ಜೀ ಕನ್ನಡ ವಾಹಿನಿಯ ಬಹು ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿ ಕಳೆದ ಕೆಲವು ದಿನಗಳಿಂದಲೂ ಸಹಾ ಸಖತ್ ಸದ್ದು ಮಾಡಿದೆ. ಆದರೆ ಈ ಬಾರಿ ಸೀರಿಯಲ್ ಟಿ ಆರ್ ಪಿ ವಿಚಾರದಲ್ಲೋ, ಹೊಸ ದಾಖಲೆ ಬರೆದ ವಿಚಾರದಲ್ಲೋ ಅಲ್ಲ. ಬದಲಾಗಿ ಸೀರಿಯಲ್ ನಲ್ಲಿ ಉಂಟಾಗಿರುವ ವಿ ವಾ ದ ವಾಗಿದೆ. ಜೊತೆ ಜೊತೆಯಲಿ ಸೀರಿಯಲ್ ನ ನಾಯಕ, ಆರ್ಯವರ್ಧನ್ ಪಾತ್ರದಲ್ಲಿ ಆಗುತ್ತಿರುವ ಬಹು ದೊಡ್ಡ ಬದಲಾವಣೆ ಈಗ ಅನೇಕ ಕಿರುತೆರೆಯ ಪ್ರೇಕ್ಷಕರ ಹಾಗೂ ಸೀರಿಯಲ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ನಟ ಅನಿರುದ್ಧ್ ಅವರನ್ನು ಸೀರಿಯಲ್ ನಿಂದ ಕೈ ಬಿಟ್ಟಿರುವುದು ಅಧಿಕೃತವಾಗಿ ಘೋಷಣೆಯಾಗಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ.
ಆದರೆ ಆರ್ಯವರ್ಧನ್ ಅವರನ್ನು ಸೀರಿಯಲ್ ನಿಂದ ಕೈ ಬಿಟ್ಟ ನಂತರ ಎದ್ದಿರುವ ಪ್ರಮುಖವಾದ ಪ್ರಶ್ನೆ ಏನೆಂದರೆ ನಟ ಅನಿರುದ್ಧ ಅವರ ಜಾಗಕ್ಕೆ ಬರಲಿರುವ ಹೊಸ ನಟ ಯಾರು? ಎನ್ನುವುದು. ಏಕೆಂದರೆ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ದ್ ಅವರನ್ನು ಅಪಾರವಾಗಿ ಮೆಚ್ಚಿರುವ ಪ್ರೇಕ್ಷಕರ ಮನಸ್ಸನ್ನು ಮೆಚ್ಚಿಸುವ ಇನ್ನಾವ ನಟ ಇದ್ದಾರೆ ಎನ್ನುವ ನಿರೀಕ್ಷೆ ಹಲವರಲ್ಲಿ ಇದೆ. ಅಲ್ಲದೇ ಈಗಾಗಲೇ ಮಾದ್ಯಮ ಸುದ್ದಿಗಳಲ್ಲಿ ಒಂದಷ್ಟು ಹೆಸರುಗಳು ಹರಿದಾಡಿದೆ. ಕನ್ನಡ ನಟ ಕಾರ್ತಿಕ್ ಜಯರಾಂ, ಮತ್ತೊಬ್ಬ ಜನಪ್ರಿಯ ನಟ ಹರೀಶ್ ರಾಜ್, ಹಿರಿಯ ನಟ ಸುನೀಲ್ ಪುರಾಣಿಕ್ ಹೆಸರುಗಳು ಮಾತ್ರವೇ ಅಲ್ಲದೇ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು ಸಹಾ ಕೇಳಿ ಬಂದಿತ್ತು.
ಆದರೆ ಅನಂತರ ನಿರ್ದೇಶಕ ಅನೂಪ್ ಭಂಡಾರಿ ಅವರು ತಮಗೆ ಆಫರ್ ಬಂದಿದ್ದೇನೋ ನಿಜ, ಆದರೆ ತಾನು ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಹೇಳಿದ್ದರು. ಈಗ ಈ ಎಲ್ಲಾ ಸುದ್ದಿಗಳ ನಡುವೆ ಹೊಸ ಸುದ್ದಿಯೊಂದು ಹೊರ ಬಂದಿದೆ. ಆರ್ಯವರ್ಧನ್ ಪಾತ್ರಕ್ಕೆ ನಟ ಹರೀಶ್ ರಾಜ್ ಅವರೇ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಇನ್ನೂ ವಾಹಿನಿ ಅಥವಾ ಸೀರಿಯಲ್ ನಿರ್ಮಾಪಕರು ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಅನಿರುದ್ಧ್ ಅವರು ಮಾಡಿದ ದೃಶ್ಯಗಳು ಮುಗಿದಿದ್ದು, ಶೀಘ್ರದಲ್ಲೇ ಹೊಸ ನಟ ಎಂಟ್ರಿ ಆಗಬೇಕಿದೆ. ಬಹುಶಃ ವಾಹಿನಿ ಅಥವಾ ಸೀರಿಯಲ್ ತಂಡ ಶೀಘ್ರದಲ್ಲೇ ಹೊಸ ನಟನ ಹೆಸರನ್ನು ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆ ಗಳು ಇವೆ.