ಟ್ರಾಕ್ಟರ್ ಗೆ ಕಾರಿನ ಅದ್ಭುತ ರೂಪ ಕೊಟ್ಟ ವ್ಯಕ್ತಿ: ಖುದ್ದು ಆನಂದ್ ಮಹೀಂದ್ರಾ ಈ ಬಗ್ಗೆ ಹೇಳಿದ್ದೇನು??

Entertainment Featured-Articles News

ವಿಶ್ವದಲ್ಲಿ ಭಾರತದ ತಾಜ್ ಮಹಲ್ ಕೂಡಾ ಸೇರಿ ಈಗಾಗಲೇ ಏಳು ಅದ್ಭುತಗಳು ಇರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈ ಏಳು ಅದ್ಭುತಗಳ ವಿಷಯವನ್ನು ಸ್ವಲ್ಪ ಚಿಂತಿಸದೇ ಪಕ್ಕಕ್ಕೆ ಇರಿಸಿದರೆ ನಮ್ಮ ದೇಶದಲ್ಲಿ ಪ್ರತಿದಿನವೂ ಸಹಾ ಒಂದಲ್ಲಾ ಒಂದು ಅದ್ಭುತ ನಿಮಗೆ ನೋಡಲು ಸಿಗುತ್ತದೆ. ಏಕೆಂದರೆ ಇಲ್ಲಿನ ಜನರು ಎಂತಹ ಬುದ್ಧಿವಂತರು ಎಂದರೆ ತಮ್ಮ ಸುತ್ತ ಮುತ್ತಲು ಸಿಗುವ ವಸ್ತುಗಳನ್ನೇ ಬಳಿಸಿಕೊಂಡು ಅದ್ಭುತಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಸಂಚಲನವನ್ನು ಹುಟ್ಟು ಹಾಕಿ ಜನಪ್ರಿಯತೆ ಪಡೆದು ಬಿಡುತ್ತಾರೆ.

ಫೆಬ್ರವರಿ 22 ರಂದು ಭಾರತದ ಸುಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಾಗ ಇಂತಹುದೇ ಒಂದು ಅದ್ಭುತವನ್ನು ನೋಡುವ ಅವಕಾಶ ನೆಟ್ಟಿಗರಿಗೆ ಸಿಕ್ಕಿದೆ. ಹೌದು ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್ ನಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಅವರು ಆಗಾಗ ವಿಶೇಷ ಫೋಟೋಗಳು ಮತ್ತು ವೀಡಿಯೋಗಳನ್ನು ಶೇರ್ ಮಾಡಿಕೊಂಡು ಜನರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ.

ಅವರು ಶೇರ್ ಮಾಡುವ ಕೆಲವು ವಿಶೇಷವಾದ ಫೋಟೋಗಳು ನಮ್ಮ ಮುಂದೆ ನಮ್ಮ ದೇಶೀಯ ಪ್ರತಿಭಾವಂತರ ಪ್ರತಿಭೆ ಸಹಾ ಅನೇಕ ಸಂದರ್ಭದಲ್ಲಿ ಅನಾವರಣ ಮಾಡಲು ನೆರವಾಗುತ್ತದೆ. ಅಲ್ಲದೇ ಅನೇಕ ಸಂದರ್ಭಗಳಲ್ಲಿ ಆನಂದ್ ಮಹೀಂದ್ರಾ ಅವರು ಪ್ರತಿಭಾವಂತರಿಗೆ ತಮ್ಮ ಪ್ರೋತ್ಸಾಹವನ್ನು, ನೆರವನ್ನು ಸಹಾ ಪ್ರಕಟಣೆ ಮಾಡುವ ಮೂಲಕ ಜನರಿಂದ ಅಪಾರವಾದ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಾರೆ. ಈಗ ಅವರು ಶೇರ್ ಮಾಡಿರುವ ಫೋಟೋ ಒಂದು ಸಾಮಾನ್ಯ ಫೋಟೋ‌ ಖಂಡಿತ ಅಲ್ಲ. ಅದೊಂದು ವಿಶೇಷ ಫೋಟೋ ಆಗಿದೆ.

ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಫೋಟೋ ನೋಡಿದಾಗ, ವ್ಯಕ್ತಿಯೊಬ್ಬರು ತಮ್ಮ ದೇಶೀಯ ತಂತ್ರವನ್ನು ಬಳಸಿಕೊಂಡು ಟ್ರಾಕ್ಟರ್ ಅನ್ನು ಮಹೀಂದ್ರಾ ಥಾರ್ ನ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಮಹೀಂದ್ರಾ ಕಂಪನಿಯ ಟ್ರಾಕ್ಟರ್ ಅನ್ನು ಮಹೀಂದ್ರಾ ಥಾರ್ ರೀತಿಯಲ್ಲಿ ವಿನ್ಯಾಸಗೊಳಿಸಿರುವುದು ಸಹಜವಾಗಿಯೇ ಎಲ್ಲರ ಗಮನವನ್ನು ಸೆಳೆದಿದೆ. ಆನಂದ್ ಮಹೀಂದ್ರಾ ಅವರು ಈ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿವರಗಳಿಗೆ ಹೋದರೆ ಮೇಘಾಲಯದ ಜೊವಾಯಿ ಪ್ರಾಂತ್ಯದ ಮೈಯ್ಯಾ ರಿಂಬಾಯಿ ಎನ್ನುವ ವ್ಯಕ್ತಿಯು ಟ್ರಾಕ್ಟರ್ ಗೆ ಇಂತಹ ಹೊಸ ರೂಪವನ್ನು ನೀಡಿದ್ದಾರೆ. ಟ್ರಾಕ್ಟರ್ ನ‌ ಮುಂಭಾಗವು ಕಾರಿನಂತೆಯೇ ಕಾಣುತ್ತದೆ. ಒಟ್ಟಾರೆ ಟ್ರಾಕ್ಟರ್ ಗೆ ಮಹೀಂದ್ರಾದ ಅತ್ಯುತ್ತಮ ಎಸ್ ಯು ವಿ ಗಳಲ್ಲಿ ಒಂದಾದ ಥಾರ್ ನ ಲುಕ್ ಕೊಟ್ಟ ವ್ಯಕ್ತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿವೆ. ಸ್ವತಃ ಆನಂದ್ ಮಹೀಂದ್ರಾ ಅವರು ಕೂಡಾ ಟ್ವೀಟ್ ನಲ್ಲಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Leave a Reply

Your email address will not be published. Required fields are marked *