ಜೋಡಿ ಹಕ್ಕಿ ಬೇರೆಯಾಯ್ತಾ? ಅನುಮಾನ ನಿಜ ಮಾಡೇ ಬಿಟ್ಟ ರಶ್ಮಿಕಾ ಮಂದಣ್ಣ‌!!

Entertainment Featured-Articles Movies News

ತೆಲುಗಿನ ಗೀತ ಗೋವಿಂದಂ ಸಿನಿಮಾದ ಮೂಲಕ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಂಡ ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಆ ಸಿನಿಮಾದ ನಂತರ ಸ್ನೇಹಿತರಾಗಿದ್ದು, ಅವರ ನಡುವೆ ಆತ್ಮೀಯತೆ ಮೂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಈ ಜೋಡಿಯ ನಡುವೆ ಇದ್ದ ಆತ್ಮೀಯತೆಯನ್ನು ಕಂಡ ಅಭಿಮಾನಿಗಳು ಇವರ ನಡುವೆ ಸ್ನೇಹಕ್ಕಿಂತ ಹೆಚ್ಚು ಬೇರೆ ಏನೋ ಇದೆ ಎನ್ನುವ ಮಾತನ್ನು ಸಹಾ ಆಡ ತೊಡಗಿದರು. ಅದಕ್ಕೆ ತಕ್ಕಂತೆ ಹಾಗೆ ಈ ಜೋಡಿ ಜಿಮ್ ನಲ್ಲಿ, ರೆಸ್ಟೋರೆಂಟ್ಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿತ್ತು.

ಒಂದು ಹಂತದಲ್ಲಿ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡಾ ಹರಡಿತು. ರಶ್ಮಿಕಾ ಇದರ ಬಗ್ಗೆ ಮಾತನಾಡಲಿಲ್ಲವಾದರೂ, ನಂತರ ನಟ ವಿಜಯ್ ದೇವರಕೊಂಡ ಇದೆಲ್ಲಾ ಸುಳ್ಳು ಎನ್ನುವ ಸ್ಪಷ್ಟನೆ ನೀಡಿದರು. ಹಿಂದೆ ಕೂಡಾ ಹಲವು ಸಂದರ್ಭಗಳಲ್ಲಿ ಇವರ ವಿಚಾರ ಬಂದಾಗಲೂ ನಾವು ಕೇವಲ ಉತ್ತಮ ಸ್ನೇಹಿತರು ಮಾತ್ರ ಅದು ಬಿಟ್ಟು ಬೇರೆ ಏನು ಇಲ್ಲ ಎನ್ನುವ ಮಾತನ್ನು ಹೇಳಿದ್ದರು. ಅಲ್ಲದೇ ತಮ್ಮ ಬಗ್ಗೆ ಹರಡುವ ಸುದ್ದಿಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಏನೋ ಆಗಿದೆ, ಅವರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿಯೊಂದು ಸುಳಿದಾಡಿದೆ. ಈಗ ಅದು ನಿಜವೇ ಎನ್ನುವ ಒಂದೊಂದೇ ಮಾಹಿತಿಗಳು ಸಿಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ನಟ ವಿಜಯ್ ದೇವರಕೊಂಡ ಅವರ ಜನ್ಮದಿನಕ್ಕೆ ಬಹಳಷ್ಟು ಜನ ಸ್ಟಾರ್ ನಟ, ನಟಿಯರು ಶುಭಾಶಯವನ್ನು ಕೋರಿದ್ದರು. ಆದರೆ ರಶ್ಮಿಕಾ ಮಾತ್ರ ತಮ್ಮ ಆತ್ಮೀಯ ಗೆಳೆಯನಿಗೆ ಯಾವುದೇ ರೀತಿಯ ಶುಭಾಶಯವನ್ನು ಕೋರಲಿಲ್ಲ.

ಮೊನ್ನೆಯಷ್ಟೇ ಬಾಲಿವುಡ್ ನ ಪ್ರಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಜನ್ಮದಿನದ ಪಾರ್ಟಿ ಬಹಳ ಅದ್ದೂರಿಯಾಗಿ ನಡೆಯಿತು. ಈ ಬಾರಿ ದಕ್ಷಿಣದ ತಾರೆಯರಿಗೂ ಕೂಡ ಆಹ್ವಾನವನ್ನು ನೀಡಲಾಗಿತ್ತು. ಹೀಗೆ ಪಾರ್ಟಿಗೆ ಆಹ್ವಾನಿತರಾಗಿದ್ದವರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೂಡಾ ಇದ್ದರು ಎನ್ನುವುದು ವಿಶೇಷ. ಇಬ್ಬರೂ ಒಂದೇ ಪಾರ್ಟಿಯಲ್ಲಿ ಇದ್ದರೂ ಜೊತೆಯಾಗಿ ಕಾಣಿಸಿಕೊಂಡಿಲ್ಲ.

ಪಾರ್ಟಿಯಲ್ಲಿ ರಶ್ಮಿಕಾ ಹಾಗೂ ವಿಷಯ ದೇವರಕೊಂಡ ತಮ್ಮ ನಡುವೆ ಒಂದು ಅಂತರವನ್ನು ಕಾಯ್ದುಕೊಂಡಿದ್ದಾರೆ. ಬಹಳಷ್ಟು ಆತ್ಮೀಯರಾಗಿರುವ ಇವರು ಒಂದೇ ಪಾರ್ಟಿಯಲ್ಲಿ ಇದ್ದರೂ ಕೂಡಾ ಜೊತೆಯಾಗಿ ಕಾಣಿಸಿಕೊಳ್ಳದೇ ಇರುವುದು ಅವರ ನಡುವೆ ಏನೋ ನಡೆದಿದೆ ಎನ್ನುವ ವಿಚಾರಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ. ಅಲ್ಲದೇ ರಶ್ಮಿಕ ಸ್ವತಃ ವಿಜಯ್ ದೇವರಕೊಂಡ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಇದೆ.

Leave a Reply

Your email address will not be published.