ಟಾಕ್ ಶೋನ 2ನೇ ಸೀಸನ್ ಗೆ ಸಜ್ಜಾದ ನಟ:ಈ ಬಾರಿಯ ಅವರ ಸಂಭಾವನೆ ಕೇಳಿ ಶಾಕ್ ಆದ್ರು ಜನ!!

Written by Soma Shekar

Published on:

---Join Our Channel---

ಹಿರಿಯ ನಟರು ಅದರಲ್ಲೂ ಸ್ಟಾರ್ ನಟರಾಗಿ ಚಿತ್ರರಂಗದಲ್ಲಿ ಮೆರೆದವರು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿ, ತಮ್ಮದೇ ಆದ ಛಾಪನ್ನು ಮೂಡಿಸಿರುವವರು ಕಿರುತೆರೆಗೆ ಬರುತ್ತಾರೆ ಎಂದರೆ ಅಲ್ಲೊಂದು ಕುತೂಹಲ ಸಹಜವಾಗಿಯೇ ಮೂಡುತ್ತದೆ. ಅವರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದರೇನೇ ಬಹಳ ಆಸಕ್ತಿಯಿಂದ ನೋಡುವ ಅಭಿಮಾನಿಗಳು ಅದೇ ನಟರು ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಲಿದ್ದಾರೆ ಎಂದರೆ ಸಹಜವಾಗಿಯೇ ಉತ್ಸುಕರಾಗುತ್ತಾರೆ, ಅಂತಹ ಕಾರ್ ಕ್ರಮಗಳು ಎಲ್ಲರ ಕುತೂಹಲ ಕೆರಳಿಸುತ್ತದೆ.

ತೆಲುಗು ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ, ಇತ್ತೀಚಿಗಷ್ಟೇ ಅಖಂಡ ಸಿನಿಮಾ ಮೂಲಕ ತೆಲಗು ಸಿನಿಮಾ ರಂಗದಲ್ಲೊಂದು ಸಂಚಲನ ಸೃಷ್ಟಿಸಿರುವ ನಟ ನಂದಮೂರಿ ಬಾಲಕೃಷ್ಣ ಮೊದಲ ಬಾರಿಗೆ ಓಟಿಟಿ ವೇದಿಕೆಯಾಗಿರುವ ಆಹಾ ನಲ್ಲಿ ಒಂದು ಟಾಕ್ ಶೋ ನಿರೂಪಣೆ ಮಾಡಿದ್ದಾರೆ. ದಿ ಅನ್ ಸ್ಟಾಪಬಲ್ ಬಾಲಯ್ಯ ಎನ್ನುವ ಈ ಟಾಕ್ ಶೋ ದಲ್ಲಿ ಟಾಲಿವುಡ್ ನ ದಿಗ್ಗಜರು ಅತಿಥಿಗಳಾಗಿ ಆಗಮಿಸಿದಾಗ, ಬಾಲಕೃಷ್ಣ ತಮ್ಮದೇ ಶೈಲಿಯಲ್ಲಿ ಅವರೊಡನೆ ಸಂವಾದ ನಡೆಸಿದ್ದರು.

ಬಾಲಕೃಷ್ಣ ಅವರ ನಿರೂಪಣೆಯ ಈ ಕಾರ್ಯಕ್ರಮಕ್ಕೆ ಸಿಕ್ಕ ಯಶಸ್ಸು ನಿರೀಕ್ಷೆಗೂ ಮೀರಿದ್ದಾಗಿತ್ತು. ಇನ್ನು ಈಗ ಮೊದಲ ಸೀಸನ್ ಗೆ ಸಿಕ್ಕ ಭರ್ಜರಿ ಯಶಸ್ಸಿನ ಕಾರಣದಿಂದ ಈಗ ಮತ್ತೊಂದು ಹೊಸ ಸೀಸನ್ ಆರಂಭಮಾಡಲು ಶೋ ನ ನಿರ್ಮಾಪಕರು ತೀರ್ಮಾನ ಮಾಡಿದ್ದಾರೆ. ಮೊದಲ ಸೀಸನ್ ಗೆ ನಟ ಬಾಲಕೃಷ್ಣ ಅವರಿಗೆ ಪ್ರತಿ ಎಪಿಸೋಡ್ ಗೆ 25 ಲಕ್ಷ ರೂ ಸಂಭಾವನೆಯನ್ನು ನೀಡಲಾಗಿತ್ತು. ಪೂರ್ತಿ ಶೋ ನಡೆಸಿಕೊಡಲು ಅವರಿಗೆ ಐದು ಕೋಟಿ ರೂ. ನೀಡಲಾಗಿತ್ತು.

ಆದರೆ ಈಗ ಹೊಸ ಸೀಸನ್ ಗೆ ಶೋ ನ ನಿರ್ಮಾಪಕರು ಬಾಲಕೃಷ್ಣ ಅವರ ಸಂಭಾವನೆಯನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದ್ದಾರೆ. ಹೌದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ದಿ ಅನ್ ಸ್ಟಾಟಬಲ್ ಬಾಲಯ್ಯ ಎರಡನೇ ಸೀಸನ್ ಗೆ ಸಿದ್ಧತೆ ಗಳನ್ನು ಶೀಘ್ರದಲ್ಲೇ ಆರಂಭಿಸಲಾಗಿದ್ದು, ಈ ಬಾರಿ ಬಾಲಕೃಷ್ಣ ಅವರಿಗೆ ಪ್ರತಿ ಎಪಿಸೋಡ್ ಗೆ 40 ಲಕ್ಷ ರೂ. ಸಂಭಾವನೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಬಾಲಕೃಷ್ಣ ಓಟಿಟಿಯಲ್ಲಿ ಸಹಾ ಈಗ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

Leave a Comment