ಕನ್ನಡ ಕಿರುತೆರೆಯ ಸೀರಿಯಲ್ ಗಳ ವಿಷಯ ಬಂದಾಗ ಬಹಳ ಬೇಗ ಹೆಸರಿಸುವ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ ಎನ್ನುವಷ್ಟರ ಮಟ್ಟಕ್ಕೆ ಈ ಸೀರಿಯಲ್ ಜನಪ್ರಿಯತೆ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕನ್ನಡ ಕಿರುತೆರೆಯ ಲೋಕದಲ್ಲಿ ತನ್ನ ಆಗಮನದ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸೀರಿಯಲ್ ಜೊತೆ ಜೊತೆಯಲಿ. ಸೀರಿಯಲ್ ಪ್ರಸಾರ ಆರಂಭ ಮಾಡಿದ ಕೆಲವೇ ದಿನಗಳಲ್ಲಿ ಟಿ ಆರ್ ಪಿ ಯಲ್ಲಿ ಹೊಸ ದಾಖಲೆ ಬರೆದು ಕಿರುತೆರೆಯ ಲೋಕ ಈ ಸೀರಿಯಲ್ ಕಡೆಗೆ ನೋಡುವಂತೆ ಆಗಿತ್ತು. ನಂಬರ್ ಒನ್ ಸೀರಿಯಲ್ ಆಗಿ ದೀರ್ಘಕಾಲದವರೆಗೂ ಮಿಂಚಿದ್ದ ಈ ಸೀರಿಯಲ್ ನ ಕಲಾವಿದರು ಜನರಿಗೆ ತಮ್ಮ ಪಾತ್ರಗಳ ಮೂಲಕವೇ ಹತ್ತಿರವಾದರು. ಇದೀಗ ಈ ಸೀರಿಯಲ್ ನ ಬಹಳ ಪ್ರಮುಖವಾದ ಘಟ್ಟ ಪ್ರಸಾರಕ್ಕೆ ಸಜ್ಜಾಗಿದೆ.
ಹೌದು, ಜೊತೆ ಜೊತೆಯಲಿ ಸೀರಿಯಲ್ ನ ನಾಯಕ ಆರ್ಯವರ್ಧನ್ ಹಾಗೂ ನಾಯಕಿ ಅನು ಸಿರಿಮನೆ ಮದುವೆ ಅದ್ದೂರಿಯಾಗಿ ನಡೆಯಲು ಎಲ್ಲಾ ಸಿದ್ಧತೆಗಳು ನಡೆದಿವೆ. ಸೀರಿಯಲ್ ನಲ್ಲಿ ಜೊತೆ ಜೊತೆಯಲಿ ಆರ್ಯ ಮತ್ತು ಅನು ಮದುವೆ ಸಡಗರ ಜನರ ಮುಂದೆ ಬಂದು ಮನರಂಜನೆ ನೀಡಲಿದೆ. ಈ ವಿಜೃಂಭಣೆಯಿಂದ ನಡೆಯಲಿರುವ ಮದುವೆ ಸನ್ನಿವೇಶಗಳ ಮೇಕಿಂಗ್ ನ ಕುರಿತಾದ ವೀಡಿಯೋವನ್ನು ಸೀರಿಯಲ್ ನ ನಿರ್ದೇಶಕರಾದ ಆರೂರು ಜಗದೀಶ್ ಅವರು ಶೇರ್ ಮಾಡಿಕೊಂಡಿದ್ದಾರೆ. ಆರ್ಯ ಅನು ಮದುವೆಗೆ ಸಜ್ಜಾಗಿರುವ ಅದ್ಭುತ ಮದುವೆ ಸೆಟ್ ನ ದೃಶ್ಯಾವಳಿಗಳನ್ನು ನಿರ್ದೇಶಕರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವೀಡಿಯೋದಲ್ಲಿ ಸೀರಿಯಲ್ ನ ಪ್ರಮುಖ ಪಾತ್ರಧಾರಿಗಳು ಮದುವೆ ಕುರಿತಾಗಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ತಮ್ಮ ಪಾತ್ರದ ಮುಖೇನವೇ ತಮ್ಮ ಮಾತು ಹೇಳಿದರೆ, ಇನ್ನೂ ಕೆಲವರು ಸೀರಿಯಲ್ ನಲ್ಲಿ ವಿವಾಹದ ದೃಶ್ಯಗಳ ಅದ್ಭುತ ಮೇಕಿಂಗ್ ಕುರಿತಾಗಿ ಹೇಳಿದ್ದಾರೆ. ಇನ್ನು ಸೀರಿಯಲ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ನಟಿ ವಿಜಯಲಕ್ಷ್ಮೀ ಸಿಂಗ್ ಅವರು ಮಾತನಾಡುತ್ತಾ, ಇತಿಹಾಸದಲ್ಲೇ ಈ ರೀತಿಯಲ್ಲಿ ಆಗಿಲ್ಲ ಅಷ್ಟು ಅದ್ಭುತವಾಗಿ ವಾಹಿನಿಯವರು ನಡೆಸಿಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇತರೆ ಕಲಾವಿದರು ಕೂಡಾ ಮದುವೆ ಗಾಗಿ ನಡೆಸಿರುವ ಸಿದ್ಧತೆ ನೋಡಿ ಇದೊಂದು ಮಾಯಾ ಲೋಕ ಎಂದಿದ್ದಾರೆ.
ನಿರ್ದೇಶಕರು ಶೇರ್ ಮಾಡಿಕೊಂಡಿರುವ ಪ್ರೊಮೋ ನೋಡಿದ ಬಹಳಷ್ಟು ಜನ ಸೀರಿಯಲ್ ನ ಅಭಿಮಾನಿಗಳು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ. ಪ್ರೊಮೋ ಬಹಳ ಸುಂದರವಾಗಿದೆ, ಕುತೂಹಲ ಮೂಡಿಸಿದೆ, ಅದ್ಭುತವಾಗಿದೆ ಸಿದ್ಧತೆಗಳು, ಆರ್ಯ ಹಾಗೂ ಅನು ಮದುವೆಯನ್ನು ಕಿರುತೆರೆಯಲ್ಲಿ ನೋಡುವುದಕ್ಕೆ ನಾವು ಕಾತರರಾಗಿದ್ದೇವೆ ಎಂದು ಜನ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನು ಕೆಲವರು ಕೊರೊನಾ ಟೈಮ್ ಇದು ಮದುವೆಯನ್ನು ಸರಳವಾಗಿ ಮಾಡಿ ಖರ್ಚು ಮಾಡುವ ಹಣವನ್ನು ಬಡವರಿಗೆ ನೀಡಿ ಎಂದೂ ಸಲಹೆಯನ್ನು ನೀಡಿದ್ದಾರೆ. ಒಟ್ಟಾರೆ ಆರ್ಯವರ್ಧನ್ ಮತ್ತು ಅನು ಸಿರಿಮನೆ ಮದುವೆ ಎಪಿಸೋಡ್ ಗಳಿಗಾಗಿ ಜನ ಕಾಯುತ್ತಿದ್ದಾರೆ.