ಡಾಲಿ ಧನಂಜಯ್ ಬಗ್ಗೆ ನಟಿ ರಮ್ಯ ಹೇಳಿದ ವಿಚಾರ ಕೇಳಿ ಎಲ್ಲರಿಗೂ ಆಗಿದೆ ಆಶ್ಚರ್ಯ: ಮತ್ತೆ ಸಿನಿಮಾ ಕಡೆ ರಮ್ಯಾ ಗೆ ಒಲವು ಅರಳಿತಾ??
ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯ ಚಿತ್ರರಂಗದಿಂದ ದೂರಾಗಿ ವರ್ಷಗಳೇ ಕಳೆದಿವೆ. ಅತ್ತ ರಾಜಕೀಯದ ಕಡೆಗೆ ಒಲವು ತೋರಿದ ಮೇಲೆ ಸಿನಿಮಾ ರಂಗದಿಂದ ದೂರ ಸರಿದರು. ಆದರೆ ಈಗ ಸಿನಿಮಾ ಮತ್ತು ರಾಜಕೀಯ ಎರಡರಿಂದಲೂ ಸಹಾ ಬ್ರೇಕ್ ಪಡೆದು, ಒಂದು ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಸಿನಿಮಾದಿಂದ ದೂರಾದರೂ ಸಿನಿಮಾ ಗಳ ಬಗ್ಗೆ ಆಸಕ್ತಿಯೇನೂ ಕಡಿಮೆಯಾಗಿಲ್ಲ. ಅದರಲ್ಲೂ ಇತ್ತೀಚಿಗೆ ನಟಿ ರಮ್ಯಾ ಸಿನಿಮಾಗಳ ಕಡೆಗೆ ತುಸು ಹೆಚ್ಚಿನ ಒಲವನ್ನು ತೋರಿಸುತ್ತಿರುವಂತೆ ಕಾಣುತ್ತಿದೆ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು.
ರಮ್ಯಾ ಅವರು ಕೆಲವು ದಿನಗಳ ಹಿಂದೆಯಷ್ಟೇ ನಿನ್ನ ಸನಿಹಕೆ ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಟ್ರೈಲರ್ ಗಳನ್ನು ನೋಡಿ, ಅವುಗಳನ್ನು ಇಷ್ಟ ಪಟ್ಟು, ಮೆಚ್ಚುಗೆಯ ಮಾತುಗಳನ್ನು ಬರೆದುಕೊಂಡು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಅವುಗಳ ಬೆನ್ನಲ್ಲೇ ರಮ್ಯ ಇನ್ನೊಂದು ಹೊಸ ಸಿನಿಮಾ ಟ್ರೈಲರ್ ನೋಡಿ ಖುಷಿಯಾಗಿದ್ದಾರೆ. ಅದರ ಬಗ್ಗೆ ಸಹಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡು ಅದರ ಬಗ್ಗೆ ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಅವರು ಡಾಲಿ ಧನಂಜಯ್ ಅವರ ಅಭಿನಯದ ರತ್ನತ್ ಪ್ರಪಂಚ ಸಿನಿಮಾ ಟ್ರೈಲರ್ ನೋಡಿದ್ದು, ಅದು ಅವರಿಗೆ ಬಹಳ ಇಷ್ಟವಾಗಿದೆ. ಅದರ ಬಗ್ಗೆ ರಮ್ಯ, “ನನಗೆ ನಗುವನ್ನು ತಡೆಯುವುದಕ್ಕೆ ಆಗುತ್ತಿಲ್ಲ. ಈ ಸಿನಿಮಾ ನೋಡುವ ನಿರೀಕ್ಷೆಯಲ್ಲಿ ಇದ್ದೇನೆ. ಧನಂಜಯ್ ಸೂಪರ್. ಅನು ಪ್ರಭಾಕರ್, ವೈನಿಧಿ ಜಗದೀಶ್, ಉಮಾಶ್ರೀ, ಶೃತಿ, ಅಚ್ಯುತ್ ಕುಮಾರ್ ಇವರೆಲ್ಲಾ ಸಹಾ ಅದ್ಭುತವಾದ ಕಲಾವಿದರು. ನಿರ್ಮಾಪಕರಾದ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರಿಗೆ ಯಶಸ್ಸು ಸಿಗಲಿ” ಎಂದು ಹಾರೈಸಿದ್ದಾರೆ.
ರಮ್ಯ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸಿನಿಮಾದ ಬಗ್ಗೆ ಬರೆದುಕೊಂಡು ಮೆಚ್ಚುಗೆ ನೀಡಿರುವುದನ್ನು ನೋಡಿ ಡಾಲಿ ಧನಂಜಯ್ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಡಾಲಿ ಧನಂಜಯ್ ಅವರ ರತ್ನನ್ ಪ್ರಪಂಚ ಓಟಿಟಿ ಪ್ಲಾಟ್ ಫಾರಂನಲ್ಲಿ ಬರಲಿರುವ ವಿಷಯ ಈಗಾಗಲೇ ಸುದ್ದಿಯಾಗಿದೆ. ಅನೇಕರು ಓಟಿಟಿ ಬೇಡ ಸಿನಿಮಾ ಥಿಯೇಟರ್ ಗಳಲ್ಲೇ ಬಿಡುಗಡೆ ಮಾಡಿ ಎಂದು ಕಾಮೆಂಟ್ ಗಳನ್ನು ಸಹಾ ಮಾಡಿದ್ದರು. ಇನ್ನೂ ಅನೇಕರು ಸಿನಿಮಾಕ್ಕೆ ಆಲ್ ದಿ ಬೆಸ್ಟ್ ವಿಶ್ ಮಾಡಿದ್ದಾರೆ.