ಟಾಪ್ ಬದಲಿಗೆ ಸರಪಣಿ ಧರಿಸಿ, ಬೀಗ ಹಾಕಿ ಬೀದಿಗಿಳಿದ ನಟಿ: ನಟಿಯ ಅವತಾರ ಕಂಡು ದಂಗಾದರು ಜನ!

Entertainment Featured-Articles News

ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಸಖತ್ ಸದ್ದು ಮಾಡುತ್ತಿರುವ ನಟಿ. ಹಾಗೆಂದ ಮಾತ್ರಕ್ಕೆ ಉರ್ಫಿ ಹೊಸ ಸಿನಿಮಾಗಳೋ, ಟಿವಿ ಶೋ ಗಳಿಗಾಗಿಯೋ ಸುದ್ದಿಯಾಗುತ್ತಿದ್ದಾರೆ ಎಂದು ಕೊಳ್ಳಬೇಡಿ. ಉರ್ಫಿ ಸದ್ಧು ಮಾಡುತ್ತಿರುವುದು ತಾನು ಧರಿಸುವ ವೆರೈಟಿ, ವೆರೈಟಿ ಡ್ರೆಸ್ ಗಳಿಂದ ಹಾಗೂ ನೀಡುವ ಹೇಳಿಕೆಗಳಿಂದಾಗಿ. ಕೆಲವೇ ದಿನಗಳ ಹಿಂದೆ ಉರ್ಫಿ ಜೊತೆ ಮಾಡಿದ ಪ್ರಾಂಕ್ ವೀಡಿಯೋ ಸಹಾ ದೊಡ್ಡ ಮಟ್ಟದಲ್ಲಿ ವೈರಲ್ ಆಗಿ, ಜನ ಅದನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಹೊಸ ಪ್ರಾಜೆಕ್ಟ್ ಗಳು ಇಲ್ಲವಾದರೂ ಉರ್ಫಿ ಸಿಕ್ಕಾಪಟ್ಟೆ ಸುದ್ದಿಗಳಲ್ಲಿ ಇರುತ್ತಾರೆ.

ಓಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರ ಕಂಡಂತಹ ಬಿಗ್ ಬಾಸ್ ನ ಸ್ಪರ್ಧಿಯಾಗಿದ್ದ ಉರ್ಫಿ, ನಂತರದ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ನಂತರ ಉರ್ಫಿ ಯಾವುದೇ ಹೊಸ ಜಾಹೀರಾತು ಅಥವಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅವರು ತೊಡುವ ವಿಭಿನ್ನ ವಿನ್ಯಾಸದ ಡ್ರೆಸ್ ಗಳು ಮಾತ್ರ ಸಾಕಷ್ಟು ಸುದ್ದಿಯನ್ನು ಮಾಡುತ್ತದೆ. ಕೆಲವರು ಇದರ ಬಗ್ಗೆ ಅ ಸಮಾಧಾನವನ್ನು ಹೊರ ಹಾಕುತ್ತಾರೆ.‌ ಆದರೆ ಫ್ಯಾಷನ್ ಪ್ರಿಯರು ಮಾತ್ರ ಉರ್ಫಿ ಧರಿಸುವ ಹೊಸ ವಿನ್ಯಾಸದ ಡ್ರೆಸ್ ಗಳಿಗೆ ಮೆಚ್ಚುಗೆಯನ್ನು ಸೂಚಿಸುತ್ತಾರೆ.

ಬೇರೆಯವರು ಯಾವ ಡ್ರೆಸ್ ಗಳನ್ನು ಹಾಕಲು ಹಿಂದೆ ಮುಂದೆ ಆಲೋಚಿಸುತ್ತಾರೆಯೋ ಅಂತಹ ಡ್ರೆಸ್ ಗಳನ್ನು ಬಹಳ ಆತ್ಮವಿಶ್ವಾಸದಿಂದ ಧರಿಸಿ ತನ್ನ ಬೋಲ್ಡ್ ನೆಸ್ ಪ್ರದರ್ಶನ ಮಾಡುವಲ್ಲಿ ಉರ್ಫಿ ಒಂದು ಹೆಜ್ಜೆ ಮುಂದೆ ಇದ್ದಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಸ್ಟೈಲ್ ಸ್ಟೇಟ್ ಮೆಂಟ್ ಹಾಗೂ ಬೋಲ್ಡ್ ನೆಸ್ ವಿಚಾರದಲ್ಲಿ ಅನ್ಯ ನಟಿಯರಿಗಿಂತ ತಾನು ಒಂದು ಹೆಜ್ಜೆ ಮುಂದೆ ಇದ್ದೇನೆ ಎನ್ನುವುದನ್ನು ಸಾಬೀತು ಮಾಡುವಲ್ಲಿ ಉರ್ಫಿ ಜಾವೇದ್ ಒಂದು ಹಂತಕ್ಕೆ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಉರ್ಫಿ ಲುಕ್ ನಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುವುದು ಆಕೆ ಧರಿಸುವ ಟಾಪ್ ಗಳು. ಆದರೆ ಈ ಬಾರಿ ಉರ್ಫಿ ಬ್ರ್ಯಾಲೆಟ್ ಅಥವಾ ಕ್ರಾಪ್ ಟಾಪ್ ಧರಿಸಿಲ್ಲ, ಬದಲಾಗಿ ಕೊರಳಿಗೆ ಒಂದಷ್ಟು ಚೈನ್ ಗಳನ್ನು ಹಾಕಿಕೊಂಡಿದ್ದಾರೆ. ಆಕೆ ಧರಿಸಿದ್ದ ಸರಪಣಿ ಗಳಂತಹ ಚೈನ್ ಗಳಿಗೆ ಬೀಗಗಳನ್ನು ಸಹಾ ಹಾಕಲಾಗಿದ್ದು, ಈ ಲುಕ್ ಈಗ ಎಲ್ಲರನ್ನು ಆಶ್ಚರ್ಯಪಡುವಂತೆ ಮಾಡುತ್ತಿವೆ. ಉರ್ಫಿ ಧರಿಸಿರುವ ಸರಪಣಿ ಗಳಲ್ಲಿ ಗುಲಾಬಿ, ನೀಲಿ ಮತ್ತು ಕಪ್ಪು ಬಣ್ಣದ ಬೀಗಗಳನ್ನು ಹಾಗೂ ಸೇಫ್ಟಿ ಪಿನ್ ಗಳನ್ನು ನೋಡಬಹುದು.

ಟಾಪ್ ಧರಿಸುವ ಬದಲಾಗಿದೆ ಸರಪಣಿ ಹಾಗೂ ಬೀಗಗಳನ್ನು ಹಾಕಿಕೊಂಡು ಅದಕ್ಕೆ ಸೂಟ್ ಆಗುವಂತಹ ಬಿ ಕಿ ನಿ ಬಾಟಮ್ ಧರಿಸಿ ಅದರ ಮೇಲೆ ನೆಟೆಡ್ ಸ್ಕರ್ಟ್ ಧರಿಸಿದ್ದಾರೆ ಉರ್ಫಿ. ಎಂದಿನಂತೆ ಸೋಶಿಯಲ್ ಮೀಡಿಯಾ ಗಳಲ್ಲಿ ಈ ಫೋಟೋಗಳು ಭರ್ಜರಿ ವೈರಲ್ ಆದ ಮೇಲೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ ಈ ಬಾರಿ ಬೋಲ್ಟ್ ನೆಸ್ ನಲ್ಲಿ ಉರ್ಫಿ ಎಲ್ಲರನ್ನು ಮೀರಿದ ಒಂದು ಹಂತವನ್ನು ತಲುಪಿರುವುದು ಮಾತ್ರ ವಾಸ್ತವವಾಗಿದೆ.

Leave a Reply

Your email address will not be published. Required fields are marked *