ಕನ್ನಡ ಕಿರುತೆರೆಯ ಲೋಕದ ಅತ್ಯಂತ ಜನಪ್ರಿಯ ಹಾಗೂ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಮಹತ್ವದ ತಿರುವುಗಳೊಂದಿಗೆ, ರೋಚಕ ಘಟ್ಟಗಳಲ್ಲಿ ಸಾಗುತ್ತಾ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಿದೆ. ಜೊತೆ ಜೊತೆಯಲಿ ಸೀರಿಯಲ್ ನ ಪ್ರತಿಯೊಂದು ಪಾತ್ರಕ್ಕೆ ಪ್ರೇಕ್ಷಕರ ಕಡೆಯಿಂದ ದೊಡ್ಡ ಮೆಚ್ಚುಗೆ ಸಿಕ್ಕಿದೆ. ಅಂತಹ ಪಾತ್ರಗಳಲ್ಲಿ ಒಂದು ವರ್ಧನ್ ಕುಟುಂಬದ ಸೊಸೆ, ಹರ್ಷ ವರ್ಧನ್ ಹೆಂಡತಿಯ ಪಾತ್ರವಾದ ಮಾನ್ಸಿ. ಸೀರಿಯಲ್ ಆರಂಭದಿಂದಲೂ ಇರುವ ಈ ಪಾತ್ರಕ್ಕೆ ಅದರದ್ದೇ ಆದ ವಿಶೇಷ ಮಹತ್ವ ಇದೆ.
ಆದರೆ ಈ ಪಾತ್ರದಲ್ಲಿ ಮೊದಲು ನಟಿಸುತ್ತಿದ್ದವರು ನಟಿ ಶಿಲ್ಪಾ ಐಯ್ಯರ್. ಮಾನ್ಸಿ ಪಾತ್ರಕ್ಕೊಂದು ವಿಶೇಷ ಮೆರುಗನ್ನು ನೀಡಿದ್ದ ನಟಿ ಶಿಲ್ಪಾ ಅಯ್ಯರ್ ಅವರು ಶ್ರೀಮಂತ ಮನೆತನದ ಸೊಸೆಯಾಗಿ, ತನ್ನದೇ ಆದ ಸ್ಟೈಲ್ ನಲ್ಲಿ ಮಾತನಾಡುತ್ತಾ, ಪ್ರೇಕ್ಷಕರ ಗಮನವನ್ನು ಸೆಳೆದಿದ್ದರು. ಹೀಗೆ ಮಾನ್ಸಿ ಪಾತ್ರದ ಮೂಲಕ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಶಿಲ್ಪ ಅಯ್ಯರ್ ಅವರು ಇದ್ದಕ್ಕಿದ್ದಂತೆ ತಮ್ಮ ಪಾತ್ರದಿಂದ ಹೊರ ಬಂದು, ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ನಡೆದಿದ್ದರು. ಅನಂತರ ಆ ಪಾತ್ರಕ್ಕೆ ಮತ್ತೊಬ್ಬ ಜನಪ್ರಿಯ ನಟಿ ಎಂಟ್ರಿ ಆಯಿತು.
ಶಿಲ್ಪಾ ಅಯ್ಯರ್ ಅವರು ಮಾನ್ಸಿ ಪಾತ್ರದಿಂದ ಹೊರ ಬಂದ ಮೇಲೆ ಅವರ ಅಭಿಮಾನಿಗಳಿಗೆ ಅದು ಸಾಕಷ್ಟು ಬೇಸರವನ್ನು ಉಂಟು ಮಾಡಿತ್ತು. ಶಿಲ್ಪಾ ಅವರು ಸಹಾ ತಾನು ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶೇರ್ ಮಾಡಿಕೊಂಡು, ಶೀಘ್ರದಲ್ಲೇ ಮತ್ತೊಂದು ಹೊಸ ಪ್ರಾಜೆಕ್ಟ್ ನೊಂದಿಗೆ ಬರುವುದಾಗಿ ಹೇಳಿದ್ದರು. ಈಗ ಅವರ ಅಭಿಮಾನಿಗಳ ನಿರೀಕ್ಷೆಗೆ ಉತ್ತರ ಸಿಕ್ಕಿದೆ.
ನಟಿ ಶಿಲ್ಪ ಅಯ್ಯರ್ ಅವರು ಹೊಸ ಸೀರಿಯಲ್ ಒಂದರ ಮೂಲಕ ತಮ್ಮ ಸಣ್ಣ ಬ್ರೇಕ್ ಮುಗಿಸಿಕೊಂಡು ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೌದು, ಶಿಲ್ಪ ಅವರು ಒಲವಿನ ನಿಲ್ದಾಣ ಎನ್ನುವ ಹೊಸ ಸೀರಿಯಲ್ ನಲ್ಲಿ ಸಂಗೀತಾ ಎನ್ನುವ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದಾರೆ. ಈ ಸೀರಿಯಲ್ ನಲ್ಲಿ ಅವರು ನಟ ಶ್ರೀರಾಮ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಲ್ಪಾ ಅಯ್ಯರ್ ಅವರ ಕಮ್ ಬ್ಯಾಕ್ ವಿಷಯ ತಿಳಿದು ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.