ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರಬಂದ ನಟಿ: ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಏಕೆ??

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಲೋಕದಲ್ಲಿ ದೊಡ್ಡ ಹೆಸರನ್ನು ಪಡೆದಿರುವ ಸೀರಿಯಲ್ ಜೊತೆ ಜೊತೆಯಲಿ. ಈ
ಧಾರಾವಾಹಿಯು ಪ್ರಾರಂಭವಾದ ದಿನದಿಂದಲೂ ಸಹ ಪ್ರೇಕ್ಷಕರ ಅಪಾರ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡಿದೆ. ಧಾರಾವಾಹಿ ಪ್ರಾರಂಭವಾದ ಮೊದಲನೇ ವಾರದಲ್ಲಿ ಟಿ ಆರ್ ಪಿ ವಿಚಾರದಲ್ಲಿ ಹೊಸ ದಾಖಲೆಯನ್ನು ಬರೆದು, ಕನ್ನಡ ಕಿರುತೆರೆಯಲ್ಲಿ ಒಂದು ಹೊಸ ಸಂಚಲನವನ್ನು ಸೃಷ್ಟಿ ಮಾಡಿತ್ತು. ಈ ಧಾರಾವಾಹಿ ಪ್ರಾರಂಭವಾಗಿ ಮೂರು ವರ್ಷಗಳು ಕಳೆದಿದ್ದು, ಇನ್ನು ಕೂಡಾ ಟಾಪ್ 5 ಧಾರಾವಾಹಿಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿರುವುದು ಜೊತೆ ಜೊತೆಯಲಿ ಧಾರಾವಾಹಿ ಗೆ ಇರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಜೊತೆ ಜೊತೆಯಲಿ ಧಾರಾವಾಹಿಯ ಮತ್ತೊಂದು ವಿಶೇಷತೆಯೇನೆಂದರೆ ಈ ಧಾರಾವಾಹಿಯಲ್ಲಿ ನಟಿಸಿರುವ ಅನೇಕ ಕಲಾವಿದರು ಇಂದು ಅವರು ನಿರ್ವಹಿಸುತ್ತಿರುವ ಪಾತ್ರಗಳ ಮೂಲಕವೇ ಪ್ರೇಕ್ಷಕರಿಂದ ಗುರುತಿಸಲ್ಪಟ್ಟಿದ್ದಾರೆ, ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ ಹಾಗೂ ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂಹತಹ ಅದ್ಭುತವಾದ ಸಿರಿಯಲ್ ನ ಪ್ರಮುಖ ಪಾತ್ರವಾದ ನಾಯಕ ಆರ್ಯವರ್ಧನ್ ಅವರ ಸಹೋದರ ಹರ್ಷವರ್ಧನ ಅವರ ಪತ್ನಿ ಮಾನ್ಸಿ ಪಾತ್ರ ಕೂಡಾ ಒಂದಾಗಿದೆ.

ಈ ಪಾತ್ರ ಅಂದರೆ ಮಾನ್ಸಿ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದೆಯ ಹೆಸರು ನಟಿ ಶಿಲ್ಪಾ ಅಯ್ಯರ್. ಮಾನ್ಸಿ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಟಿ ಶಿಲ್ಪಾ ಅಯ್ಯರ್ ಅವರು ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ, ಅವರು ಇನ್ನು ಮುಂದೆ ಆ ಪಾತ್ರದಲ್ಲಿ ನಟಿಸುವುದಿಲ್ಲ ಎನ್ನುವ ವಿಚಾರ ಒಂದು ಸುದ್ದಿಯಾಗಿತ್ತು. ಆದರೆ ಕೆಲವರು ಇದೆಲ್ಲಾ ಕೇವಲ ಸುಳ್ಳು ಎಂದು ಹೇಳುತ್ತಿದ್ದರು. ಆದರೆ ಈ ವಿಚಾರಕ್ಕೆ ಖುದ್ದು ನಟಿ ಶಿಲ್ಪಾ ಅಯ್ಯರ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಹೌದು, ಶಿಲ್ಪಾ ಅಯ್ಯರ್ ಅವರು, ತಾನು ಕೆಲವು ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಗೆ ಬಂದಿರುವುದಾಗಿ, ಇನ್ನು ಮುಂದೆ ಮಾನ್ಸಿ ಪಾತ್ರದಲ್ಲಿ ನಟಿಸುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಶಿಲ್ಪ ಅಯ್ಯರ್ ಅವರು ಮಾತನಾಡುತ್ತಾ ಇಷ್ಟು ದಿನ ನನಗೆ ಅಪಾರವಾದ ಪ್ರೀತಿಯನ್ನು ಕೊಟ್ಟಿರುವುದಕ್ಕೆ ಧನ್ಯವಾದಗಳು, ಇನ್ನು ಮುಂದೆ ನಾನು ಮಾಡಲಿರುವ ಹೊಸ ಪ್ರಾಜೆಕ್ಟ್ ಗಳು ಹಾಗೂ ಕೆಲಸಗಳಿಗೂ ಕೂಡಾ ಅದೇರೀತಿಯಲ್ಲಿ ಪ್ರೀತಿ ಹಾಗೂ ಸಪೋರ್ಟ್ ಅನ್ನು ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಮಾನ್ಸಿ ಪಾತ್ರಧಾರಿಯಾಗಿ ಖಂಡಿತಾ ನಾನು ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳುತ್ತೇನೆ. ಇನ್ನು ನನ್ನ ಮುಂದಿನ ಜರ್ನಿ ಏನು?? ಹೇಗೆ?? ಎಂಬುದನ್ನು ಇನ್ನು ಸ್ವಲ್ಪ ದಿನಗಳಲ್ಲೇ ತಿಳಿಸುತ್ತೇನೆ ಎಂದು ಶಿಲ್ಪಾ ಅಯ್ಯರ್ ಅವರು ಹೇಳುವ ಮೂಲಕ ತಮ್ಮ ಎಲ್ಲಾ ಅಭಿಮಾನಿಗಳಿಗೆ ಎದ್ದಿರುವ ಸುದ್ದಿ, ಅನುಮಾನಗಳಿಗೆ ಸ್ಪಷ್ಟ ಉತ್ತರವನ್ನು ನೀಡುತ್ತಾ, ಇನ್ಮುಂದೆ ತಾನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ಮುಂದುವರೆಯುತ್ತಿಲ್ಲ ಎನ್ನುವ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

Leave a Comment