ಜೊತೆ ಜೊತೆಯಲಿ ಖ್ಯಾತಿಯ ನಟ ಅನಿರುದ್ಧ್ ಅವರ ಪತ್ನಿಯನ್ನು ಅರಸಿ ಬಂದ ಪ್ರಶಸ್ತಿ: ಸಂತೋಷ ಹಂಚಿಕೊಂಡ ನಟ

Written by Soma Shekar

Published on:

---Join Our Channel---

ಜೊತೆ ಜೊತೆಯಲಿ ಧಾರಾವಾಹಿ ಇಂದು ನಾಡಿನ ಮೂಲೆ ಮೂಲೆಗಳಲ್ಲಿ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸುಪ್ರಸಿದ್ಧ ಸೀರಿಯಲ್ ಎನಿಸಿಕೊಂಡಿದೆ. ಧಾರಾವಾಹಿ ಆರಂಭವಾದಾಗಿನಿಂದ ಇಂದಿನವರೆಗೂ ಸಹಾ ಈ ಧಾರಾವಾಹಿ ಜನರ ಮೆಚ್ಚುಗೆಯನ್ನು, ಪ್ರೀತಿ ಆದರ ಗಳನ್ನು ಪಡೆದುಕೊಂಡು ಮುಂದೆ ಸಾಗಿದೆ. ಇನ್ನು ಈ ಸೀರಿಯಲ್ ನ ಪ್ರತಿಯೊಂದು ಪಾತ್ರ ಹಾಗೂ ಆ ಪಾತ್ರಧಾರಿಗಳಿಗೂ ಸಹಾ ವಿಶೇಷವಾದ ಜನ ಮನ್ನಣೆಯು ದೊರೆತಿರುವ ವಿಚಾರವು ನಮಗೆಲ್ಲಾ ತಿಳಿದೇ ಇದೆ.

ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟ ಅನಿರುದ್ದ್ ಅವರು ತಮ್ಮ ಕಿರುತೆರೆಯ ಜರ್ನಿಯನ್ನು ಆರಂಭಿಸಿದರು. ಆರ್ಯವರ್ಧನ್ ಆಗಿ ಕಿರುತೆರೆಯ ಮೇಲೊಂದು ಅದ್ಭುತವಾದ ಪಾತ್ರ ಮೂಲಕ ಕಾಣಿಸಿಕೊಂಡ ಅನಿರುದ್ಧ್ ಅವರ ಪಾತ್ರ ಯಾವ ಮಟ್ಟಕ್ಕೆ ಜನಪ್ರಿಯತೆ ಪಡೆದಿದೆ ಎಂದರೆ ಅ‌ನಿರುದ್ಧ್ ಅವರಿಗೆ ಸಿ‌ನಿಮಾಗಳಲ್ಲೂ ಸಿಗದ ಒಂದು ಜನಪ್ರಿಯತೆಯನ್ನು ಜೊತೆ ಜೊತೆಯಲಿ ತಂದು ಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆರ್ಯವರ್ಧನ್ ಆಗಿ ಜನರನ್ನು ರಂಜಿಸುತ್ತಾ ಇರುವ ನಟ ಅನಿರುದ್ಧ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಅನೇಕ ವಿಚಾರಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಕಾಳಜಿಯ ವಿಷಯಗಳಿಂದ ಹಿಡಿದು, ತಮ್ಮ ವೈಯಕ್ತಿಕ ವಿಚಾರಧಾರೆಯ ವರೆಗೂ ಹತ್ತು ಹಲವು ವಿಚಾರಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾರೆ.

ಇದೀಗ ಅನಿರುದ್ಧ್ ಅವರು ತಮ್ಮ ಪತ್ನಿಗೆ ಸಂಬಂಧಿಸಿದ ಹಾಗೆ ಒಂದು ಸಂತೋಷದ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು ಅನಿರುದ್ಧ್ ಅವರ ಪತ್ನಿ ಶ್ರೀಮತಿ ಕೀರ್ತಿ ಅವರಿಗೆ ಪ್ರಶಸ್ತಿಯೊಂದು ಒಲಿದು ಬಂದಿದ್ದು, ಅನಿರುದ್ಧ್ ಅವರು ಆ ಫೋಟೋಗಳನ್ನು ಶೇರ್ ಮಾಡಿಕೊಂಡು ಒಂದೆರಡು ಸಾಲುಗಳನ್ನು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

ಅನಿರುದ್ಧ್ ಅವರು ತಮ್ಮ ಪೋಸ್ಟ್ ನಲ್ಲಿ, “ನನ್ನ ಅರ್ಧಾಂಗಿ ಶ್ರೀಮತಿ ಕೀರ್ತಿಯವರಿಗೆ ‘ಚಿತ್ತಾರ’ ಕಡೆಯಿಂದ ‘ಗೋಲ್ಡನ್ ವಿಮೆನ್ಸ ಅಚೀವರ್ಸ್‌ ಅವಾರ್ಡ’ ಬಂದಿದೆ… ‘ಚಿತ್ತಾರ’ ಶಿವಕುಮಾರ್ ಸರ್ ರವರಿಗೆ, ಸಿಬ್ಬಂದಿವರ್ಗಕ್ಕೆ ಮತ್ತು ತಮ್ಮೆಲ್ಲರಿಗೂ ತಮ್ಮೆಲ್ಲರ ಹಾರೈಕೆ, ಪ್ರೋತ್ಸಾಹ, ಆಶೀರ್ವಾದಕ್ಕೆ ಕೋಟಿ ಕೋಟಿ ನಮನಗಳು” ಎಂದು ಬರೆದುಕೊಂಡಿದ್ದಾರೆ. ಅವರು ಶೇರ್ ಮಾಡಿದ ಪೋಸ್ಟ್ ಗೆ ಅನೇಕ ಮಂದಿ ಕಾಮೆಂಟ್ ಮಾಡಿ ಶುಭಾಶಯವನ್ನು ತಿಳಿಸುತ್ತಿದ್ದಾರೆ.

Leave a Comment