ಜ್ಯೋತಿಷ್ಯ ಶಾಸ್ತ್ರದ ಈ ಸರಳ ಪರಿಹಾರಗಳಿಂದ ಶೀಘ್ರವಾಗಿ ನಿಮ್ಮೆಲ್ಲಾ ಹಣದ ಸಮಸ್ಯೆ ದೂರವಾಗಿ, ಸುಖ, ಶಾಂತಿ ಸಿಗುತ್ತದೆ.

0 8

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯ ಕನಸನ್ನು ಕಾಣುತ್ತಾರೆ. ಅದನ್ನು ಪಡೆಯಲು ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ, ಆದರೆ ಅನೇಕ ಬಾರಿ, ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದ ನಂತರವೂ, ವ್ಯಕ್ತಿಯ ಕನಸು ನೆರವೇರುವುದಿಲ್ಲ, ಆಸೆ ಕೈಗೂಡುವುದಿಲ್ಲ. ಎಲ್ಲಾ ಕಡೆಯಿಂದ ನಿರಾಸೆಗಳಹ ಎದುರಾಗುತ್ತವೆ. ಆಗ ಅವನು ಅನ್ಯ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.‌ ನಿಮ್ಮ ಜೀವನದಲ್ಲಿ ಸಹಾ ಇಂತದ್ದೇ ವಿಚಾರಗಳು ಬಾಧಿಸುತ್ತಿದ್ದೆಯೇ??

ಹಾಗಾದರೆ, ನಿಮ್ಮ ಜೀವನದಲ್ಲಿನ ದುರದೃಷ್ಟವನ್ನು ದೂರ ಮಾಡಲು, ನೀವು ಈ ಕೆಳಗೆ ತಿಳಿಸಿರುವಂತಹ ಕೆಲವು ಸರಳವಾದ ಆದರೆ ಪರಿಣಾಮಕಾರಿಯಾದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಿ ನೋಡಿ. ಇವುಗಳನ್ನು ಪಾಲಿಸುವುದರಿಂದ ಅದು ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ತರುವುದು ಮತ್ತು ನಿಮ್ಮ ಆರ್ಥಿಕತೆಯನ್ನು ಸುಧಾರಿಸಿ, ನಿಮ್ಮ ಕುಟುಂಬದಲ್ಲೊಂದು ಸಂತೋಷ ಮತ್ತು ಸಮೃದ್ಧಿಯನ್ನು ತುಂಬಿ ಶಾಂತಿ ನೆಮ್ಮದಿಗಳ ತಾಣವನ್ನಾಗಿ ಮಾಡುವುದು.

ಶ್ರೀ ಯಂತ್ರದಿಂದ ಧನಿಕರಾಗುವ ಬಯಕೆ ಈಡೇರುತ್ತದೆ : ಕಷ್ಟಪಟ್ಟು ಕೆಲಸ ಮಾಡಿದರೂ ಸಹಾ ಸಂಪತ್ತಿನ ಅಧಿ ದೇವತೆಯಾದ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತಿಲ್ಲ ಎಂದು ನೀವು ಕೊರಗುತ್ತಿದ್ದರೆ, ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿದ್ದರೆ ಈ ಸಮಸ್ಯೆಗಳ ಪರಿಹಾರಕ್ಕಾಗಿ ನೀವು ನಿಮ್ಮ ಮನೆ ಅಥವಾ ಕೆಲಸದ ಸ್ಥಳದಲ್ಲಿ ಅದ್ಭುತವಾದ ಕೀರ್ತಿ, ಜ್ಞಾನ, ಸಂಪತ್ತು ಮತ್ತು ವೈಭವವನ್ನು ನೀಡುವ ಯಂತ್ರವನ್ನು ಸ್ಥಾಪಿಸಬೇಕು. ಶ್ರೀ ಯಂತ್ರವನ್ನು ದಿನವೂ ಭಕ್ತಿಯಿಂದ ದರ್ಶಿಸಿ, ಪೂಜಿಸಿದರೆ ಪೂಜೆ ಆರ್ಥಿಕ ಸಮಸ್ಯೆಗಳು ದೂರಾಗಿ, ಹಣದ ಸಂಗ್ರಹವು ಆರಂಭವಾಗುತ್ತದೆ.

ಕೇಸರಿಯ ಈ ಪರಿಹಾರವು ನಿಮ್ಮ ಅದೃಷ್ಟವನ್ನು ಹೊಳೆಯುವಂತೆ ಮಾಡುತ್ತದೆ: ನಿಮಗೆ ಜೀವನದಲ್ಲಿ ಅದೃಷ್ಟ ಕೈ ಹಿಡಿಯುತ್ತಿಲ್ಲ ಎನಿಸಿದರೆ, ನೀವು ಹಣೆಯಲ್ಲಿ ಧರಿಸುವ ತಿಲಕಕ್ಕೆ ಸಂಬಂಧಿಸಿದ ಈ ಸರಳ ಪರಿಹಾರಗಳನ್ನು ಮಾಡಿಕೊಳ್ಳಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂತೋಷ ಮತ್ತು ಅದೃಷ್ಟವನ್ನು ಪಡೆಯಲು ಪ್ರತಿದಿನ ಲಕ್ಷ್ಮೀ ನಾರಾಯಣನಿಗೆ ಕೇಸರಿಗ ತಿಲಕವನ್ನು ಇಡಬೇಕು. ನಂತರ ಉಳಿದ ತಿಲಕವನ್ನು ನಿಮ್ಮ ಹಣೆಯ ಮತ್ತು ಹೊಕ್ಕುಳದ ಮೇಲೆ ಪ್ರಸಾದದ ರೂಪದಲ್ಲಿ ಧರಿಸಬೇಕು. ಈ ಪರಿಹಾರದಿಂದ ಶ್ರೀಹರಿಯ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವು ಶೀಘ್ರದಲ್ಲೇ ಪ್ರಾಪ್ತವಾಗುವುದು.

ದೀಪಗಳಿಂದ ಹಣದ ಕೊರತೆ ನೀಗುವುದು : ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ನಂತರವೂ ಹಣದ ಸಮಸ್ಯೆ ಕಾಡಿದರೆ, ನೀವು ಸಂಪತ್ತಿನ ದೇವತೆಯಾದ ಮಹಾ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ದೀಪಗಳಿಗೆ ಸಂಬಂಧಿಸಿದ ಈ ಸರಳ ಜ್ಯೋತಿಷ್ಯ ಪರಿಹಾರವನ್ನು ಮಾಡಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಮಾವಾಸ್ಯೆಯ ರಾತ್ರಿಯಲ್ಲಿ ಈಶಾನ್ಯದಲ್ಲಿ, ಅಥವಾ ಪೂಜಾ ಸ್ಥಳದಲ್ಲಿ, ಕೆಂಪು ಬತ್ತಿಯನ್ನು ದೀಪದಲ್ಲಿ ಇಟ್ಟು, ಶುದ್ಧ ತುಪ್ಪವನ್ನು ಹಾಕಿ ದೀಪವನ್ನು ಬೆಳಗಿಸಿದಾಗ, ತಾಯಿ ಮಹಾಲಕ್ಷ್ಮಿಯ ಕೃಪೆಯು ಪ್ರಾಪ್ತಿಯಾಗುತ್ತದೆ.

Leave A Reply

Your email address will not be published.