ದಕ್ಷಿಣ ಸಿನಿಮಾಕ್ಕೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಎಂಟ್ರಿ? NTRಗೆ ನಾಯಕಿ ಆಗ್ತಿದ್ದಾರಾ ಜಾಹ್ನವಿ??

Entertainment Featured-Articles News

ಬಾಹುಬಲಿ, ಕೆಜಿಎಫ್ , ಪುಷ್ಪ ಗಳಂತಹ ದಕ್ಷಿಣದ ಸಿನಿಮಾಗಳು ಬಾಲಿವುಡ್ ನ ಅಂಗಳದಲ್ಲಿ ದಕ್ಷಿಣ ಸಿನಿಮಾಗಳ ಸಾಮರ್ಥ್ಯ ಏನು ಎಂದು ಪ್ರದರ್ಶನ ಮಾಡುವ ಮೂಲಕ ಬಾಲಿವುಡ್ ಸಿನಿಮಾಗಳಿಗೆ ದೊಡ್ಡ ಸ್ಪರ್ಧೆಯನ್ನು ನೀಡಿ ಮಿಂಚಿದ ಸಿನಿಮಾಗಳಾಗಿವೆ. ಈ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ಬಾಲಿವುಡ್ ಮತ್ತು ದಕ್ಷಿಣ ಸಿನಿಮಾರಂಗದ ನಡುವೆ ಇದ್ದಂತಹ ಅಡೆ ತಡೆಗಳು ಮುರಿದುಬಿದ್ದಿದೆ. ಅಲ್ಲದೇ ಬಾಲಿವುಡ್ ಕೂಡಾ ದಕ್ಷಿಣದ ಸಿನಿಮಾ ರಂಗದ ಕಡೆಗೆ ಅಚ್ಚರಿಯ ಕಣ್ಣುಗಳಿಂದ ನೋಡಲು ಪ್ರಾರಂಭಿಸಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟಿ ಮಣಿಯರು ಸಹಾ ದಕ್ಷಿಣ ಸಿನಿಮಾಗಳಲ್ಲಿ ನಟಿಸಲು ಆಸಕ್ತಿಯನ್ನು ತೋರಿಸುತ್ತಿದ್ದಾರೆ.

ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದಂತಹ ಹಿರಿಯ ನಟಿ, ದಿವಂಗತ ನಟಿ ಶ್ರೀದೇವಿ ಕೂಡಾ ದಕ್ಷಿಣ ಸಿನಿಮಾ ರಂಗದಿಂದ ಬಾಲ ನಟಿಯಾಗಿ ಅಡಿಯಿಟ್ಟವರು. ನಂತರ ದಕ್ಷಿಣದಲ್ಲಿ ಹಾಗೂ ಬಾಲಿವುಡ್ ನಲ್ಲಿ ನಂಬರ್‌ 1 ನಟಿಯಾಗಿ ಬಾಲಿವುಡ್ ಚಿತ್ರ ಸೀಮೆಯನ್ನು ಆಳಿದ್ದೂ ನಿಜ. ಈ ನಟಿಯ ಮಗಳು ಜಾಹ್ನವಿ ಕಪೂರ್ ಈಗಾಗಲೇ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಆದರೆ ಜಾಹ್ನವಿ ಕಪೂರ್ ದಕ್ಷಿಣದಲ್ಲಿ ಮಾತ್ರ ಇನ್ನೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

ಕಳೆದ ಕೆಲವು ತಿಂಗಳುಗಳಿಂದಲೂ ಸಹಾ ಜಾಹ್ನವಿ ತಮ್ಮ ದಕ್ಷಿಣದ ಸಿನಿಮಾ ಜರ್ನಿಯನ್ನು ಶೀಘ್ರದಲ್ಲೇ ತೆಲುಗು ಸಿನಿಮಾಗಳ ಮೂಲಕ ಮಾಡಲಿದ್ದಾರೆ ಎಂದು ಸುದ್ದಿಯಾಗಿದೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅವರ ಹೊಸ ಸಿನಿಮಾ, ಬುಚ್ಚಿ ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬರಲಿದ್ದು, ಇದೇ ಸಿ‌‌ನಿಮಾದಲ್ಲಿ ನಾಯಕಿಯಾಗಿ ಜಾಹ್ನವಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಷು ಸುದ್ದಿಮಾಧ್ಯಮಗಳಲ್ಲಿ ಹರಿದಾಡಿ ಎಲ್ಲರ ಗಮನ ಸೆಳೆದಿತ್ತು.

ದಕ್ಷಿಣ ಸಿನಿಮಾರಂಗ ಹಾಗೂ ಅಭಿಮಾನಿಗಳ ನಿರೀಕ್ಷೆ ನಿಜವಾಗುತ್ತಿದೆ, ಶ್ರೀದೇವಿಯವರ ಪುತ್ರಿ ದಕ್ಷಿಣ ಸಿನಿಮಾರಂಗಕ್ಕೆ ಬರುತ್ತಿದ್ದಾರೆ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳ ಕೆಲವು ಸಿನಿಮಾ ಪೇಜ್ ಗಳಲ್ಲಿ ಹರಿದಾಡಿತ್ತು. ಅಭಿಮಾನಿಗಳ ಮೆಚ್ಚುಗೆ ಹರಿದು ಬಂದಿತ್ತು. ಆದರೆ ಈಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ನಟಿ ಜಾಹ್ನವಿ ಕಪೂರ್ ಅವರ ತಂದೆ,‌ ಬಾಲಿವುಡ್ ನ ಪ್ರಮುಖ ಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿರುವ ಬೋನಿ ಕಪೂರ್ ಅವರು ಮಾದ್ಯಮಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಸಿನಿಮಾ ಸಮಾರಂಭವೊಂದರಲ್ಲಿ ಬೋನಿ ಕಪೂರ್ ಅವರು ಮಾದ್ಯಮಗಳ ಪ್ರಶ್ನೆಗೆ ಉತ್ತರ ನೀಡುತ್ತಾ, ಜಾಹ್ನವಿ ಬಗ್ಗೆ ಹರಿಡಿರುವುದು ಸಾಮಾಜಿಕ ಜಾಲತಾಣಗಳ ಒಂದು ಗಾಳಿ ಸುದ್ದಿ ಅಷ್ಟೇ ಮತ್ತೇನೂ ಅಲ್ಲ. ಪ್ರತಿದಿನ ಒಂದು ಹೊಸ ಗಾಳಿ ಸುದ್ದಿ ಹುಟ್ಟಿಕೊಳ್ಳುತ್ತದೆ. ಅಂತಹ ಸುದ್ದಿಗಳಲ್ಲಿ ಜಾಹ್ನವಿ ಎನ್ ಟಿ ಆರ್ ಜೊತೆ ನಟಿಸುತ್ತಾಳೆ ಎನ್ನುವುದು ಕೀಡಾ ಒಂದಾಗಿದೆ ಎನ್ನುವ ಮೂಲಕ ಹರಡಿದ್ದ ಸುದ್ದಿಗಳು ಕೇವಲ ಸುಳ್ಳು ಎನ್ನುವ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ.

ಶ್ರೀದೇವಿ ಅಭಿಮಾನಿಗಳು ಜಾಹ್ನವಿ ತೆಲುಗಿನ ಸಿನಿಮಾಗಳಲ್ಲಿ ನಟಿಸಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ನಮಗೆ ಖಂಡಿತ ವಿಷಯ, ಅವರ ನಿರೀಕ್ಷೆಗಳು ಶೀಘ್ರದಲ್ಲೇ ನಿಜವಾಗಲಿದೆ. ನಾನು ಸಹಾ ಜಾಹ್ನವಿ ತೆಲುಗು ಸಿನಿಮಾಗಳಲ್ಲಿ ನಟಿಸಬೇಕು ಎಂದು ಬಯಸುತ್ತಿದ್ದೇನೆ ಎನ್ನುವ ಮಾತನ್ನು ಸಹಾ ಬೋನಿ ಕಪೂರ್ ಹೇಳುವ ಮೂಲಕ ಮುಂದೊಂದು ದಿನ ಜಾಹ್ನವಿ ತೆಲುಗಿನಲ್ಲಿ ನಟಿಸುವುದು ಖಂಡಿತ ಎಂದಿದ್ದಾರೆ.

Leave a Reply

Your email address will not be published.