ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಅವರ ಪ್ರೇಯಸಿ ಮಲೈಕಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಈಗಾಗಲೇ ಬಹಳಷ್ಟು ಸುದ್ದಿಗಳಾಗಿದೆ. ನಟ ಅರ್ಜುನ್ ಕಪೂರ್ ಗೆ ಈಗ ವಯಸ್ಸು 36 ಆಗಿದ್ದರೆ ಅವರ ಪ್ರೇಯಸಿ ಮಲೈಕಾಗೆ 48 ವರ್ಷ ವಯಸ್ಸಾಗಿದೆ. ಅಂದರೆ ಇವರ ನಡುವಿನ ವಯಸ್ಸಿನ ಅಂತರವು 12 ವರ್ಷಗಳಷ್ಟಿದೆ. ಇನ್ನು ಮಲೈಕಾ ಅರೋರ ಅರ್ಬಾಜ್ ಖಾನ್ ಅವರಿಗೆ ವಿಚ್ಚೇದನ ನೀಡಿದ ನಂತರದಲ್ಲಿ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದು, ಅರ್ಜುನ್ ಗಾಗಿಯೇ ಮಲೈಕಾ ವಿಚ್ಚೇದನ ಪಡೆದರು ಎಂದೂ ಹೇಳಲಾಗುತ್ತದೆ.
ಆಗಾಗ ಅರ್ಜುನ್ ಕಪೂರ್ ಹಾಗೂ ಮಲೈಕಾ ತಾವು ಜೊತೆಯಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಆಗೆಲ್ಲಾ ಮೆಚ್ಚುಗೆ ಗಳ ಜೊತೆಗೆ ಅವರ ವಯಸ್ಸಿನ ವಿಚಾರವಾಗಿ ಕೆಲವರು ಟ್ರೋಲ್ ಕೂಡಾ ಮಾಡುತ್ತಾರೆ. ಇದೇ ವಿಷಯದ ಕುರಿತಾಗಿ ಅರ್ಜುನ್ ಕಪೂರ್ ಅವರು ಸಂದರ್ಶನವೊಂದರಲ್ಲಿ ತಮ್ಮ ಹಾಗೂ ಮಲೈಕಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಮಾತನಾಡುವವರಿಗೆ ಒಂದು ಖಡಕ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಅರ್ಜುನ್ ಕಪೂರ್, ತಾನು ಜನರು ಮಾಡುವ ಯಾವುದೇ ಕಾಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದೂ, ಅವರು ಎಂತದ್ದೇ ಟ್ರೋಲ್ ಮಾಡಿದರೂ ನಾನು ನೋಡುವುದಿಲ್ಲ ಹಾಗೂ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದೂ ಇಲ್ಲ ಎಂದಿದ್ದಾರೆ. ಅವೆಲ್ಲಾ ಫೇಕ್ ಆಗಿರುತ್ತೆ, ಯಾರು ನಮ್ಮನ್ನು ಟ್ರೋಲ್ ಮಾಡ್ತಾರೋ ಅವರ ನಮ್ಮ ಜೊತೆ ಸೆಲ್ಫಿಗಾಗಿ ಸಾಯ್ತಾರೆ ಎನ್ನುವ ಅಸಮಾಧಾನದ ಮಾತನ್ನು ಅವರು ಹಂಚಿಕೊಂಡಿದ್ದಾರೆ.
ನನ್ನ ವೈಯಕ್ತಿಕ ಜೀವನ ನನ್ನ ಆಯ್ಕೆಯಾಗಿದೆ. ನಾನು ಏನು ಮಾಡುತ್ತೇನೆ ಅಂತ ಬೇರೆಯವರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾರ ವಯಸ್ಸು ಎಷ್ಟು ಎಂದು ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮನ್ನು ಬದುಕಲು ಬಿಡಿ ಎಂದಿರುವ ಅವರು ವಯಸ್ಸಿನ ಬಗ್ಗೆ ಮಾತನಾಡುವುದು ಮೂರ್ಖತನ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.