ಟಾಲಿವುಡ್ ನ ಸ್ಟಾರ್ ನಟನ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಮತ್ತೋರ್ವ ಜನಪ್ರಿಯ ಕನ್ನಡ ನಟ

Entertainment Featured-Articles News

ಕಲೆ ಹಾಗೂ ಕಲಾವಿದನಿಗೆ ಭಾಷೆಯ ಗಡಿಗಳಿಲ್ಲ ಎಂದು ಮೊದಲಿನಿಂದಲೂ ಸಹಾ ಹೇಳಿಕೊಂಡು ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಅನೇಕ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲಿ ಸಹಾ ತಮ್ಮ ಪ್ರತಿಭೆಯನ್ನು ಮೆರಿದಿದ್ದಾರೆ. ಅದು ಇತ್ತೀಚಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿದೆ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಕನ್ನಡದ ಸಿನಿ ಸೆಲೆಬ್ರಿಟಿಗಳು ಹಾಗೂ ಕಿರುತೆರೆಯ ಕಲಾವಿದರ ದೊಡ್ಡ ದಂಡೇ ಬೇರೆ ಬೇರೆ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಅನ್ಯ ಭಾಷೆಗಳಲ್ಲಿ ಸಹಾ ಸಾಕಷ್ಟು ಜನಪ್ರಿಯತೆ ಪಡೆದಿರುವುದು ಮಾತ್ರವೇ ಅಲ್ಲಿನವರಂತೆ ಅಲ್ಲಿನ ಭಾಷೆ ಹಾಗೂ ಜನರ ಜೊತೆಗೆ ಬೆರೆತು ಹೋಗಿರುವ ನಟ ನಟಿಯರ ಸಂಖ್ಯೆ ಖಂಡಿತ ಕಡಿಮೆ ಇಲ್ಲ.

ಇಂತಹ ಕಲಾವಿದರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಕನ್ನಡದ ಜನಪ್ರಿಯ ನಟ ದೀಕ್ಷಿತ್ ಶೆಟ್ಟಿ‌. ನಟ ದೀಕ್ಷಿತ್ ಅವರು ನಾಗಿಣಿ 1 ನೇ ಸೀರಿಯಲ್ ನಲ್ಲಿ ಅರ್ಜುನ್ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದವರು. ಅನಂತರ ದಿಯಾ ಸಿನಿಮಾದಲ್ಲಿ ನಾಯಕನಾಗಿ ದೀಕ್ಷಿತ್ ಶೆಟ್ಟಿ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡರು. ದೀಕ್ಷಿತ್ ಶೆಟ್ಟಿ ಅವರು ತೆಲುಗಿನಲ್ಲಿ ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಟಿಎಂ‌, ಬ್ಲಿಂಕ್ ಮತ್ತು ಮೀಟ್ ಕ್ಯೂಟ್ ಸಿನಿಮಾಗಳಲ್ಲಿ ದೀಕ್ಷಿತ್ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದರಲ್ಲಿ ಮೀಟ್ ಕ್ಯೂಟ್ ಸಿನಿಮಾ‌ ನಟ ನಾನಿ ಅವರ ಬ್ಯಾನರ್ ನ ಸಿನಿಮಾ ಆಗಿತ್ತು. ಆ ಸಿನಿಮಾದಲ್ಲಿ ದೀಕ್ಷಿತ್ ಅವರ ನಟನೆ ಮಾಡಿ ನಾನಿ ಅವರೇ ತಮ್ಮ ಸಿನಿಮಾ ದಸರಾ ದಲ್ಲಿ ಸೂರಿ ಎನ್ನುವ ಖಡಕ್ ಪಾತ್ರವನ್ನು ದೀಕ್ಷಿತ್ ಶೆಟ್ಟಿ ಅವರಿಗೆ ನೀಡಿದರು ಎನ್ನಲಾಗಿದೆ. ನಾನಿ ಅವರ ಜೊತೆಗೆ ಕೆಲಸ ಮಾಡುವುದು ಬಹಳ ಉತ್ತಮವಾದ ಅನುಭವ, ಅವರು ಬಹಳ ಸಪೋರ್ಟಿವ್ ಆಗಿದ್ದಾರೆ ಎಂದು ದೀಕ್ಷಿತ್ ಅವರು ತಮ್ಮ ಅನುಭವಗಳನ್ನು ಮಾದ್ಯಮವೊಂದರ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ದಸರ ಸಿನಿಮಾದಲ್ಲಿ ನಾನಿ ಮತ್ತು ಮಹಾ ನಟಿ ಖ್ಯಾತಿಯ ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ದೀಕ್ಷಿತ್ ಅವರು ಕಮರ್ಷಿಯಲ್ ಸಿನಿಮಾದಲ್ಲಿ ಮಾಡುವ ಅನುಭವ ಬೇರೆಯದ್ದೇ ರೀತಿ ಇದೆ ಎಂದು ಸಹಾ ಹೇಳಿದ್ದಾರೆ. ಯಾವುದೇ ಕ್ಷೇತ್ರದಲ್ಲೇ ಆಗಲಿ ಉತ್ತಮವಾದ ಕೆಲಸವನ್ನು ಮಾಡಿದರೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ಹೇಳಿರುವ ಅವರು ಅನ್ಯ ಭಾಷೆಗೆ ಬಂದು ಅಲ್ಲಿ ಇಂತಹುದೊಂದು ಉತ್ತಮವಾದ ಅವಕಾಶವನ್ನು ಪಡೆಯಲು ಸಾಧ್ಯವಾಗಿರುವುದು ನಿಜಕ್ಕೂ ನಿರಂತರವಾದ ಕೆಲಸದಿಂದ ಎನ್ನುವ ಮಾತನ್ನು ಹೇಳಿದ್ದಾರೆ. ದೀಕ್ಷಿತ್ ಶೆಟ್ಟಿ ಇನ್ನಷ್ಟು ಜನಪ್ರಿಯತೆ, ಯಶಸ್ಸು ಪಡೆಯಲೆಂದು ನಾವು ಹಾರೈಸೋಣ.

Leave a Reply

Your email address will not be published.