ಜೈಲು ಅಧಿಕಾರಿಗಳಿಗೆ ದೊಡ್ಡ ತಲೆನೋವಾದ ಶಾರೂಖ್ ಖಾನ್ ಪುತ್ರ ಆರ್ಯನ್: ಇಷ್ಟಕ್ಕೂ ಆತ ಮಾಡಿದ್ದೇನು??
ಡ್ರ ಗ್ಸ್ ಪ್ರಕರಣದ ವಿಚಾರದಲ್ಲಿ ನಟ ಶಾರುಖ್ ಖಾನ್ ಪುತ್ರ ಜೈಲುಪಾಲಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ನ್ಯಾಯಾಂಗ ಬಂ ಧ ನದಲ್ಲಿ ಇರುವ ಆರ್ಯನ್ ಖಾನ್ ನನ್ನು ಮುಂಬೈನ ಆರ್ಥರ್ ರೋಡ್ ನಲ್ಲಿ ಇರುವ ಜೈಲಿನಲ್ಲಿ ಇರಿಸಲಾಗಿದೆ. ಅಪ್ಪ ಶಾರೂಖ್ ಮತ್ತು ಅಮ್ಮ ಗೌರಿ ಖಾನ್ ಮಗನನ್ನು ಜಾಮೀನಿನ ಮೇಲೆ ಹೊರ ತರಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಆದರೆ ಯಾವುದೇ ಪ್ರಯತ್ನಗಳು ಸಹಾ ಫಲಿಸುತ್ತಿಲ್ಲ. ಈಗ ಇವೆಲ್ಲವುಗಳ ನಡುವೆ ಆರ್ಯನ್ ಖಾನ್ ಇರುವ ಜೈಲಿನಿಂದ ಹೊಸ ಮಾಹಿತಿಯೊಂದು ಹೊರಗೆ ಬಂದಿದ್ದು, ಆರ್ಯನ್ ಖಾನ್ ಜೈಲು ಅಧಿಕಾರಿಗಳಿಗೆ ತಲೆ ನೋವಾಗಿದ್ದಾನೆ ಎನ್ನಲಾಗಿದೆ.
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಐಶಾರಾಮೀ ಬದುಕಿನ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ. ಅಂತಹ ಸೂಪರ್ ಸ್ಟಾರ್ ನ ಮಗನಾದ ಆರ್ಯನ್ ಖಾನ್ ಹುಟ್ಟಿದಾಗಿನಿಂದಲೂ ಸಕಲ ಸವಲತ್ತುಗಳನ್ನು ಪಡೆದುಕೊಂಡು, ಐಶಾರಾಮೀ ಜೀವನದ ಸುಖ ಭೋಗಗಳನ್ನು ಅನುಭವಿಸುತ್ತಾ ಬಹಳ ಆರಾಮವಾಗಿ ಜೀವನ ನಡೆಸುತ್ತಿದ್ದ. ಆದರೆ ಇದೀಗ ಜೈಲಿನಲ್ಲಿ ಹೊಂದಿಕೊಳ್ಳುವುದು ಆತನಿಗೆ ಕಷ್ಟವಾಗಿದೆ. ಇಂತಹುದೊಂದು ದಿನವನ್ನು ನಿರೀಕ್ಷೆ ಮಾಡದ ಆರ್ಯನ್ ಜೈಲಿನಲ್ಲಿ ವರ್ತಿಸುತ್ತಿರುವ ವಿಧಾನ ಅಧಿಕಾರಿಗಳಿಗೆ ತಲೆ ಬಿಸಿಯನ್ನುಂಟು ಮಾಡಿದೆ.
ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ಆರ್ಯನ್ ಖಾನ್ ಜೈಲಿನಲ್ಲಿ ಹೊಂದಿಕೊಳ್ಳಲಾಗದೆ ಪರದಾಡುತ್ತಿದ್ದು, ಜೈಲಿನ ಶೌಚಾಲಯವನ್ನು ಬಳಸಲು ಹಿಂದೇಟು ಹಾಕುತ್ತಿದ್ದಾನೆ. ಶೌಚಾಲಯಕ್ಕೆ ಹೋಗುವುದನ್ನು ತಡೆಯುವುದಕ್ಕಾಗಿಯೇ ಊಟ, ನೀರು ಸೇವನೆ ಕಡಿಮೆ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಆತ ಜೈಲಿನಲ್ಲಿ ಸ್ನಾನ ಮಾಡಲು ಸಹಾ ಒಪ್ಪಿಲ್ಲವೆಂದು ಹೇಳಲಾಗಿದ್ದು, ಆರ್ಯನ್ ನ ಈ ವರ್ತನೆ ಅಧಿಕಾರಿಗಳಿಗೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.
ಆರ್ಯನ್ ತನ್ನ ಇಂತಹ ವರ್ತನೆಯಿಂದ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಿಕೊಂಡರೆ ಮುಂದಿನ ವಿಚಾರಣೆ ಹೇಗೆ?? ವಿಚಾರಣೆಗೆ ತೊಂದರೆ ಉಂಟಾಗಬಹುದು ಎನ್ನುವ ಕಾರಣಕ್ಕೆ ಶಾರುಖ್ ಮಗನನ್ನು ಬೇರೊಂದು ಸೆಲ್ ಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲಿ ಯಾರ ಭೇಟಿಗೂ ಅವಕಾಶವನ್ನು ನೀಡಿಲ್ಲವಾದರೂ, ವೀಡಿಯೋ ಕಾಲ್ ಮೂಲಕ ತಂದೆ ತಾಯಿ ಜೊತೆಯಲ್ಲಿ ಮಾತನಾಡಲು ಅವಕಾಶ ನೀಡಲಾಗಿದೆ. ಆರ್ಯನ್ ಅಕ್ಟೋಬರ್ 20 ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿದೆ.