ಮದುವೆಗಳು ಎಂದರೆ ಅಲ್ಲೊಂದು ಸಡಗರ ಹಾಗೂ ಸಂಭ್ರಮವಿರುತ್ತದೆ. ಮದುವೆ ಎಂದರೆ ಶಾಸ್ತ್ರ ಹಾಗೂ ಸಂಪ್ರದಾಯಗಳು ಅಲ್ಲಿ ಮೇಳೈಸಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಸ್ತ್ರ , ಸಂಪ್ರದಾಯ ಹಾಗೂ ಸಂಸ್ಕೃತಿಗಿಂತ ಹೆಚ್ಚಾಗಿ ಅದ್ದೂರಿತನ ಅಥವಾ ಆಡಂಬರವೇ ಮೊದಲ ಸ್ಥಾನದಲ್ಲಿದೆ. ಹಾಡು, ಕುಣಿತ ಇಲ್ಲದೇ ಮದುವೆಯೇ ಇಲ್ಲ ಎನ್ನುವಂತಾಗಿದ್ದು, ಮದುವೆ ಹಿಂದಿನ ದಿನವೇ ಅದ್ದೂರಿ ಪಾರ್ಟಿ ವ್ಯವಸ್ಥೆ ಮಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸುವುದು ಸಹಾ ಒಂದು ಆಚರಣೆಯೇ ಆಗಿ ಹೋಗಿದೆ. ಸ್ನೇಹಿತರು, ಸಂಬಂಧಿಕರ ಜೊತೆಗೆ ವಧು, ವರ ಸಹಾ ಕುಣಿದು ನಲಿಯುತ್ತಾರೆ.
ಆದರೆ ಕೆಲವೊಮ್ಮೆ ಇಂತಹ ಎಂಜಾಯ್ಮೆಂಟ್ ಗಳಲ್ಲೇ ನಡೆಯುವ ಘಟನೆಗಳು ಎಲ್ಲೆಲ್ಲೂ ವೀಡಿಯೋಗಳಾಗಿ ವೈರಲ್ ಆಗುತ್ತವೆ. ಪ್ರಸ್ತುತ ಅಂತಹುದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟ್ರೋಲ್ ಪೇಜ್ ಒಂದು ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ವೀಡಿಯೋ ನೋಡಿದ ನೆಟ್ಟಿಗರು ನಗೆಯ ಕಡಲಿನಲ್ಲಿ ತೇಲುತ್ತಿದ್ದಾರೆ. ಇನ್ನೂ ಕೆಲವರು ಕಾಮೆಂಟ್ ಗಳನ್ನು ಮಾಡುವ ಮೂಲಕ ಆ ಸನ್ನಿವೇಶವನ್ನು ಕುರಿತಾಗಿ ವ್ಯಂಗ್ಯ ಮಾಡುತ್ತಾ ಸಾಗಿದ್ದಾರೆ.
ಇಷ್ಟಕ್ಕೂ ಘಟನೆ ಏನು ಎನ್ನುವುದರ ವಿವರಗಳಿಗೆ ಹೋದರೆ, ಮದುವೆ ಹಿನ್ನೆಲೆಯಲ್ಲಿ ವ್ಯವಸ್ಥೆ ಮಾಡಲಾದ ಗ್ರಾಂಡ್ ಪಾರ್ಟಿಯಲ್ಲಿ ಡಾನ್ಸ್ ಅರೇಂಜ್ ಮಾಡಲಾಗಿದೆ. ಡಾನ್ಸ್ ಗಾಗಿ ಸಿದ್ಧಪಡಿಸಲಾಗಿರುವ ವೇದಿಕೆಯ ಮೇಲಕ್ಕೆ ವಧು ಹಾಗೂ ವರ ಇಬ್ಬರೂ ಬರುತ್ತಾರೆ. ಈ ವೇಳೆ ವರ ಬಹಳ ಜೋಶ್ ನಿಂದ ವಧುವನ್ನು ಎತ್ತಿಕೊಂಡು ಡಾನ್ಸ್ ಮಾಡುವ ಆಸೆಯಿಂದ ಆಕೆಯನ್ನು ಎತ್ತಿಕೊಳ್ಳಲು ಹೋಗುತ್ತಾನೆ. ಆದರೆ ಆಯತಪ್ಪಿ ವರ ಕೆಳಗೆ ಬೀಳುತ್ತಾನೆ. ವಧು ಕೂಡಾ ಕೆಳಗೆ ಬೀಳುತ್ತಾಳೆ.
ಈ ವೀಡಿಯೋ ಈಗ ಸಿಕ್ಕಾಪಟ್ಟೆ ಟ್ರೋ ಲ್ ಗೆ ಗುರಿಯಾಗಿದೆ. ಲಕ್ಷಾಂತರ ಜನರು ವೀಕ್ಷಣೆ ಮಾಡಿರುವ ಈ ವೀಡಿಯೋಗೆ ಹತ್ತು ಸಾವಿರಕ್ಕೂ ಅಧಿಕ ಲೈಕ್ ಗಳು ಹರಿದು ಬಂದಿವೆ. ಬಹಳಷ್ಟು ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಅನೇಕರು ಇದೆಲ್ಲಾ ಬೇಕಿತ್ತಾ? ಎಂದು ವ್ಯಂಗ್ಯ ಮಾಡಿದ್ದಾರೆ. ಕೆಲವರು ವರನ ಸಾಹಸಕ್ಕೆ ಮೆಚ್ಚಬೇಕು ಎಂದೆಲ್ಲಾ ಹೇಳುತ್ತಿದ್ದಾರೆ.