ಡವ್ ರಾಜ ಎಂದ ಸೋನುಗೆ ಗ್ರಹಚಾರ ಬಿಡಿಸಿದ ಗುರೂಜಿ: ಗುರೂಜಿ ಹೇಳಿದ್ದು ಕೇಳಿ ಸೋನು ಗಪ್ ಚುಪ್

Entertainment Featured-Articles Movies News

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಒಂದು ಕೊನೆಯ ವಾರ ವನ್ನು ತಲುಪಿದೆ‌. ಭರ್ಜರಿ ಯಶಸ್ಸು ಪಡೆದಿರುವ ಮೊದಲನೇ ಸೀಸನ್ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದ್ದು, ಓಟಿಟಿ ಮೊದಲನೇ ಸೀಸನ್ ನ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಮನೆಯಲ್ಲಿ ಈಗ ಉಳಿದಿರುವ ಎಂಟು ಮಂದಿ ಸ್ಪರ್ಧಿಗಳ ಪೈಕಿ ನಾಲ್ಕು ಜನರಿಗೆ ಮಾತ್ರ ಟಿವಿ ಯಲ್ಲಿ ಪ್ರಸಾರ ಆಗಲಿರುವ ಬಿಗ್ ಬಾಸ್ ಸೀಸನ್ ಒಂಬತ್ತಕ್ಕೆ ಸಹಾ ಎಂಟ್ರಿ ಸಿಗಲಿದೆ. ಆ ನಾಲ್ಕು ಜನ ಯಾರಾಗುವರು? ಎನ್ನುವ ಕುತೂಹಲ ಸಹಾ ಸಹಜವಾಗಿಯೇ ವೀಕ್ಷಕರಲ್ಲಿ ಇದೆ. ಪ್ರಸ್ತುತ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದ್ದರೂ ಸಹಾ ಸೋನು ಶ್ರೀನಿವಾಸ್ ಗೌಡ ಮಾತ್ರ ಇವರ ಕೆಲವೇ ಮಂದಿಯ ಜೊತೆಗೆ ಕಿರಿಕ್ ಮಾಡಿಕೊಳ್ಳುವುದು ಮಾತ್ರ ನಿಲ್ಲಿಸಿಲ್ಲ.

ಮನೆ ಮಂದಿ ಕುಳಿತು ಹರಟೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಸೋನು ಆರ್ಯವರ್ಧನ್ ಗುರೂಜಿ ಅವರಿಗೆ ಡವ್ ರಾಜ ಎನ್ನುವ ಪದವನ್ನು ಬಳಸಿದ್ದಾರೆ. ಈ ಪದ ಬಳಕೆ ಗುರೂಜಿ ಅವರಿಗೆ ಹಿಡಿಸಿಲ್ಲ, ಅವರು ನೇರವಾಗಿಯೇ ಸೋನುಗೆ ಡವ್ ರಾಜ ಎಂದ್ರೆ ಸರಿ ಇರಲ್ಲ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಆದರೆ ಸೋನು ಅಷ್ಟಕ್ಕೇ ಸುಮ್ಮನಾಗಿಲ್ಲ. ಹಾಗಿದ್ರೆ ನಾನು ನಿಮಗೆ ಕಳ್ಳ ಸ್ವಾಮೀಜಿ ಎಂದು ಕರೆಯಲೇನು ಎಂದು ಹೇಳಿದ್ದಾರೆ. ಆಗ ಗುರೂಜಿ ಹೆಚ್ಚೇನು ಪ್ರತಿಕ್ರಿಯೆ ನೀಡಿಲ್ಲವಾದರೂ, ಮನೆ ಮಂದಿಗೆ ಸೋನು ಆಡಿದ ಮಾತುಗಳ ಇಷ್ಟವಾಗಿಲ್ಲ. ಅಲ್ಲದೇ ಎಲ್ಲರೂ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಸಾನ್ಯಾ ಅಯ್ಯರ್ ಸೋನುಗೆ, ಅವರು ವಯಸ್ಸಿನಲ್ಲಿ ಹಿರಿಯರು, ಅವರಿಗೆ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ಆಗ ಸೋನು ಬೇಸರ ಮಾಡಿಕೊಂಡು, ಕಳ್ಳ ಸ್ವಾಮೀಜಿ ಎಂದು ಹೇಳಬೇಕೇ ಎಂಬುದಷ್ಟೇ ನನ್ನ ಪ್ರಶ್ನೆ.‌ ನಾನು ಅವರಿಗೆ ಕಳ್ಳ ಸ್ವಾಮೀಜಿ ಎಂದು ಹೇಳಿಲ್ಲ ಎಂದು ವಾದಕ್ಕೆ ಇಳಿದಿದ್ದಾರೆ ಸೋನು. ಈ ವಿಚಾರದಿಂದ ಬೇಸರ ಹಾಗೂ ಸಿಟ್ಟಾದ ಗುರೂಜಿ ಸೋನು ಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದು, ಗುರೂಜಿ ಮಾತು ಕೇಳಿದ ನಂತರ ಸೋನು ಶ್ರೀನಿವಾಸ್ ಗೌಡ ಅವರು ಮರು ಮಾತನಾಡದೇ ಗಪ್ ಚುಪ್ ಆಗಿದ್ದಾರೆ. ಹಾಗಾದರೆ ಗುರೂಜಿ ಹೇಳಿದ್ದೇನು?

ಸುಖಾ ಸುಮ್ಮನೆ ನನ್ನ ಸುದ್ದಿಗೆ ಬರಬೇಡ. ನಾನು ನನ್ನದೇ ಲಿಮಿಟ್ ನಲ್ಲಿ ಇರ್ತೀನಿ. ನನಗೆ ಸಿಟಿ ಲೈಫ್ ಒಗ್ಗಿಲ್ಲ, ಹೀಗಾಗಿ ನಾನು ಹಳ್ಳಿ ಲೈಫ್ ನಲ್ಲಿ ನಾನು ಬದುಕುತ್ತಾ ಇದ್ದೀನಿ. ನನ್ನ ಭಾಷೆ ಸಹಾ ಅದೇ ರೀತಿ ಇದೆ. ನಾನು ಬಳಕೆ ಮಾಡುವಷ್ಟು ಕೆಟ್ಟ ಪದಗಳನ್ನು ಯಾರು ಬಳಕೆ ಮಾಡುವುದಿಲ್ಲ. ಕೆಟ್ಟ ಶಬ್ದ ಬಳಕೆ ಮಾಡುವ ಸ್ಪರ್ಧೆ ಏನಾದರೂ ಇಟ್ಟರೆ ನಾನೇ ಮೊದಲು ಬರುತ್ತೇನೆ ಎಂದಿದ್ದಾರೆ ಗುರೂಜಿ. ಅವರ ಮಾತಿನ ತಾತ್ಪರ್ಯವನ್ನು ಅರ್ಥ ಮಾಡಿಕೊಂಡ ಸೋನು ಅವರ ಮಾತು ಕೇಳಿ ಗಪ್ ಚುಪ್ ಆಗಿದ್ದಾರೆ. ಕೊನೆ ವಾರದಲ್ಲೂ ಸೋನು ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.

Leave a Reply

Your email address will not be published.