ಡಾರ್ಲಿಂಗ್ ಪ್ರಭಾಸ್ ಜೊತೆ ಕರಾವಳಿ ಬೆಡಗಿಯ ರೋಮ್ಯಾನ್ಸ್? ಟಾಲಿವುಡ್ ನಲ್ಲಿ ಗುಸು ಗುಸು

Entertainment Featured-Articles News

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ದೊಡ್ಡ ಕ್ರೇಜ್ ಹಾಗೂ ಸ್ಟಾರ್ ಡಂ ಹೊಂದಿರುವ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಹುಬಲಿ ನಂತರ ಪ್ರಭಾಸ್ ಚಾರ್ಮ್ ಹಿಂದೆಂದಿಗಿಂತಲೂ ಹೆಚ್ಚಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರ ಸಿನಿಮಾ ಗಳು ಎಂದರೆ ನೂರಾರು ಕೋಟಿ ಬಂಡವಾಳವನ್ನು ಹೂಡಲು ಮುಂದಾಗುತ್ತಾರೆ. ಬಾಹುಬಲಿ ನಂತರ ಪ್ರಭಾಸ್ ನಟನೆಯ ಭಾರೀ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾದ ಎರಡು ಸಿನಿಮಾಗಳು ತೆರೆ ಕಂಡಿವೆ‌. ಸಾಹೋ ಮತ್ತು ರಾಧೇ ಶ್ಯಾಮ್ ಎರಡೂ ಸಿನಿಮಾಗಳಲ್ಲಿ ಪ್ರಭಾಸ್ ನಾಯಕ ಆಗಿದ್ದಾರೆ.

ಆದರೆ ಬಾಹುಬಲಿ ನಂತರದ ಈ ಎರಡೂ ಸಿನಿಮಾಗಳು ನಿರೀಕ್ಷಿತ ಮಟ್ಟಕ್ಕೆ ಯಶಸ್ಸು ಪಡೆಯುವಲ್ಲಿ ವಿಫಲವಾಗಿವೆ. ಹಾಗೆಂದ ಮಾತ್ರಕ್ಕೆ ಪ್ರಭಾಸ್ ಅವರ ವರ್ಚಸ್ಸಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಪ್ರಭಾಸ್ ಅಭಿನಯದ ಮುಂದಿನ ಎರಡು ಸಿನಿಮಾಗಳು ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ಅದರಲ್ಲೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಆ್ಯಕ್ಷನ್ ಹೀರೋ ಆಗಿ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗ ಅವೆಲ್ಲವುಗಳ ನಡುವೆ ಈಗ ಹೊಸ ಸುದ್ದಿಯೊಂದು ಟಾಲಿವುಡ್ ನಲ್ಲಿ ಹರಿದಾಡಿದೆ.

ದೊಡ್ಡ ಸ್ಟಾರ್ ನಟರ ಸಿನಿಮಾ ಎಂದ ಕೂಡಲೇ ಅವರಿಗೆ ನಾಯಕಿಯಾಗಲಿರುವ ನಟಿ ಯಾರು? ಎನ್ನುವ ಕುತೂಹಲ ಮೂಡುತ್ತದೆ. ಅಲ್ಲದೇ ಸ್ಟಾರ್ ಗಳ ಸಿನಿಮಾ ದೊಡ್ಡ ಯಶಸ್ಸು ಕಂಡರೆ ಆ ಸಿನಿಮಾದಲ್ಲಿ ನಾಯಕಿಯಾಗುವ ನಟಿಗೂ ಸಹಾ ಹೊಸ ಹೊಸ ಅವಕಾಶಗಳು ಅರಸಿ ಬರುತ್ತವೆ. ಪ್ರಸ್ತುತ ಅಂತಹುದೇ ಒಂದು ಹೊಸ ವಿಷಯ ಅಂದರೆ ನಟ ಪ್ರಭಾಸ್ ಅವರ ಹೊಸ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ನಟಿಸಲಿರುವ ನಟಿಯ ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡಿ, ಎಲ್ಲರ ಗಮನ ಸೆಳೆದಿದೆ.

ಕರಾವಳಿ ಸುಂದರಿ ಕೃತಿ ಶೆಟ್ಟಿ ಸದ್ಯಕ್ಕೆ ತೆಲುಗಿನಲ್ಲಿ ಸಖತ್ ಬ್ಯುಸಿಯಾಗಿರುವ ಯುವ ನಟಿ. ಮೊದಲ ಸಿನಿಮಾ ಮೂಲಕವೇ ಜನರ ಮನಸ್ಸು ಗೆದ್ದಿರುವ ಕೃತಿ ನಾಗ ಚೈತನ್ಯ ಮತ್ತು ನಟ ನಾನಿ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ತೆಲುಗಿನ ಜನಪ್ರಿಯ ನಿರ್ದೇಶಕ ಮಾರುತಿ ಅವರ ನಿರ್ದೇಶನದ ನಟ ಪ್ರಭಾಸ್ ನಾಯಕ ನಟನಾಗಲಿರುವ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲವಾದರೂ ಸದ್ಯಕ್ಕೆ ಇದು ಹಾಟ್ ಟಾಪಿಕ್ ಆಗಿದೆ.

Leave a Reply

Your email address will not be published.