ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಈಗಾಗಲೇ ರಾಜ್ಯಾದ್ಯಂತ ಅಪಾರವಾದ ಜನಮನ್ನಣೆಯನ್ನು ಪಡೆದುಕೊಂಡಿರುವ ಯಶಸ್ವಿ ಧಾರಾವಾಹಿ ಆಗಿದೆ. ಜೊತೆ ಜೊತೆಯಲಿ ಧಾರಾವಾಹಿ ಯಾವ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ ಈ ಧಾರವಾಹಿಯ ಕಲಾವಿದರನ್ನು ಜನ ಅವರ ಪಾತ್ರಗಳ ಹೆಸರಿನಿಂದಲೇ ಗುರುತಿಸುತ್ತಾರೆ. ಇನ್ನು ಈ ದಾರವಾಹಿಯಲ್ಲಿ ನಾಯಕಿ ಅನು ಸಿರಿಮನೆ ಪಾತ್ರದ ಮೂಲಕ ನಟನೆ ಹಾಗೂ ಕಿರುತೆರೆಗೆ ಎಂಟ್ರಿ ನೀಡಿದವರು ನಟಿ ಮೇಘಾ ಶೆಟ್ಟಿ. ಧಾರಾವಾಹಿಯ ನಾಯಕಿಯಾದ ಅನು ಸಿರಿಮನೆ ಪಾತ್ರದ ಮೂಲಕ ಇಂದು ಮನೆ ಮನೆ ಮಾತಾಗಿದ್ದಾರೆ ಮೇಘ ಶೆಟ್ಟಿ. ಅಪಾರ ಜನಪ್ರಿಯತೆ ಪಡೆದಿರುವ ಈ ನಟಿ ಈಗಾಗಲೇ ಸ್ಯಾಂಡಲ್ ವುಡ್ ಗೆ ಪ್ರವೇಶವನ್ನು ನೀಡಿದ್ದಾರೆ. ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಯಲ್ಲಿ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರಾವಾಹಿ ಯಿಂದ ಹೊರಗೆ ನಡೆದಿದ್ದಾರೆ ಎನ್ನುವ ಸುದ್ದಿಯೊಂದು ಮಾಧ್ಯಮಗಳಲ್ಲಿ ಬಹಳಷ್ಟು ದೊಡ್ಡ ಸದ್ದನ್ನು ಮಾಡಿತ್ತು. ಆಗ ಅವರ ಅಭಿಮಾನಿಗಳು ಬೇಸರದಿಂದ, ದಯವಿಟ್ಟು ಸೀರಿಯಲ್ ಬಿಡಬೇಡಿ ಎಂದು ಮನವಿ ಮಾಡಿದ್ದುಂಟು. ಈ ಎಲ್ಲಾ ಸದ್ದು-ಸುದ್ದಿ ಅನಂತರ ಮೇಘಾ ಶೆಟ್ಟಿ ಸ್ವತಃ ವಿಡಿಯೋ ಒಂದರ ಮೂಲಕ ಹಬ್ಬಿದ ಸುದ್ದಿಗಳ ಕುರಿತಾಗಿ ಸ್ಪಷ್ಟನೆಯನ್ನೂ ನೀಡಿದ್ದರು. ಆಗ ಮೇಘ ಅವರು ಮಾತನಾಡುತ್ತಾ, ಕುಟುಂಬ ಎಂದಾಗ ಗೊಂದಲ ಸಹಜ. ಈಗ ಗೊಂದಲ ಬಗೆಹರಿದಿದೆ. ಜೊತೆ ಜೊತೆಯಲಿ ಧಾರಾವಾಹಿ ಮುಗಿಯುವ ತನಕ ತಾನೇ ಅನು ಸಿರಿಮನೆ ಪಾತ್ರವನ್ನು ಮಾಡುತ್ತೇನೆ. ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದಗಳು. ಈ ಗೊಂದಲದಿಂದ ವೀಕ್ಷಕರಲ್ಲಿ ಆತಂಕ ಉಂಟಾಗಿತ್ತು. ಈ ಬಗ್ಗೆ ಎಲ್ಲ ವೀಕ್ಷಕರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಈ ರೀತಿ ಆಗವುದಿಲ್ಲ’ ಎನ್ನುವ ಮಾತುಗಳನ್ನು ಆಡಿದ್ದರು.
ಅದೇ ವೇಳೆ ಅವರು ಅಭಿಮಾನಿಗಳು ಹಾಗೂ ವೀಕ್ಷಕರಿಗೆ ‘ಮುಂದೆ ಈ ರೀತಿ ಸುದ್ದಿ ಕೇಳಿ ಬಂದರೆ ಅದಕ್ಕೆ ಗಮನಕೊಡಬೇಡಿ. ಮುಂದೆಯೂ ಇದೇ ರೀತಿ ಬೆಂಬಲಕೊಡಿ. ಜೊತೆ ಜೊತೆಯಲಿ ಧಾರಾವಾಹಿಯಿಂದ ನಾನು ಸಾಕಷ್ಟು ಪಡೆದುಕೊಂಡಿದ್ದೇನೆ. ನಾನು ಅದಕ್ಕೆ ಸದಾ ಚಿರಋಣಿ ಆಗಿರುತ್ತೇನೆ ಎಂದು ಹೇಳುತ್ತಾ, ಜನರು ನೀಡಿರುವ ಪ್ರೀತಿ ವಿಶ್ವಾಸವು ಸದಾ ಹೀಗೆ ಮುಂದುವರೆಯಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು. ಈಗ ಇವೆಲ್ಲವುಗಳ ನಂತರ ಮೇಘಾ ಶೆಟ್ಟಿ ಅವರು ಮತ್ತೊಂದು ಸಂತೋಷದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ತಮ್ಮ ಮನೆಗೆ ಆಗಮಿಸಿರುವ ಇಬ್ಬರು ಹೊಸ ಅತಿಥಿಗಳ ಪರಿಚಯವನ್ನು ತಮ್ಮ ಅಭಿಮಾನಿಗಳಿಗೆ ಮಾಡಿಸಿದ್ದಾರೆ.
ನಟಿ ಮೇಘಾ ಶೆಟ್ಟಿ ಅವರ ಮನೆಗೆ ಆಗಮಿಸಿರುವ ಹೊಸ ಅತಿಥಿಗಳು ಯಾರೆಂದರೆ ಅವು ಎರಡು ಐಶಾರಾಮೀ ಕಾರುಗಳಾಗಿವೆ. ಹೌದು ಮೇಘ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬಿಎಂಡಬ್ಲ್ಯು ಹಾಗೂ ಎಂಜಿ ಹೆಕ್ಟರ್ ಕಾರು ತಮ್ಮ ಮನೆಗೆ ಬಂದಿ ಬಂದಿರುವ ವಿಷಯವನ್ನು ಹಾಗೂ ತಮ್ಮ ಸಂತೋಷವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯಲ್ಲಿ ಹೊಸ ಕಾರುಗಳ ಫೋಟೋಗಳನ್ನು ಹಾಕಿ ಸುಸ್ವಾಗತ ಎಂದು ಬರೆದುಕೊಂಡಿದ್ದಾರೆ. ಮೇಘಾ ಶೆಟ್ಟಿ ಅವರು ಪೋಸ್ಟ್ ಮಾಡಿದ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಬಹಳ ಖುಷಿ ಪಡುತ್ತಿದ್ದಾರೆ.