ಜೂ.ಎನ್ಟಿಆರ್ ಗೆ ಇರೋ ಕನ್ನಡ ಅಭಿಮಾನ, ಪ್ರೀತಿ ರಶ್ಮಿಕಾಗೆ ಯಾಕಿಲ್ಲ?? ನೆಟ್ಟಿಗರ ಈ ಅಸಮಾಧಾನಕ್ಕೆ ಕಾರಣವೇನು??

Written by Soma Shekar

Published on:

---Join Our Channel---

ರಶ್ಮಿಕಾ ಮಂದಣ್ಣ‌ ಸದ್ಯಕ್ಕಂತೂ ಟಾಲಿವುಡ್ ನ ಸ್ಟಾರ್ ನಟಿ ಹಾಗೂ ದಕ್ಷಿಣದ ಬ್ಯುಸಿ ನಟಿಯರಲ್ಲಿ ಒಬ್ಬರು. ಸಿನಿಮಾ , ಜಾಹೀರಾತು, ಬಾಲಿವುಡ್ ಎಂಟ್ರಿ ಹೀಗೆ ಹತ್ತು ಹಲವು ವಿಚಾರಗಳಿಂದ ರಶ್ಮಿಕಾ ಸುದ್ದಿಯಲ್ಲಿರುವುದು ಕೂಡಾ ನಿಜ. ರಶ್ಮಿಕಾ ಇದ್ದಲ್ಲಿ ಸುದ್ದಿಯಾಗುವುದು ಖಚಿತ. ಎಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದುಕೊಂಡರೂ ಕೂಡಾ ಭಾಷೆಯ ವಿಚಾರಕ್ಕೆ ಬಂದಾಗಲೆಲ್ಲಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ ರಶ್ಮಿಕಾ ಮಂದಣ್ಣ. ಅಲ್ಲದೇ ಕನ್ನಡದ ಬಗ್ಗೆ ನಟಿಗೆ ಅಭಿಮಾನವಿಲ್ಲ ಎನ್ನೋದು ಅನೇಕರ ಅಸಮಾಧಾನಕ್ಕೆ ಕಾರಣ.

ಈ ವಿಚಾರಗಳು ಬಂದಾಗಲೂ ರಶ್ಮಿಕಾ ಮಾತ್ರ ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನು ರಶ್ಮಿಕಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ, ಅಲ್ಲು ಅರ್ಜುನ್ ನಾಯಕನಾಗಿರುವ ಬಹುನಿರೀಕ್ಷಿತ ಪುಷ್ಪ ಟ್ರೈಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಹೊಸ ಲುಕ್, ಸ್ಟೈಲ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ವಿಶೇಷವೆಂದರೆ ಈ ಸಿನಿಮಾ ಕನ್ನಡದಲ್ಲಿ ಸಹಾ ಡಬ್ ಆಗಿ ಬರುತ್ತಿದೆ. ಆದರೆ ಕನ್ನಡದ ಅವತರಣಿಕೆಯಲ್ಲಿ ರಶ್ಮಿಕಾ ತಮ್ಮ ಪಾತ್ರಕ್ಕೆ ಡಬ್ ಮಾಡಿಲ್ಲ ಎನ್ನಲಾಗಿದೆ.

ಇನ್ನು ಮೊನ್ನೆಯಷ್ಟೇ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಟ್ರೈಲರ್ ಬಿಡುಗಡೆ ಆಗಿದೆ. ನಿನ್ನೆ ನಡೆದ ಸುದ್ದಿಗೋಷ್ಢಿಯಲ್ಲಿ ನಟ ಜೂನಿಯರ್‌ ಎನ್ ಟಿ ಆರ್ ಕನ್ನಡದಲ್ಲಿ ಮಾತನಾಡಿದ್ದು ಮಾತ್ರವೇ ಅಲ್ಲದೇ, ಆರ್ ಆರ್ ಆರ್ ಸಿನಿಮಾದ ಕನ್ನಡದ ವರ್ಷನ್ ನಲ್ಲಿ ತನ್ನ ಪಾತ್ರಕ್ಕೆ ತಾನೇ ಧ್ವನಿಯನ್ನು ನೀಡಿರುವುದಾಗಿ ಹೇಳಿದ್ದಾರೆ. ಇದರಿಂದ ಸಹಜವಾಗಿಯೇ ಕನ್ನಡಿಗರು ಖುಷಿಯಾಗಿದ್ದಾರೆ. ಈಗ ಇದೇ ವಿಷಯದಲ್ಲಿ ರಶ್ಮಿಕಾ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಪರಭಾಷೆ ನಟನಾದ ಜೂನಿಯರ್ ಎನ್ ಟಿ ಆರ್ ಅವರು ಕಷ್ಟವಾದರೂ ಸರಿ ಕನ್ನಡವನ್ನು ಕಲಿತು, ಡಬ್ಬಿಂಗ್ ಮಾಡುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ಆದರೆ ರಶ್ಮಿಕಾ ಕನ್ನಡದವರೇ ಆಗಿ ತಮ್ಮ ಪುಷ್ಪ ಸಿನಿಮಾದ ಕನ್ನಡ ಡಬ್ಬಿಂಗ್ ನಲ್ಲಿ ತಾವೇಕೆ ಮಾತನಾಡಲು ಆಸಕ್ತಿಯನ್ನು ತೋರಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ರಶ್ಮಿಕಾ ಅವರಿಗೆ ಕನ್ನಡದ ಮೇಲೆ ಅಭಿಮಾನ ಇಲ್ಲವೇನು?? ಎನ್ನುವ ಪ್ರಶ್ನೆ ಗಳನ್ನು ಹಾಕುತ್ತಿದ್ದಾರೆ.

Leave a Comment