ಜೇಂಡೆ ಹೆಣೆದ ಬಲೆಯಲ್ಲಿ ಸಿಲುಕಿದಳಾ ಅನು: ಆರ್ಯನ ಆ್ಯಕ್ಸಿಡೆಂಟ್ ಜೇಂಡೆಯ ತಂತ್ರವಲ್ಲ ತಾನೇ??

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳ ಹೆಸರು ಬಂದಾಗ ಅಲ್ಲಿ ಜೊತೆ ಜೊತೆಯಲಿ ಇದ್ದೇ ಇರುತ್ತದೆ.‌ ಹೌದು, ಈ ಧಾರಾವಾಹಿ ಈಗಾಗಲೇ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡು ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿದೆ. ಹಲವು ಟ್ವಿಸ್ಟ್ ಹಾಗೂ ಟರ್ನ್ ಗಳ ಮೂಲಕ ಜನರ ಗಮನವನ್ನು ಸೆಳೆದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಧಾರಾವಾಹಿಯ ಮಹತ್ವದ ಘಟ್ಟ ಪ್ರಸಾರವಾಗುತ್ತಿದ್ದು, ಆರ್ಯ ವರ್ಧನ್ ಹಾಗೂ ಜೇಂಡೆಯ ಅಸಲಿ ಮುಖ ಏನು ಅನ್ನೋದು ಅನು ಹಾಗೂ ಮೀರಾ ಇಬ್ಬರಿಗೂ ತಿಳಿದಾಗಿದೆ. ಅವರ ಆಟಕ್ಕೆ ಅಂತ್ಯ ಹಾಡಲು ಇಬ್ಬರೂ ಸಜ್ಜಾಗಿದ್ದಾರೆ.

ಅನು ಹರ್ಷವರ್ಧನ್ ಮುಂದೆ ಆರ್ಯ ಮತ್ತು ಜೇಂಡೆಯ ಅಸಲಿಯತ್ತನ್ನು ಸಾಬೀತು ಮಾಡಿದ್ದಾಳೆ. ಆದರೆ ಹರ್ಷನ ಪರಿಸ್ಥಿತಿ ಮಾತ್ರ ಗೊಂದಲದ ಗೂಡಾಗಿದೆ. ತಾನು ಅಪಾರವಾದ ನಂಬಿಕೆ ಇಟ್ಟ ತನ್ನ ದಾದಾ ಇಂತಹ ಕೆಲಸವನ್ನು ಮಾಡಿದ್ರಾ? ಅನ್ನೋದನ್ನು ಹರ್ಷನಿಂದ ನಂಬೋದು ಸಾಧ್ಯವಾಗಿಲ್ಲ. ಆದರೆ ಅನು ಅವನಿಗೆ ತಿಳಿ ಹೇಳುವ ಪ್ರಯತ್ನವನ್ನು ಮಾಡಿದ್ದಾಳೆ. ಹರ್ಷ ಸರಿದಾರಿಗೆ ಬರಬಹುದೇನೋ ಎನ್ನುವ ವೇಳೆಗೆ ಹೊಸದೊಂದು ಸಮಸ್ಯೆ ಉದ್ಭವವಾಗಿದೆ.

ಆರ್ಯನಿಗೆ ಅಪಘಾತವಾಗಿ ಹಾಸಿಗೆ ಹಿಡಿದಿದ್ದಾನೆ. ಆರ್ಯನ ಮೇಲೆ ಸೇ ಡು ತೀರಿಸಿಕೊಳ್ಳಲು ಕಾದಿದ್ದ ಅನು ಸಂದಿಗ್ಧಕ್ಕೆ ಸಿಲುಕಿದ್ದಾಳೆ. ಗಂಡನ ಸೇವೆ ಮಾಡಬೇಕೋ ಅಥವಾ ಅವನ ವಿ ರು ದ್ಧ ನಿಲ್ಲಬೇಕೋ ಅರಿಯದ ಪರಿಸ್ಥಿತಿ ಅವಳದ್ದು‌. ಇದೇ ವೇಳೆ ಜೋಗತವ್ವನು ಸತ್ಯ ಏನೆಂದು ತಿಳಿಯೋಕೆ ಇದೊಂದು ಅವಕಾಶ ಎಂದು ಹೇಳಿದ ಮಾತು ಇನ್ನಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಮತ್ತೆ ಎಂತಹ ಹೊಸ ತಿರುವು ಬರಲಿದೆ ಎನ್ನುವ ಪ್ರಶ್ನೆ ಮೂಡಿದೆ.

ಅಲ್ಲದೇ ಆರ್ಯನ ಆ್ಯಕ್ಸಿಡೆಂಟ್ ಸಹಾ ಒಂದು ಸುಳ್ಳು ಏಕಾಗಿರಬಾರದು ಎನ್ನುವ ಶಂಕೆ ಕೂಡಾ ಇದೆ. ಇದೆಲ್ಲವೂ ಜೇಂಡೆಯ ಕಿತಾಪತಿ ಎನ್ನುವುದು ನೋಡಿದ ಕೂಡಲೇ ಅರ್ಥವಾಗುವಂತೆ ಇದೆ‌. ಅಲ್ಲದೇ ಜೇಂಡೇ ಶಾನುಭೋಗ್ ಅವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾನೆ. ಇದೆಲ್ಲವನ್ನೂ ನೋಡಿದಾಗ ಜೇಂಡಾ ಅನು ಓಟಕ್ಕೆ ತಡೆ ಹಾಕಲು, ಅನು ಸಿದ್ಧಪಡಿಸುತ್ತಿರುವ ಯೋಜನೆಗಳಿಗೆ ಕಡಿವಾಣ ಹಾಕಲು ಹೊಸ ತಂತ್ರವನ್ನು ಹೆಣೆದಂತೆ ಭಾಸವಾಗುತ್ತಿದೆ. ಈ ತಂತ್ರದಲ್ಲಿ ಅನು ಸಿಲುಕಿ ಕೊಳ್ತಾಳಾ ಅನ್ನೋದೆ ಈಗ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published.