ಟ್ರೋಲ್, ಟೀಕೆ ಏನಾದ್ರು ಮಾಡ್ಕೊಳ್ಳಿ ಎಂದು ಮತ್ತೆ ಬೋಲ್ಡ್ ಫೋಟೊ ಶೇರ್ ಮಾಡಿದ ಅಮೀರ್ ಖಾನ್ ಪುತ್ರಿ
ಬಾಲಿವುಡ್ ನಟ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇರಾ ಖಾನ್ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲವಾದರೂ ಕೂಡಾ ಒಬ್ಬ ಸೆಲೆಬ್ರಿಟಿಯಷ್ಟೇ ಜನಪ್ರಿಯತೆಯನ್ನು ಪಡೆದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡುವ ಇರಾ ಖಾನ್ ಅವರ ಹಿಂಬಾಲಕರ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ. ಇತ್ತೀಚಿಗೆ ಇರಾ ತಮ್ಮ ಜನ್ಮದಿನವನ್ನು ಸಹಾ ಬೋಲ್ಡ್ ಲುಕ್ ನಲ್ಲೇ ಮಾಡಿಕೊಂಡಿದ್ದರು.
ಇರಾ ಖಾನ್ ಜನ್ಮದಿನದ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿದ್ದವು. ಆ ಫೋಟೋಗಳನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಆದರೆ ಇಂತಹ ಟ್ರೋಲ್ ಗಳು, ನೆಗೆಟಿವ್ ಕಾಮೆಂಟ್ ಗಳು ಹಾಗೂ ಟೀಕೆಗಳಿಗೆ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವಂತೆ ಇರಾ ಮತ್ತೊಮ್ಮೆ ಕೆಲವು ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಮತ್ತೊಮ್ಮೆ ಅಭಿಮಾನಿಗಳ ಮೆಚ್ಚುಗೆ, ಟೀಕಾಕಾರರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ.
ಇರಾ ಖಾನ್ ತಮ್ಮ ಬಾಯ್ ಫ್ರೆಂಡ್ ನೂಪುರ್ ಶಿಖಾರೆ ಜೊತೆ ಇರುವ ಕೆಲವು ಹಾಟ್ ಅಂಡ್ ಬೋಲ್ಡ್ ಫೋಟೊಗಳನ್ನು ಶೇರ್ ಮಾಡಿದ್ದು ಇವು ವೈರಲ್ ಆಗಿದೆ. ನೂಪುರ್ ಜೊತೆಗೆ ಇರಾ ತಮ್ಮ ಸಂಬಂಧದ ಎರಡು ವರ್ಷಗಳನ್ನು ಕಳೆದಿದ್ದಾರೆ. ಅದೇ ಸಂಭ್ರಮ ಹಾಗೂ ಖುಷಿಯಲ್ಲಿ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡು, ಸೋಶಿಯಲ್ ಮೀಡಿಯಾಗಳಲ್ಲಿ ಬೋಲ್ಡ್ ನೆಸ್ ನ ಕಿಚ್ಚನ್ನು ಹೊತ್ತಿಸಿದ್ದು ನೆಟ್ಟಿಗರ ಗಮನವನ್ನು ಸೆಳೆದಿದ್ದಾರೆ.
ಸ್ವಿಮ್ಮಿಂಗ್ ಪೂಲ್ ನಲ್ಲಿ ಗೆಳಯ ನೂಪುರ್ ಜೊತೆಗೆ ಸಮಯ ಕಳೆಯುತ್ತಿರುವ ಕ್ಷಣಗಳ ಫೋಟೋಗಳನ್ನು ಇರಾ ಶೇರ್ ಮಾಡಿದ್ದಾರೆ. ಇನ್ನು ಎಂದಿನಂತೆ ಇರಾ ಅಭಿಮಾನಿಗಳು ಫೋಟೋಗಳನ್ನು ನೋಡಿ ಮೆಚ್ಚುಗೆಯ ಮಳೆಯನ್ನು ಹರಿಸುತ್ತಾ ಕಾಮೆಂಟ್ ಗಳನ್ನು ಮಾಡುತ್ತಾ ಖುಷಿ ಪಟ್ಟರೆ, ಇನ್ನೊಂದು ಕಡೆ ಟ್ರೋಲಿಗರು ಮತ್ತೊಮ್ಮೆ ಇರಾ ಅವರ ಈ ಹಾಟ್ ಲುಕ್ ನೋಡಿ ಅಸಮಾಧಾನದಿಂದ ಟೀಕೆ ಮಾಡಿದ್ದಾರೆ.