ಟಾಪ್ ಸೀರಿಯಲ್ ಗೆ ಹೀಗಾಗುತ್ತೆ ಅಂತ ಖಂಡಿತ ಯಾರೂ ಕೂಡಾ ನಿರೀಕ್ಷೆ ಮಾಡಿರಲಿಲ್ಲ!!

Entertainment Featured-Articles News

ಕನ್ನಡ ಕಿರುತೆರೆ ಎಂದೊಡನೆ ತಟ್ಟನೆ ನೆನಪಾಗೋದು ಅಂದ್ರೆ ಧಾರಾವಾಹಿಗಳು. ಹೌದು ಧಾರಾವಾಹಿಗಳಿಲ್ಲದೇ ಕಿರುತೆರೆಯನ್ನು ಊಹೆ ಕೂಡಾ ಮಾಡಿಕೊಳ್ಳುವುದು ಸಾಧ್ಯವಿಲ್ಲವೇನೋ ಎನ್ನುವಷ್ಟು ಮಟ್ಟಿಗೆ ಕಿರುತೆರೆಗೆ ಹಾಗೂ ಧಾರಾವಾಹಿಗಳ ನಡುವೆ ಒಂದು ಅವಿನಾಭಾವ ಸ್ನೇಹವಿದೆ ಎನ್ನುವುದಾದರೆ ಅದೇ ವೇಳೆ ಈ ಧಾರಾವಾಹಿಗಳು ಅಸಂಖ್ಯಾತ ಪ್ರೇಕ್ಷಕರ ಜೀವನದ ಅವಿಭಾಜ್ಯ ಅಂಗಗಳಂತೆಯೂ ಆಗಿ ಹೋಗಿದೆ ಎಂದರೆ ತಪ್ಪಾಗದು. ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳು, ಟಾಕ್ ಶೋ ಗಳು, ಗೇಮ್ ಶೋ‌ ಗಳಿದ್ದರೂ ಸಹಾ ಸೀರಿಯಲ್ ಗಳು ಈ ರೇಸ್ ನಲ್ಲಿ ಮುಂದೆ ಇದೆ.

ಸೀರಿಯಲ್ ಗಳು ಈಗಾಗಲೇ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಆದರೆ ಅದೇ ವೇಳೆ ಟಾಪ್ ಸೀರಿಯಲ್ ಎನ್ನುವ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಪ್ರತಿ ಧಾರಾವಾಹಿಯು ಸಹಾ ಪ್ರಯತ್ನ ಪಡುತ್ತದೆ. ಆದರೆ ಅದರಲ್ಲಿ ಕೆಲವು ಸೀರಿಯಲ್ ಗಳು ಮಾತ್ರವೇ ಯಶಸ್ಸನ್ನು ಪಡೆದುಕೊಳ್ಳುತ್ತವೆ. ಟಾಪ್ ಐದರಲ್ಲಿ ಸ್ಥಾನವನ್ನು ಪಡೆದು ಮಿಂಚುತ್ತವೆ. ಇನ್ನು ಈ ವಿಚಾರದಲ್ಲಿ ಕನ್ನಡದ ಒಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೆಲವು ಸೀರಿಯಲ್ ಗಳು ಸದಾ ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ ಎನ್ನಬಹುದು.

ಅಂತಹ ಸೀರಿಯಲ್ ಗಳಲ್ಲಿ ಒಂದು ಸತ್ಯ, ಬೋಲ್ಡ್ ಮತ್ತು ಬಿಂದಾಸ್ ಹುಡುಗಿ, ಕುಟುಂಬದ ಜವಾಬ್ದಾರಿ ಹೊತ್ತ ಧೈರ್ಯವಂತ ಯುವತಿಯ ಕಥೆಯನ್ನು ಆಧರಿಸಿದ ಸತ್ಯ ಸೀರಿಯಲ್ ಆರಂಭದಲ್ಲೇ ಒಂದು ಸಂಚಲನ ಸೃಷ್ಟಿಸಿತ್ತು. ಮೊದಲ ವಾರದಲ್ಲೇ ಸತ್ಯ ಟಾಪ್ ಒನ್ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜನರ ಅಪಾರವಾದ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡಿತು. ಆದರೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಸತ್ಯ ಧಾರಾವಾಹಿ ತನ್ನ ಸ್ಥಾನದಿಂದ ಒಂದೊಂದೇ ಸ್ಥಾನ ಕೆಳಗೆ ಬರಲು ಆರಂಭಿಸಿತು. ಟಾಪ್ ಒಂದರಿಂದ ಟಾಪ್ ಐದನೇ ಸ್ಥಾನಕ್ಕೆ ಕುಸಿಯಿತು.

ಈ ಬೆಳವಣಿಗೆ ಹೀಗೆ ಮುಂದುವರೆದು ಕೆಲವು ಮಾದ್ಯಮ ಸುದ್ದಿಗಳ ಪ್ರಕಾರ ಕಳೆದ ವಾರದಿಂದ ಸತ್ಯ ಟಾಪ್ ಐದರ ರೇಸ್ ನಿಂದ ಹೊರ ಬಿದ್ದಿದೆ ಎನ್ನಲಾಗಿದೆ. ಸತ್ಯ ಸ್ಥಾನಕ್ಕೆ ಬೇರೊಂದು ವಾಹಿನಿಯ ಹೊಸ ಧಾರಾವಾಹಿ ರಾಮಾಚಾರಿ ಬಂದಿದೆ. ಅದರ ಜನಪ್ರಿಯತೆ ನೋಡಿದರೆ ಮುಂದಿನ ದಿನಗಳಲ್ಲಿ ಅದು ಇನ್ನೂ ಬೇರೆ ಧಾರಾವಾಹಿಗಳಿಗೂ ಭರ್ಜರಿ ಸ್ಪರ್ಧೆ ನೀಡುವಂತೆ ಕಾಣುತ್ತಿದ್ದು, ಪ್ರೇಕ್ಷಕರು ಕೂಡಾ ಮೆಚ್ಚುಗೆಯ ಮಾತುಗಳನ್ನು ಆಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಇನ್ನು ಸತ್ಯ ಧಾರಾವಾಹಿಯ ಹೊಸ ಎಪಿಸೋಡ್ ಗಳ ಪ್ರೋಮೋ ಈಗ ಸಖತ್ ಸದ್ದು ಮಾಡಿದೆ. ಸೀರಿಯಲ್ ನಲ್ಲಿ ಹೊಸ ತಿರುವುಗಳ ಬಗ್ಗೆ ರೋಚಕ ಸುಳಿವುಗಳನ್ನು ನೀಡಿದೆ. ಸತ್ಯ ಈ ಹೊಸ ತಿರುವುಗಳ ಮೂಲಕ ಮತ್ತೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲಿದೆಯಾ? ಮತ್ತೆ ಟಾಪ್ ಐದರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು, ಟಾಪ್ ಸೀರಿಯಲ್ ಗಳ ರೇಸ್ ನಲ್ಲಿ ಮತ್ತೊಮ್ಮೆ ಭಾಗಿಯಾಗುವುದಾ? ಸದ್ಯಕ್ಕಂತೂ ಈ ಧಾರಾವಾಹಿಯ ಅಭಿಮಾನಿಗಳು ಮತ್ತೆ ಸತ್ಯ ನಂಬರ್ ಒನ್ ಆಗಬೇಕೆಂಬ ನಿರೀಕ್ಷೆ ಖಂಡಿತ ಹೊಂದಿದ್ದಾರೆ.

Leave a Reply

Your email address will not be published. Required fields are marked *