ಜೈಲಿಂದ ಹೊರ ಬಂದ್ರೂ ಬುದ್ಧಿ ಬರ್ಲಿಲ್ಲ:ಮತ್ತೆ ಅರೆಸ್ಟ್ ಆದ ತೆಲುಗು ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ

Entertainment Featured-Articles News
42 Views

ಸೋಶಿಯಲ್ ಮೀಡಿಯಾ ಪ್ರಸ್ತುತ ಬಹಳ ಪ್ರಭಾವಶಾಲೀ ಮಾದ್ಯಮ. ಇದು ಯಾರನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಿ ನಿಲ್ಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದೆಷ್ಟೋ‌ ಜನರು ಸೋಶಿಯಲ್ ಮೀಡಿಯಾಗಳಿಂದಾಗಿಯೇ ಇಂದು ಸ್ಟಾರ್ ಗಳು, ಸೆಲೆಬ್ರಿಟಿಗಳು ಆಗಿದ್ದಾರೆ. ಆದರೆ ಅದೇ ಸೋಶಿಯಲ್ ಮೀಡಿಯಾಗಳನ್ನು ಕೆಲವು ಪುಂಡ ಪೋಕರಿಗಳು, ಅಯೋಗ್ಯರು ತಮ್ಮ ಹುಚ್ಚಾಟಗಳನ್ನು ಆಡುವುದು ಕೂಡಾ ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸ್ವಲ್ಪ ಹೆಸರು ಬಂದ ಕೂಡಲೇ ಅತಿಯಾಗಿ ಆಡಲು ತೊಡಗುತ್ತಾರೆ.

ಹೀಗೆ ಸೋಶಿಯಲ್ ಮೀಡಿಯಾ ಮೂಲಕವೇ ದೊಡ್ಡ ಹೆಸರನ್ನು ಮಾಡಿದವರಲ್ಲಿ ತೆಲುಗಿನ ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ ಕೂಡಾ ಒಬ್ಬ. ಫನ್ನಿ ವೀಡಿಯೋಗಳ ಮೂಲಕ ಬಹು ಬೇಗ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡು ಸ್ಟಾರ್ ಆದವನು. ಆದರೆ ಅವಕಾಶದ ಆಸೆ ತೋರಿಸಿ ಬಾಲಕಿಯೊಬ್ಬಳನ್ನು ತನ್ನ ಬಲೆಗೆ ಬೀಳಿಸಿಕೊಂಡು, ಲೈಂ ಗಿ ಕ ದೌ ರ್ಜ ನ್ಯ ಎಸಗಿ ಏಪ್ರಿಲ್ 18 ರಂದು ಭಾರ್ಗವ್ ಅರೆಸ್ಟ್ ಆಗಿದ್ದ. ಆತನ ಮೇಲೆ ಕೇಸು ದಾಖಲಾಗಿತ್ತು‌.

ಜೂನ್ 15 ರಂದು ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು ಕೋರ್ಟ್. ಜಾಮೀನಿನ ಮೇಲೆ ಹೊರ ಬಂದ ಭಾರ್ಗವ್ ಇನ್ನಾದರೂ ತಿದ್ದಿಕೊಂಡು ಹೋಗುವ ಬಹುದಿತ್ತು. ಆದರೆ ಜಾಮೀನಿನ ಮೇಲೆ ಹೊರ ಬಂದ ಆತ ತನ್ನ ಆಟಗಳನ್ನು ಮುಂದುವರೆಸಿದ. ಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘನೆ ಮಾಡಿದ ಪರಿಣಾಮ ಜಾಮೀನು ರದ್ದಾಗಿ ಈಗ ಮತ್ತೆ ಜೈಲು ಸೇರುವಂತಾಗಿದೆ. ಜಾಮೀನು ಷರತ್ತು ಉಲ್ಲಂಘನೆ ಅಡಿಯಲ್ಲಿ ಡಿಎಸ್ಪಿ ಪ್ರೇಮ್ ಕಾಜಲ್ ಮೆಮೋ ಹೊರಡಿಸಿದ್ದರು.

ಕೇಸ್ ವಿಚಾರಣೆ ಇನ್ನೂ ಪ್ರಗತಿ ಯಲ್ಲಿ ಇರುವಾಗಲೇ ಹೊರಗೆ ಸಾಕ್ಷಿಗಳನ್ನು ಬೆದರಿಸುವುದು, ಅವರನ್ನು ಪ್ರಭಾವಿತರನ್ನಾಗಿ ಮಾಡಲು ಹೇಳಿಕೆಗಳನ್ನು ನೀಡುವಂತಹ ಕೆಲಸಗಳನ್ನು ಭಾರ್ಗವ್ ಮಾಡುತ್ತಿರುವುದಾಗಿ ಮೆಮೋ ದಲ್ಲಿ ತಿಳಿಸಿದ ವಿಚಾರಗಳನ್ನು ಪರಿಶೀಲಿಸಿದ ಕೋರ್ಟ್ ಜಾಮೀನು ರದ್ದು ಮಾಡಿದೆ. ಈ ತಿಂಗಳ 11 ರ ವರೆಗೆ ರಿಮ್ಯಾಂಡ್ ನಲ್ಲಿ ಇಡುವಂತೆ ಕೋರ್ಟ್ ಆದೇಶ ನೀಡಿದ್ದರಿಂದ ಫನ್ ಬಕೆಟ್ ಭಾರ್ಗವನನ್ನು ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.

Leave a Reply

Your email address will not be published. Required fields are marked *