ಜೇಮ್ಸ್ ಟೀಸರ್ ಬಿಡುಗಡೆ: ಕನ್ನಡದ ಸ್ಟಾರ್ ನಟರಿಂದ ಮಾತ್ರ ಇನ್ನೂ ಯಾವುದೇ ಪ್ರತಿಕ್ರಿಯೆ ಇಲ್ಲ??

Entertainment Featured-Articles News

ಜೇಮ್ಸ್ ಇದು ಕನ್ನಡ ಚಿತ್ರರಂಗದ ಪಾಲಿಗೆ ಇದೊಂದು ವಿಶೇಷ ಸಿನಿಮಾ, ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಇದು ಮರೆಯಲಾಗದ ಸಿನಿಮಾ ಕೂಡಾ ಆಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.‌ ಕನ್ನಡದ ಕಣ್ಮಣಿ, ನಾಡಿನ ಜನರ ಹೃದಯದಲ್ಲಿ ಯಾವ ನಟನೂ ಪಡೆಯದಂತಹ ಮಹೋನ್ನತ ಸ್ಥಾನವನ್ನು ಪಡೆದ ಹೋಗಿರುವ, ಜನರ ಮನಸ್ಸಿನಲ್ಲಿ ಶಾಶ್ವತ ನೆಲೆ ಪಡೆದಿರುವ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಸಿನಿಮಾ ಆಗಿದೆ ಜೇಮ್ಸ್. ಪುನೀತ್ ಅವರನ್ನು ಹೊಸ ಸಿನಿಮಾ ಒಂದರಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಿರುವ ಕೊನೆಯ ಸಿನಿಮಾ ಇದಾಗಿದೆ.

ಜನ, ಪುನೀತ್ ಅವರ ಅಭಿಮಾನಿಗಳು ಹಾಗೂ ಸಿನಿಮಾ ಸೆಲೆಬ್ರಿಟಿಗಳು ಕೂಡಾ ಪುನೀತ್ ಅವರ ಕೊನೆಯ ಸಿನಿಮಾವನ್ನು ನೋಡಲು ಉತ್ಸುಕರಾಗಿದ್ದಾರೆ. ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಆಗಿ ಸಿನಿಮಾ ತೆರೆಗೆ ಬರಲಿದೆ. ಟೀಸರ್ ಬಿಡುಗಡೆ ನಂತರ ಪುನೀತ್ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ನಾಡಿನ ಜನರು ಕೂಡಾ ಥ್ರಿಲ್ ಆಗಿದ್ದಾರೆ. ಶಿವರಾಜ್ ಕುಮಾರ್ ಅವರು ತಮ್ಮ ಸಹೋದರನಿಗೆ ಈ ಸಿನಿಮಾದಲ್ಲಿ ದನಿಯಾಗಿರುವುದು ಮತ್ತೊಂದು ವಿಶೇಷವಾಗಿದೆ.

ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಟೀಸರ್ ಬಿಡುಗಡೆ ನಂತರ ಅನೇಕರು ಇದನ್ನು ವೀಕ್ಷಣೆ ಮಾಡಿ ಟೀಸರ್ ದಾಖಲೆ ಮಟ್ಟದಲ್ಲಿ ವೀಕ್ಷಣೆಗಳನ್ನು ಕೆಲವೇ ಗಂಟೆಗಳಲ್ಲಿ ಪಡೆದು ಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಅಲ್ಲದೇ ಕನ್ನಡ ಕಲಾವಿದರು ಈ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಪುನೀತ್ ಅವರ ಮೇಲಿನ ತಮ್ಮ ಅಭಿಮಾನ, ಪ್ರೀತಿಯನ್ನು ಮೆರೆದಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಕನ್ನಡದ ಕೆಲವು ಸ್ಟಾರ್ ನಟರು ಮಾತ್ರ ಜೇಮ್ಸ್ ಟೀಸರ್ ಅನ್ನು ಶೇರ್ ಮಾಡಿಕೊಂಡಿಲ್ಲ.

ಹೌದು, ಜೇಮ್ಸ್ ಒಂದು ಕಮರ್ಷಿಯಲ್ ಸಿನಿಮಾ ಎನ್ನುವುದಕ್ಕಿಂತ ಅದೊಂದು ಭಾವನಾತ್ಮಕ ಸಿನಿಮಾ ಆಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದ್ದರಿಂದಲೇ ಇಲ್ಲಿ ಸ್ಟಾರ್ ಗಳು ಎನ್ನುವುದಕ್ಕಿಂತ ಅಗಲಿದ ಮೇರು ನಟನ ಗೌರವ, ಭಾವನೆಗಳು ಎನ್ನುವುದು ಮುಖ್ಯವಾಗಿದೆ. ಆದರೆ ಕನ್ನಡದ ಮೂವರು ದೊಡ್ಡ ಸ್ಟಾರ್ ನಟರು ಜೇಮ್ಸ್ ಟೀಸರ್ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಇರುವುದು ಖಂಡಿತ ಕುತೂಹಲವನ್ನು ಮೂಡಿಸಿದ್ದು, ಬಹುಶಃ ಅವರು ಕೆಲಸದಲ್ಲಿ ಅಷ್ಟೊಂದು ಬ್ಯುಸಿಯಾಗಿದ್ದಾರೇನು? ಎನ್ನುವ ಪ್ರಶ್ನೆ ಮೂಡಿಸಿದೆ.

ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮೂವರು ಸಹಾ ಇನ್ನೂ ಕೂಡಾ ಜೇಮ್ಸ್ ಟೀಸರ್ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ನಟ ಸುದೀಪ್ ಅವರು ಕಡೆಯದಾಗಿ ತಮಿಳಿನ ವಾಲಿಮೈ ಸಿನಿಮಾದ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಅದಾದ ನಂತರ ಅವರು ಯಾವುದೇ ಹೊಸ ಪೋಸ್ಟ್ ಹಾಕಿಲ್ಲ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹಾ ಯಾವ ಪ್ರತಿಕ್ರಿಯೆ ನೀಡಿಲ್ಲ.

ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕೆಜಿಎಫ್-2 ಸಿನಿಮಾದ ವಿಚಾರವಾಗಿ ಬ್ಯುಸಿಯಾಗಿದ್ದಾರೆ ಎನ್ನುವ ವಿಷಯವು ಎಲ್ಲರಿಗೂ ತಿಳಿದೇ ಇದೆ. ಇವರು ಯಾರೂ ಕೂಡಾ ಇನ್ನೂ ಪುನೀತ್ ಅವರ ಜೇಮ್ಸ್ ಟೀಸರ್ ಅನ್ನು ನೋಡಿಲಿಲ್ಲವೇ? ಎನ್ನುವ ಪ್ರಶ್ನೆಯೊಂದಿದೆ. ಬಹುಶಃ ಬಿಡುವಿನ ಸಮಯ ಮಾಡಿಕೊಂಡು ಅನಂತರ ತಮ್ಮ ಅಭಿಪ್ರಾಯ ಶೇರ್ ಮಾಡಿಕೊಳ್ಳುವರಾ? ಎನ್ನುವ ನಿರೀಕ್ಷೆಯೊಂದು ಖಂಡಿತ ಎಲ್ಲರಲ್ಲೂ ಇದೆ. ಒತ್ತಡದ ಕೆಲಸಗಳ ನಡುವೆ ಅವರಿಗೆ ಟೀಸರ್ ನೋಡಲು ಸಮಯ ಸಿಗದೇ ಇರುವ ಸಾಧ್ಯತೆಗಳು ಇರಬಹುದು. ಒಟ್ಟಾರೆ ಈ ಮೂವರ ಪ್ರತಿಕ್ರಿಯೆಗಾಗಿ ಅಭಿಮಾನಿಗಳು ಕಾದಿರುವುದು ನಿಜ.

Leave a Reply

Your email address will not be published. Required fields are marked *