ್ ಗಳದ್ದು ಆಗಿರುತ್ತದೆ. ಸಮಂತಾ ನಾವು ಏನೇ ಕೊಟ್ಟರೂ ಒಪ್ಪಿಕೊಳ್ಳುತ್ತಾರೆ. ಆಕೆ ದೇಹದ ಲುಕ್ ಮತ್ತು ಕಾರ್ಯಕ್ರಮಕ್ಕೆ ಸೂಟ್ ಆಗುವಂತಹುದನ್ನೇ ನಾವು ಸಹಾ ನೀಡುತ್ತೇವೆ ಎಂದಿದ್ದಾರೆ.
ಸಮಂತಾ ಹೊಸ ಬೋಲ್ಡ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಲೇ ಇರುತ್ತೇವೆ. ನಟಿಯು ಬೋಲ್ಡ್ ಡ್ರೆಸ್ ಧರಿಸಿ ಮಾಡಿಸಿರುವ ಫೋಟೋ ಶೂಟ್ ನ ಫೋಟೋಗಳು ಈಗಾಗಲೇ ಸಖತ್ ಸದ್ದು ಮಾಡಿವೆ. ಇವೆಲ್ಲವುಗಳ ನಡುವೆ ಅವರ ಈ ಬೋಲ್ಡ್ ಅವತಾರ ನೋಡಿ ಅನೇಕರು ತಮ್ಮ ಅಸಮಾಧಾನವನ್ನು ಹೊರ ಹಾಕುವುದು ಸಹಾ ಸಾಮಾನ್ಯವಾಗಿದೆ. ಆದರೆ ನಟಿ ಸಮಂತಾ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಮುಂದೆ ಹೋಗುತ್ತಿದ್ದಾರೆ.