ಟ್ವಿಟರ್ ಬಳಕೆದಾರರೆ ಎಚ್ಚರ! ಟ್ವಿಟರ್ ಬಗ್ಗೆ ಹೊಸ ಶಾಕ್ ಕೊಟ್ಟ ಅದರ ಹೊಸ ಮಾಲೀಕ ಎಲಾನ್ ಮಸ್ಕ್ !!

Entertainment Featured-Articles News

ವಾರದ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳ ದಿಗ್ಗಜರಲ್ಲಿ ಒಂದಾದ ಟ್ವಟಿರ್ ಅನ್ನು ಖರೀದಿ ಮಾಡಿದ ವಿಶ್ವದ ನಂಬರ್ ಒನ್ ಶ್ರೀಮಂತ ಉದ್ಯಮಿ, ಟೆಸ್ಲಾದ ಸಂಸ್ಥಾಪಕ ಹಾಗೂ ಸಿಇಓ ಎಲಾನ್ ಮಸ್ಕ್ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರು ಟ್ವಿಟರ್ ಬಳಕೆದಾರರಿಗೊಂದು ಶಾ ಕ್ ನೀಡುವಂತಹ ವಿಚಾರವನ್ನು ಹಂಚಿಕೊಂಡಿದ್ದು, ಎಲ್ಲರೂ ಇದರ ಬಗ್ಗೆ ಮಾತನಾಡಿಕೊಳ್ಳುವಂತಾಗಿದೆ. ಅನೇಕರು ಈ ವಿಚಾರವಾಗಿ ಚರ್ಚೆಗಳನ್ನು ಸಹಾ ಮಾಡಲು ಆರಂಭಿಸಿರುವುದು ಕೂಡಾ ನಡೆಯುತ್ತಿದೆ. ಎಲಾನ್ ಮಸ್ಕ್ ಅಂತಹ ಸಂಚಲನ ಹುಟ್ಟಿಸುವ ಹಾಗೆ ಏನು ಹೇಳಿದರು? ಅದಕ್ಕೆ ಉತ್ತರ ಇಲ್ಲಿದೆ.

ಎಲಾನ್ ಮಸ್ಕ್ ಅವರು ಮುಂಬರುವ ದಿನಗಳಲ್ಲಿ ಟ್ವಟರ್ ನ ಬಳಕೆಯು ಉಚಿತವಾಗಿರುವುದಿಲ್ಲ ಎನ್ನುವ ಸುಳಿವೊಂದನ್ನು ನೀಡಿದ್ದು, ಈ ವಿಷಯ ಟ್ವಿಟರ್ ಬಳಕೆದಾರರಲ್ಲಿ ಸಹಜವಾಗಿಯೇ ಒಂದು ಆತಂಕವನ್ನು ಮೂಡಿಸಿದೆ. ಇತ್ತೀಚಿಗಷ್ಟೇ ಎಲಾನ್ ಮಸ್ಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದು, ಅವರು ಪೋಸ್ಟ್ ಮಾಡಿರುವ ವಿಷಯ ಈಗ ಎಲ್ಲರ ಗಮನವನ್ನು ಸೆಳೆದಿದೆ. ಅಲ್ಲದೇ ಎಲಾನ್ ಮಸ್ಕ್ ಈ ಮೂಲಕ ಟ್ವಿಟರ್ ಬಳಕೆದಾರರಿಗೆ ಸುಳಿವೊಂದನ್ನು ನೀಡಿದ್ದಾರೆ.

ಎಲಾನ್ ಮಸ್ಕ್ ತನ್ನ ಟ್ವೀಟ್ ನಲ್ಲಿ, “ಟ್ವಿಟರ್ ಯಾವಾಗಲೂ ಸಾಮಾನ್ಯ ಬಳಕೆದಾರರಿಗೆ ಉಚಿತವಾಗಿರುತ್ತದೆ. ಆದರೆ ವಾಣಿಜ್ಯ/ಸರ್ಕಾರಿ ಬಳಕೆದಾರರಿಗೆ ಬಹುಶಃ ಸ್ವಲ್ಪ ಶುಲ್ಕವನ್ನು ವಿಧಿಸಬಹುದು” ಎಂದು ಹೇಳಿದ್ದಾರೆ. ಎಲಾನ್ ಮಸ್ಕ್ ಅವರು ಈ ರೀತಿ ಟ್ವೀಟ್ ಮಾಡಿದ ನಂತರ ಅನೇಕರು ಇದರ ಬಗ್ಗೆ, ಅಂದರೆ ಟ್ವಿಟರ್ ನಲ್ಲಿ ಶುಲ್ಕ ವಿಧಿಸುವ ವಿಚಾರದಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸಿದ್ದಾರೆ. ಇನ್ನು ಇದಕ್ಕೂ ಮೊದಲು ಎಲಾನ್ ಮಸ್ಕ್ ಮೆಟ್ ಗಾಲಾದಲ್ಲಿ ಸಹಾ ಟ್ವಿಟರ್ ಬಗ್ಗೆ ಮಾತನಾಡಿದ್ದರು.

ಎಲಾನ್ ಮಾಸ್ಕ್ ಅವರು ನ್ಯೂಯಾರ್ಕ್ ನಲ್ಲಿ ನಡೆದ ಮೆಟ್ ಗಾಲಾದಲ್ಲಿ ಮಾತನಾಡುತ್ತಾ, ಅಮೇರಿಕಾದ ಒಂದು ಬಹುದೊಡ್ಡ ವರ್ಗ ಟ್ವಿಟರ್ ನಲ್ಲಿ ಇರಬೇಕು ಹಾಗೂ ಚರ್ಚೆಗಳಲ್ಲಿ ಶಾಮೀಲಾಗಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದರು. ಇನ್ನು ಟ್ವಿಟರ್ ವಿಧಿಸುವ ಶುಲ್ಕದ ಬಗ್ಗೆ ಚರ್ಚೆ ಆರಂಭವಾದೊಡನೆ, ಕೂಡಲೇ ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತ ಎನ್ನುವ ಮಸ್ಕ್ ಅವರ ಸ್ಪಷ್ಟನೆ ಖಂಡಿತ ನಿಟ್ಟುಸಿರು ಬಿಡುವ ಹಾಗೆ ಮಾಡಿದೆ.

Leave a Reply

Your email address will not be published. Required fields are marked *