ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕೂಡಾ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದ ನಟ ಚೇತನ್

Entertainment Featured-Articles News

ನಟ/ ಸಾಮಾಜಿಕ ಹೋ ರಾ ಟ ಗಾರ ಎಂದೂ ಗುರುತಿಸಿಕೊಂಡ ಚೇತನ್ ಅವರು ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾದ್ಯಮಗಳಲ್ಲಿ ಸಂಚಲನ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿದ್ದಾರೆ. ಪ್ರಸ್ತುತ ನಟ ಚೇತನ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಟಿಪ್ಪು ವಿನ ವಿಚಾರದ ಕುರಿತಾಗಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ಮಾಡಿರುವ ಪೋಸ್ಟ್ ಈಗ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಶಾಲಾ ಪಠ್ಯ ಪುಸ್ತಕದಲ್ಲಿ ಮೈಸೂರು ಹುಲಿ ಎಂದು ಖ್ಯಾತನಾಗಿರುವ ಟಿಪ್ಪು ಸುಲ್ತಾನ್ ಕುರಿತಾದ ಪಠ್ಯವನ್ನು ಪಠ್ಯವನ್ನು ಕೈಬಿಡುವಂತೆ ಪಠ್ಯ ಪರಿಷ್ಕರಣಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರು ಮೈಸೂರು ಹುಲಿ ಎನ್ನುವ ಬಿರುದನ್ನು ಕೈಬಿಡುವ ಸಾಧ್ಯತೆ ಇದೆ ಎನ್ನುವ ಮಾತನ್ನು ಹೇಳಿದ್ದರು.

ಈಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಚೇತನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಚೇತನ್ ಅವರು ತಮ್ಮ ಪೋಸ್ಟ್ ನಲ್ಲಿ, ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಿಣಾ ಸಮಿತಿ ಮುಸ್ಲಿಂ ಆದ ಯಾವುದೇ ವ್ಯಕ್ತಿಯನ್ನ ಗುರಿಯಾಗಿಸುವುದರ ಮೂಲಕ ನಮ್ಮ ಇತಿಹಾಸಗಳನ್ನ ಹಿಂದುತ್ವಗೊಳಿಸುತ್ತಿದೆ. ಟಿಪ್ಪು ಇನ್ನು ಮುಂದೆ ಸ್ವಾತಂತ್ರ್ಯ ಹೋ ರಾ ಟಗಾರ ಎಂದು ಕರೆಯುವಂತಿಲ್ಲ.

ಬ್ರಿಟಿಷರ ವಿ ರು ದ್ಧ ಹೋ ರಾಡುತ್ತ ಯುದ್ಧ ಭೂಮಿಯಲ್ಲಿ ಮ ಡಿ ದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಅಂತಾದರೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡಾ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಬರೆದುಕೊಳ್ಳುವ ಮೂಲಕ ಒಂದು ಸಂಚಲನ ಸೃಷ್ಟಿಸಿದ್ದು, ಅವರ ಈ ಮಾತಿಗೆ ಪರ-ವಿ ರೋ ಧ ಮಾತುಗಳು ಕೇಳಿ ಬರುತ್ತಿವೆ.

Leave a Reply

Your email address will not be published.