ಜೋಡಿ ಹಕ್ಕಿಗಳಂತೆ ಲಗ್ಗೇಜ್ ಆಟೋದಲ್ಲಿ ಅನುಶ್ರೀ, ಅರ್ಜುನ್ ಜನ್ಯಾ ಜಾಲಿ ರೈಡ್: ಡಿಕೆಡಿ ವೇದಿಕೆಯ ಮೇಲೆ ಸಂಭ್ರಮ

Entertainment Featured-Articles Movies News Viral Video

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಬಾರಿ ಈ ಯಶಸ್ವಿ ರಿಯಾಲಿಟಿ ಶೋ ನ ಆರನೇ ಸೀಸನ್ ಸಹಾ ಭರ್ಜರಿ ಯಶಸ್ಸು ಪಡೆದುಕೊಂಡು ಮುನ್ನಡೆದಿದೆ. ಡ್ಯಾನ್ಸ್ ಪ್ರಿಯರ ಮನಸ್ಸನ್ನು ಗೆದ್ದಿರುವ ಶೋ ಮನರಂಜನೆಯನ್ನು ಸಹಾ ನೀಡುತ್ತಾ ಮುಂದೆ ಸಾಗಿದೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ಗಳನ್ನು ನಿರೂಪಣೆ ಮಾಡುವ ನಿರೂಪಕಿ ಅನುಶ್ರೀ ಡಿಕೆಡಿ ಯ ನಿರೂಪಣೆಯಲ್ಲಿ ಸಹಾ ಮಿಂಚುತ್ತಿದ್ದಾರೆ.‌ ನಿರೂಪಕಿ ಅನುಶ್ರೀ ಅವರು ತಮ್ಮದೇ ಆ ಯೂಟ್ಯೂಬ್ ಚಾನೆಲ್ ಸಹಾ ಹೊಂದಿದ್ದಾರೆ.

ಅನುಶ್ರೀ ಅವರು ನಿರೂಪಣೆ ಮಾಡುವ ಡಿಕೆಡಿ ಡ್ಯಾನ್ಸ್ ಶೋ ನ ಜಡ್ಜ್ ಗಳಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಹಾ ಒಬ್ಬ ಜಡ್ಜ್ ಆಗಿದ್ದಾರೆ. ಅನು ಶ್ರೀ ಮತ್ತು ಅರ್ಜುನ್ ಜನ್ಯಾ ನಡುವಿನ ತಂಟೆ, ತಕರಾರುಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇವರ ರೀಲ್ ಜೋಡಿಯನ್ನು ಮೆಚ್ಚಿ ನೋಡುವ ದೊಡ್ಡ ಪ್ರೇಕ್ಷಕರ ಬಳಗವೇ ಇದೆ ಎನ್ನುವುದು ಸಹಾ ವಾಸ್ತವ. ಇದೀಗ ಈ ರೀಲ್ ಜೋಡಿ ಡಿಕೆಡಿ ಶೋ ನಲ್ಲಿ ನೀಡಿದ ಒಂದು ಬ್ಯೂಟಿಫುಲ್ ಪ್ರದರ್ಶನವು ಜನರನ್ನು ರಂಜಿಸಲಿದೆ.

ಹೌದು, ಡಿಕೆಡಿ ಯಲ್ಲಿ ಈ ವಾರ ಪ್ರಾಪರ್ಟಿ ರೌಂಡ್ ಇದ್ದು ಗಗನ್ ದಿಶಾ ಜೋಡಿ ಬಹಳ ಅದ್ಭುತವಾದ ಡ್ಯಾನ್ಸ್ ಪರ್ಫಾಮೆನ್ಸ್ ಎಲ್ಲರ ಮೆಚ್ಚುಗೆ ಪಡೆದಿದೆ. ಗಗನ್ ದಿಶಾ ಜೋಡಿಯು ಹೂವಿನ ಮಾರುಕಟ್ಟೆ ಥೀಮ್ ಇಟ್ಟುಕೊಂಡು ತಮ್ಮ ಡ್ಯಾನ್ಸ್ ಪ್ರದರ್ಶನವನ್ನು ನೀಡಿದ್ದಾರೆ‌. ಈ ಜೋಡಿಯ ಡ್ಯಾನ್ಸ್ ಮುಗಿದು, ಜಡ್ಜ್ ಗಳಿಂದ ಉತ್ತಮ ಪ್ರತಿಕ್ರಿಯೆಗಳು ಸಿಕ್ಕ ನಂತರ ವೇದಿಕೆ ಮೇಲೆ ಇದ್ದ ಒಂದು ಗೂಡ್ಸ್ ಆಟೋ ದಲ್ಲಿ ಅನುಶ್ರೀ ಮತ್ತು ಅರ್ಜುನ್ ಜನ್ಯಾ ಜೋಡಿ ಒಂದು ಡ್ಯಾನ್ಸ್ ಮಾಡಿದ್ದಾರೆ.

ಅನುಶ್ರೀ ಮತ್ತು ಅರ್ಜುನ್ ಜನ್ಯಾ ಲಗ್ಗೇಜ್ ಆಟೋದ ಮೇಲೆ‌ ಕುಳಿತು ಸುತ್ತಾಡಿ, ಡ್ಯಾನ್ಸ್ ಮಾಡಿದ್ದು, ಇವರ ಈ ಡ್ರಾಮಾ‌ ಭರ್ಜರಿ ಮನರಂಜನೆಯನ್ನು ನೀಡುವ ಜೊತೆಗೆ ಒಂದಷ್ಟು ಹಾಸ್ಯವನ್ನು ಸಹಾ ಹೊರ ಹೊಮ್ಮಿಸಿದೆ. ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಇದರ ಪ್ರೋಮೋವನ್ನು ಹಂಚಿಕೊಂಡಿದ್ದು, ನೋಡಿದ ಪ್ರೇಕ್ಷಕರು ಇದಕ್ಕೆ ಮೆಚ್ಚುಗೆ ನೀಡಿದ್ದಾರೆ ಮತ್ತು ಕಾಮೆಂಟ್ ಗಳನ್ನು ಮಾಡುತ್ತಾ ತಮ್ಮ ಅಭಿಪ್ರಾಯಗಳನ್ನು ಸಹಾ ಹಂಚಿಕೊಂಡಿದ್ದಾರೆ.

Leave a Reply

Your email address will not be published.