ಟಾಲಿವುಡ್ ನಿಂದ ಹೊರಬಿದ್ದ ಶಾಕಿಂಗ್ ಸುದ್ದಿ!! ಸಮಂತಾ ಹಾದಿ ಹಿಡಿದ್ರಾ ಮೆಗಾಸ್ಟಾರ್ ಚಿರಂಜೀವಿ ಮಗಳು??
ಕೆಲವು ತಿಂಗಳುಗಳ ಹಿಂದೆ ಸ್ಟಾರ್ ನಟಿ ಸಮಂತಾ ತಮ್ಮ ಹೆಸರಿನ ಜೊತೆಗಿದ್ದ ಅಕ್ಕಿನೇನಿ ಹೆಸರನ್ನು ಸೋಶಿಯಲ್ ಮೀಡಿಯಾಗಳಿಂದ ಕೈ ಬಿಟ್ಟಾಗ ಅದೊಂದು ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಅಲ್ಲದೇ ಅಲ್ಲಿಂದಲೇ ಸಮಂತಾ ಹಾಗೂ ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸು ಗುಸು ಆರಂಭವಾಯಿತು. ಆದರೆ ಆ ವಿಷಯವು ಅಧಿಕೃತ ಆಗಿದ್ದು ಮಾತ್ರ ಅಕ್ಟೋಬರ್ ನಲ್ಲಿ, ಅಲ್ಲಿಗೆ ಸಮಂತ ನಾಗಚೈತನ್ಯ ವಿಚ್ಚೇದನದ ವಿಷಯವು ಘೋಷಣೆಯಾಗಿ, ಅವರು ಬೇರೆಯಾಗಿದ್ದು ಅಭಿಮಾನಿಗಳಿಗೆ ಶಾ ಕ್ ನೀಡಿತು. ಆದರೆ ಈ ವಿಷಯ ದೊಡ್ಡ ಸದ್ದನ್ನು ಮಾಡಿತ್ತು.
ಅವರ ವಿಚ್ಚೇದನದ ವಿಷಯ ಇನ್ನೂ ಮರೆಯುವ ಮುನ್ನವೇ ತಮಿಳು ಸ್ಟಾರ್ ನಟ ಧನುಷ್ ತಮ್ಮ ಪತ್ನಿ ಐಶ್ವರ್ಯ ಗೆ ವಿಚ್ಚೇದನ ನೀಡುತ್ತಿರುವ ವಿಷಯ ಘೋಷಿಸಿದ್ದು ಅದು ಕೂಡಾ ಈಗ ಎಲ್ಲೆಡೆ ಸುದ್ದಿಯಾಗಿ ಶಾ ಕ್ ಎನಿಸಿರುವಾಗಲೇ, ತೆಲುಗು ಚಿತ್ರರಂಗದಿಂದ ಮತ್ತೊಂದು ಸೆಲೆಬ್ರಿಟಿ ವಿವಾಹ ವಿಚ್ಛೇದನ ಆಗಬಹುದಾ?? ಎನ್ನುವ ಅನುಮಾನವೊಂದು ಹೊಗೆಯಾಡಿದೆ. ಹಾಗಾದ್ರೆ ಏನಿದು ವಿಚಾರ ಎನ್ನುವುದನ್ನು ತಿಳಿಯೋಣ ಬನ್ನಿ.
ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರ ಮಗಳು ಶ್ರೀಜಾ ಈಗ ಸಮಂತಾ ಹಾದಿಯನ್ನು ಹಿಡಿದಿದ್ದಾರೇನೋ ಎನ್ನುವ ಪ್ರಶ್ನೆ ಮೂಡಿದೆ. ಹೌದು, ಇದಕ್ಕೆ ಪ್ರಮುಖ ಕಾರಣವಾದರೂ ಏನು ಎಂದರೆ, ಮೆಗಾಸ್ಟಾರ್ ಚಿರಂಜೀವಿ ಅವರ ಮಗಳು ಶ್ರೀಜಾ ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಹೆಸರಿನ ಜೊತೆಗಿದ್ದ ಪತಿಯ ಸರ್ ನೇಮ್ ಅನ್ನು ತೆಗೆದು ಹಾಕಿದ್ದಾರೆ. ಶ್ರೀಜಾ ಹೆಸರು ಮದುವೆಯ ನಂತರ ಶ್ರೀಜಾ ಕಲ್ಯಾಣ್ ಇತ್ತು. ಆದರೆ ಈಗ ಶ್ರೀಜಾ ತಮ್ಮ ಹೆಸರನ್ನು ಶ್ರೀಜಾ ಕೊನಿಡಾಲ ಎಂದು ತಂದೆ ಮನೆಯ ಸರ್ ನೇಮ್ ಬದಲಿಸಿಕೊಂಡಿದ್ದಾರೆ.
ಶ್ರೀಜಾ ತಮ್ಮ ಹೆಸರಿನಿಂದ ಪತಿಯ ಹೆಸರನ್ನು ತೆಗೆದು ಅಪ್ಪನ ಮನೆತನದ ಹೆಸರನ್ನು ಸೇರಿಸಿರುವುದನ್ನು ಕಂಡು ಇದೀಗ ಅಭಿಮಾನಿಗಳು ಹಾಗೂ ನೆಟ್ಟಿಗರು ಅಚ್ಚರಿ ಯನ್ನು ವ್ಯಕ್ತಪಡಿಸಿದ್ದಾರೆ. ಮೆಗಾಸ್ಟಾರ್ ಮಗಳು ಕೂಡಾ ಸಮಂತಾ ದಾರಿಯನ್ನು ಅನುಸರಿಸಿದರಾ?? ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಶ್ರೀಜಾ ಮತ್ತು ಕಲ್ಯಾಣ್ ದೇವ್ ನಡುವೆ ಸಂಬಂಧ ಹಳಸಿದೆ, ಅವರ ವಿಚ್ಚೇದನ ಆಗಲಿದೆ ಎನ್ನುವ ವಿಷಯಗಳು ಟಾಲಿವುಡ್ ನಲ್ಲಿ ಹರಿದಾಡಿದೆ.