ಜೊತೆಜೊತೆಯಲಿ ಸೀರಿಯಲ್ ನ ಮೀರಾ ಇದೀಗ ತೆಲುಗಿನಲ್ಲಿ ರಾಜನಂದಿನಿ: ಸಿಹಿ ಸುದ್ದಿ ನೀಡಿದ ನಟಿ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆ ಲೋಕದಲ್ಲಿ ಕಳೆದ ಎರಡು ವರ್ಷಗಳಿಂದಲೂ ಸಹ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿರುವ ಧಾರಾವಾಹಿಗಳ ಸಾಲಿನಲ್ಲಿ ಮಂಚೂಣಿಯಲ್ಲಿರುವ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ. ಈ ಧಾರಾವಾಹಿ ಆರಂಭದಿಂದಲೇ ದೊಡ್ಡ ಸದ್ದು, ಸುದ್ದಿಯನ್ನು ಮಾಡಿದ್ದು ಟಿ ಆರ್ ಪಿ ವಿಚಾರದಲ್ಲಿ ಹಿಂದೆ ಯಾವ ಧಾರಾವಾಹಿಯೂ ಮಾಡದಂತಹ ಒಂದು ಸಾಧನೆಯನ್ನು ಮಾಡಿ ಹೊಸದೊಂದು ದಾಖಲೆಯನ್ನು ಬರೆಯಿತು. ಜೊತೆ ಜೊತೆಯಲಿ ಧಾರಾವಾಹಿ ನಾಡಿನ ಜನ ಮೆಚ್ಚಿದ ಧಾರಾವಾಹಿಯಾಗಿ ಭರ್ಜರಿ ಮನರಂಜನೆ ನೀಡುತ್ತಾ ಮನೆ ಮನೆಮಾತಾಯಿತು. ಈ ದಾರವಾಹಿಯು ಎಷ್ಟು ಪ್ರಸಿದ್ದಿಯಾಯಿತು ಎಂದರೆ ಜನರು ಧಾರಾವಾಹಿಯಲ್ಲಿ ನಟಿಸುವ ಕಲಾವಿದರನ್ನು ಅವರ ಪಾತ್ರಗಳಿಂದಲೇ ಗುರುತಿಸುವ ಮಟ್ಟಕ್ಕೆ ಬೆಳೆಯಿತು.

ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಾಯಕ ಆರ್ಯವರ್ಧನ್ ಅವರ ಸೆಕ್ರೆಟರಿ ಯಾಗಿ ಕಾಣಿಸಿಕೊಳ್ಳುವ ಪಾತ್ರ ಮೀರಾ ಅಥವಾ ಮೀರಾ ಹೆಗಡೆ ಪಾತ್ರ.‌ ಈ ಪಾತ್ರದ ಮೂಲಕವೇ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ಮಾನ್ಸಿ ಮನೋಹರ್. ಇದೀಗ ಮಾನ್ಸಿ ಮನೋಹರ್ ಅವರು ಹೊಸ ಸಿಹಿಸುದ್ದಿ ಒಂದನ್ನು ಎಲ್ಲರ ಜೊತೆಗೆ ಹಂಚಿ ಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿರುವ ಫೋಟೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅದು ಮಾತ್ರವೇ ಅಲ್ಲದೆ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಇನ್ನೊಂದು ಕಡೆ ಅವರ ಅಭಿಮಾನಿಗಳು ಮಾನ್ಸಿ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಹಾಗಾದರೆ ಮಾನ್ಸಿ ಮನೋಹರ್ ಅವರು ಹಂಚಿಕೊಂಡ ಆ ಸಿಹಿ ಸುದ್ದಿ ಏನು?? ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿರುವುದು ಏಕೆ?? ಎನ್ನುವುದಾದರೆ,‌ಅದರ ಬಹಳ ಆಸಕ್ತಿಕರವಾದ ಉತ್ತರ ಇಲ್ಲಿದೆ. ಜೊತೆ ಜೊತೆಯಲಿ ಧಾರಾವಾಹಿ ಕನ್ನಡದಲ್ಲಿ ಬಹಳಷ್ಟು ಜನಪ್ರಿಯಗೊಂಡ ಮೇಲೆ ತೆಲುಗಿನಲ್ಲಿ ಸಹಾ ಈ ಧಾರವಾಹಿ ಅಲ್ಲಿನ ಕಲಾವಿದರ ಜೊತೆಗೆ ರಿಮೇಕ್ ಮಾಡಲಾಗಿದೆ. ತೆಲುಗಿನಲ್ಲಿ ಪ್ರೇಮ ಎಂತ ಮಧುರಂ ಎನ್ನುವ ಹೆಸರಿನೊಂದಿಗೆ ಜೊತೆ ಜೊತೆಯಲಿ ಧಾರಾವಾಹಿ ಮೂಡಿಬರುತ್ತಿದ್ದು, ಜನರ ಪ್ರೀತಿಯನ್ನು ಗಳಿಸಿ ಮುಂದೆ ಸಾಗಿದೆ.

ಇದೀಗ ಇದೇ ತೆಲುಗು ಧಾರವಾಹಿಯಲ್ಲಿ ಮಾನ್ಸಿ ಮನೋಹರ್ ಅವರು ಬಹಳ ಪ್ರಮುಖವಾದದ್ದು ಹಾಗೂ ಆರ್ಯವರ್ಧನ್ ಹಿಂದಿನ ಜೀವನದ ಕಥೆಯೊಂದಿಗೆ ಬೆರೆತ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತೆಲುಗು ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಮಾನ್ಸಿ ಯವರು ರಾಜನಂದಿನಿ ಉಡುಗೆಯಲ್ಲಿ ಸಿದ್ಧವಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ರಾಜನಂದಿನಿ ಯಾಗಿ( ಬೀಯಿಂಗ್ ರಾಜನಂದಿನಿ ) ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತೆಲುಗು ಧಾರಾವಾಹಿಯಲ್ಲಿ ರಾಜನಂದಿನಿಯಾಗಿ ಪಾತ್ರ ನಿರ್ವಹಿಸುತ್ತಿರುವ ಮಾಹಿತಿಯನ್ನು ನೀಡಿದ್ದಾರೆ.

ಇನ್ನು ತೆಲುಗಿನಲ್ಲಿ ರಾಜ ನಂದಿನಿ ಪಾತ್ರ ಪ್ರವೇಶ ಮಾಡುತ್ತಿದೆ ಎಂದ ಮೇಲೆ ಕನ್ನಡದಲ್ಲಿ ಏಕೆ ಇನ್ನೂ ರಾಜನಂದಿನಿ ಎಂಟ್ರಿ ಆಗಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಹಾಗಾದರೆ ಕನ್ನಡದಲ್ಲೂ ಸಹಾ ರಾಜನಂದಿನಿ ಆಗಮನ ಆಗುವುದು ಯಾವಾಗ?? ರಾಜನಂದಿನಿಯಾಗಿ ಯಾವ ನಟಿ ಬರುವರು? ಇದೆಲ್ಲದಕ್ಕೂ ಕಾಯಲೇ ಬೇಕಾಗಿದೆ. ಈಗಂತೂ ಮಾನ್ಸಿ ಅವರ ರಾಜನಂದಿನಿ ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ಮಳೆ ಹರಿಸಿದ್ದಾರೆ.

Leave a Comment