ಡಾ.ರಾಜ್‍ಕುಮಾರ್ ಅವರು ಸೃಷ್ಟಿಸಿದ್ದ ದಾಖಲೆಯನ್ನು ಮುರಿದಿದ್ದ ಏಕೈಕ ನಟಿ ಮಾಲಾಶ್ರೀ: ಅಚ್ಚರಿ ಎನಿಸಿದರೂ ಇದು ವಾಸ್ತವ!!

Entertainment Featured-Articles Movies News

ಕನ್ನಡ ಚಿತ್ರರಂಗದ ಮೇರು ನಟ, ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಎಂದರೆ ಯಾರಿಗೆ ತಾನೇ ತಿಳಿಯದು ಹೇಳಿ. ಕನ್ನಡ ಸಿನಿಮಾ ರಂಗ ಮಾತ್ರವೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗ ಕಂಡಂತಹ ಅಪರೂಪದ ನಟ ಅವರು. ತೆರೆಯ ಮೇಲೆ ಮಾತ್ರವೇ ಅಲ್ಲದೇ ನಿಜ ಜೀವನದಲ್ಲಿ ಸಹಾ ಮಾದರಿ ಜೀವನವನ್ನು ನಡೆಸಿ, ತಮ್ಮ ಸರಳ, ಸನ್ನಡತೆಯಿಂದ ಅನೇಕರಿಗೆ ಮಾದರಿಯಾದ ಬಂಗಾರದ ಮನುಷ್ಯ ಡಾ.ರಾಜ್‍ಕುಮಾರ್ ಎಂದರೆ ಇದು ಖಂಡಿತ ಅತಿಶಯೋಕಿ ಏನಲ್ಲ. ಅವರ ಒಂದೊಂದು ಸಿನಿಮಾ ಸಹಾ ಒಂದೊಂದು ಅಪರೂಪದ ಕಾಣಿಕೆಯಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂತಹ ಅದ್ಭುತ ಕಲಾವಿದ ತಮ್ಮ ವೃತ್ತಿ ಜೀವನದಲ್ಲಿ ಬರೆದ ದಾಖಲೆಗಳು ಕಡಿಮೆಯೇನಿಲ್ಲ. ಇಂದಿಗೂ ಸಹಾ ವಿಶ್ವದ ಮೇರು ನಟರಿಗೆ ನೀಡಿರುವ ರೇಟಿಂಗ್ ನಲ್ಲಿ ಭಾರತದಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದಿರುವ ನಟ ಡಾ.ರಾಜ್ ಎನ್ನುವುದು ಅನೇಕರಿಗೆ ತಿಳಿದ ವಿಷಯವಾಗಿದೆ. ಡಾ.ರಾಜ್ ಅವರ ಸಿನಿಮಾಗಳು ಆ ಕಾಲಕ್ಕೆ ಬರೆದ ದಾಖಲೆಗಳನ್ನು ಪುಡಿಗಟ್ಟುವುದು ಖಂಡಿತ ಸಾಧ್ಯವಿಲ್ಲ. ಮಾದ್ಯಮಗಳು, ಸಾಮಾಜಿಕ ಜಾಲತಾಣಗಳು ಇಂದಿನ ಹಾಗೆ ಅಂದು ಕೂಡಾ ಪರಿಣಾಮಕಾರಿಯಾಗಿ ಇದ್ದಿದ್ದರೆ ಡಾ.ರಾಜ್ ಅವರ ಸಾಧನೆಗಳು ವಿಸ್ಮಯವನ್ನೇ ಹುಟ್ಟು ಹಾಕುತ್ತಿದ್ದವು.

ವೃತ್ತಿ ಜೀವನದಲ್ಲಿ ಮಾಡಿದ ಸಾಧನೆಗಾಗಿ, ಅವರ ಕಾಲ ನೈಪುಷ್ಯತೆಗಾಗಿ ಅವರನ್ನು ಅರಸಿ ಬಂದ ಪ್ರಶಸ್ತಿ ಗಳು ಅನೇಕ. ಸಿನಿಮಾ ರಂಗದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದವರು ಡಾ.ರಾಜ್‍ಕುಮಾರ್. ಅವರು ಮಾಡಿದ ದಾಖಲೆಗಳನ್ನು ಸರಿಗಟ್ಟಲು ಅಥವಾ ಅದನ್ನು ಹಿಂದಿಕ್ಕಲು ಇದುವರೆಗೆ ಯಾವುದೇ ಸ್ಟಾರ್ ನಟರಿಗೂ ಸಹಾ ಸಾಧ್ಯವಾಗಿಲ್ಲ. ಆದರೆ ಡಾ.ರಾಜ್ ಅವರ ಒಂದು ದಾಖಲೆಯನ್ನು ಮಾತ್ರ ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಗುಂಡಿನ ಹುಡುಗಿ ಎಂದೇ ಹೆಸರಾಗಿದ್ದ ನಟಿ ಮಾಲಾಶ್ರೀ ಬ್ರೇಕ್ ಮಾಡಿದ್ದರು ಗೊತ್ತಾ?

ಹೌದು, ಈ ವಿಚಾರ ನಿಮಗೆ ಅಚ್ಚರಿಯನ್ನು ಉಂಟು ಮಾಡಬಹುದು. ಇದು ನಿಜವೇ? ಎನ್ನುವ ಪ್ರಶ್ನೆ ಸಹಾ ಮೂಡಬಹುದು. ಹಾಗಾದರೆ ಬನ್ನಿ ಪೂರ್ತಿ ವಿಷಯ ಏನೆಂದು ತಿಳಿಯೋಣ. ಆ ಕಾಲದಲ್ಲಿ ಡಾ.ರಾಜ್‍ಕುಮಾರ್ ಅವರು ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟ. ಅವರು ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದವರು. ವರ್ಷವೊಂದಕ್ಕೆ ಸುಮಾರು ಹದಿನೈದು ಸಿನಿಮಾಗಳಲ್ಲಿ ನಟ ಡಾ.ರಾಜ್‍ಕುಮಾರ್ ಅವರು ತೊಡಗಿಕೊಂಡಿದ್ದರು ಎಂದರೆ ಅವರ ಬೇಡಿಕೆ ಹೇಗಿತ್ತು ಎನ್ನುವುದು ಅರ್ಥವಾಗುತ್ತದೆ.

ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ ಸಹಾ ಬಹುಬೇಡಿಕೆಯ ನಟಿಯಾಗಿದ್ದವರು. ಡಾ.ರಾಜ್ ಅವರ ನಿರ್ಮಾಣ ಸಂಸ್ಥೆಯ ಸಿನಿಮಾದ ಮೂಲಕವೇ ಕನ್ನಡ ಸಿನಿಮಾಕ್ಕೆ ಮಾಲಾಶ್ರೀ ಎಂಟ್ರಿ ನೀಡಿದ್ದವರು. ಅವರ ಅದೃಷ್ಟ ಹೇಗೆ ಬದಲಾಯಿತು ಎಂದರೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಅರಸಿ ಬಂತು. ಹೀಗೆ ಬ್ಯುಸಿಯಾಗಿದ್ದ ನಟಿ ವರ್ಷವೊಂದರಲ್ಲಿ ಒಟ್ಟು 19 ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು ಎಂದರೆ ಅದು ಖಂಡಿತ ಅಚ್ಚರಿ ಮೂಡಿಸುತ್ತದೆ.

ಹೀಗೆ ಬಹು ಬೇಡಿಕೆಯ ನಟಿಯಾಗಿದ್ದ ಮಾಲಾಶ್ರೀ ಅವರು ಸ್ಟಾರ್ ನಟಿಯಾಗಿ ಅತಿ ಹೆಚ್ಚಿನ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಿದ ನಟಿಯಾಗಿ ಹೆಸರನ್ನು ಮಾಡುತ್ತಲೇ, ಡಾ.ರಾಜ್ ಅವರು ವರ್ಷಕ್ಕೆ 15 ಸಿನಿಮಾದಲ್ಲಿ ತೊಡಗಿಸಿಕೊಂಡು ಮಾಡಿದ್ದಂತಹ ದಾಖಲೆಯನ್ನು ಅಳಿಸಿ ಹಾಕಿದ್ದರು ಮಾಲಾಶ್ರೀ. 19 ಸಿನಿಮಾಗಳಲ್ಲಿ ನಟಿಸುವ ಮೂಲಕ ಒಂದು ಹೊಸ ದಾಖಲೆಯನ್ನು ಬರೆದಿದ್ದರು. ಮಾಲಾಶ್ರೀ ಅವರು ಅಂದು ಸೃಷ್ಟಿಸಿದ ಆ ದಾಖಲೆಯನ್ನು ಇನ್ನೂ ಯಾರೂ ಸಹಾ ಬ್ರೇಕ್ ಮಾಡಿಲ್ಲ ಎನ್ನುವುದು ಸಹಾ ನಿಜ.

Leave a Reply

Your email address will not be published. Required fields are marked *