ಜೇಮ್ಸ್ ಸಿನಿಮಾ ಮಾಸ್ಟರ್ ಪೀಸ್ ಆಗಲಿದೆ:ಪೋಸ್ಟರ್ ಶೇರ್ ಮಾಡಿ ಮನದ ಮಾತು ಹಂಚಿಕೊಂಡ ಪ್ರಭಾಸ್

Entertainment Featured-Articles News

ಕನ್ನಡ ಚಿತ್ರರಂಗದ ಸ್ಟಾರ್ ನಟ, ನಾಡಿನ ಜನರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಂದು ಸ್ಮರಣೆ ಮಾತ್ರ ಎನ್ನುವುದನ್ನು ಕನ್ನಡಿಗರು ಒಪ್ಪಲಾಗದ ಒಂದು ಕಟು ವಾಸ್ತವವಾಗಿದೆ. ಏಕೆಂದರೆ ಪುನೀತ್ ರಾಜಕುಮಾರ್ ಅವರು ಜನರ ಮನಸಿನಲ್ಲಿ ಒಂದು ಮಹೋನ್ನತ ಸ್ಥಾನವನ್ನು, ಶಾಶ್ವತ ನೆಲೆಯನ್ನು ಪಡೆದುಕೊಂಡಿದ್ದಾರೆ. ಅವರು ಮಾಡಿರುವ ಮಾನವೀಯ ಕಾರ್ಯಗಳಿಂದಾಗಿಯೇ ಜನ ಅವರನ್ನು ಅಷ್ಟೊಂದು ಪ್ರೀತಿ ಹಾಗೂ ಆದರದಿಂದ ಗೌರವಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಟೀಸರ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದೆ.

ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆ ಮೊತ್ತದಲ್ಲಿ ವೀಕ್ಷಣೆಯನ್ನು ಕಂಡಿದೆ. ಬೆಳ್ಳಿತೆರೆಯ ಮೇಲೆ ಪುನೀತ್ ರಾಜಕುಮಾರ್ ಅವರು ಹೊಸ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಕೊನೆಯ ಸಿನಿಮಾ ಇದಾಗಿರುವುದರಿಂದ ಈ ಸಿನಿಮಾ ಭಾವನಾತ್ಮಕವಾಗಿ ಕೂಡಾ ಕನ್ನಡ ಚಿತ್ರಪ್ರೇಮಿಗಳು ಹಾಗೂ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಜೊತೆಗೆ ಬೆಸೆದುಕೊಳ್ಳುತ್ತಿದೆ. ಇನ್ನು ಸಿನಿಮಾ ಟೀಸರ್ ಬಿಡುಗಡೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹಲವು ಸಿನಿಮಾ ಸೆಲೆಬ್ರಿಟಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಜೇಮ್ಸ್ ಸಿನಿಮಾದ ಟೀಸರ್ ಅನ್ನು ಶೇರ್ ಮಾಡಿಕೊಂಡು ಅಭಿಮಾನದ ಮಾತುಗಳನ್ನು ಆಡಿದ್ದಾರೆ. ಹೀಗೆ ಜೇಮ್ಸ್ ಟೀಸರ್ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡ ನಟರಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಕೂಡಾ ಸೇರಿದ್ದಾರೆ. ಹೌದು ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆಯ ನಂತರ ಪ್ರಭಾಸ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಜೇಮ್ಸ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಪೋಸ್ಟರ್ ಶೇರ್ ಮಾಡಿಕೊಂಡ ನಟ ಪ್ರಭಾಸ್ ಅವರು ಅದರೊಂದಿಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ ಪ್ರಭಾಸ್ ಅವರು, “ಖಂಡಿತವಾಗಿ ನಾವೊಂದು ಮಾಸ್ಟರ್ ಪೀಸ್ ಸಿನಿಮಾಕ್ಕೆ ಸಾಕ್ಷಿಯಾಗಲಿದ್ದೇವೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಮೆಚ್ಚುವ ನಮ್ಮಂತಹ ಮಿಲಿಯನ್ ಗಟ್ಟಲೆ ಜನರಿಗೆ ಜೇಮ್ಸ್ ಸಿನಿಮಾ ಬಹಳ ವಿಶೇಷವಾಗಲಿದೆ, ಮಿಸ್ ಯು ಅಪ್ಪು ಸರ್” ಎಂದು ಬರೆದುಕೊಂಡು, ನಟ ಪುನೀತ್ ಅವರಿಗೆ ತಮ್ಮ ಗೌರವ ಹಾಗೂ ಅಭಿಮಾನವನ್ನು ಮೆರೆದಿದ್ದಾರೆ.

Leave a Reply

Your email address will not be published.