ಜೊತೆ ಜೊತೆಯಲಿ ಈ ಹೆಸರು ಕನ್ನಡ ಕಿರುತೆರೆಯ ಲೋಕದಲ್ಲಿ ಜನಜನಿತವಾದ ಹಾಗೂ ಜನಮನ್ನಣೆಯನ್ನು ಪಡೆದು ಮುನ್ನುಗುತ್ತಿರುವ ಜನಪ್ರಿಯ ಧಾರಾವಾಹಿಯ ಹೆಸರು ಎನ್ನುವುದು ಎಲ್ಲರೂ ಊಹಿಸಿ ಬಿಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಈ ಧಾರಾವಾಹಿ ಆರಂಭದಿಂದಲೇ ಸೃಷ್ಟಿಸಿದ ಕ್ರೇಜ್ ಹಾಗೂ ಬರೆದ ಹೊಸ ದಾಖಲೆಯೇ ಆಗಿದೆ. ಈ ಸೀರಿಯಲ್ ಎಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಧಾರಾವಾಹಿಗೆ ಸಿಕ್ಕಷ್ಟೇ ದೊಡ್ಡ ಮಟ್ಟದ ಜನಪ್ರಿಯತೆ ಇದರಲ್ಲಿ ನಟಿಸಿದ ನಟ ನಟಿಯರಿಗೂ ಸಹಾ ಸಿಕ್ಕಿದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ.
ಈ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ನವ ನಟಿ ಮೇಘಾ ಶೆಟ್ಟಿ ಅವರು. ಮೇಘಾ ಶೆಟ್ಟಿ ಅನು ಸಿರಿಮನೆ ಪಾತ್ರದ ಮೂಲಕ ಜನರ ಮೇಲೆ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಪ್ರೇಕ್ಷಕರು ಅನು ಎಂದರೆ ತಮ್ಮ ಮನೆ ಮಗಳೇನೋ ಎಂದೇ ಭಾವಿಸ ತೊಡಗಿದರು. ಹೀಗೆ ಜೊತೆಜೊತೆಯಲಿ ಸೀರಿಯಲ್ ನ ಅನುವಾಗಿ ಮನೆ ಮನೆ ಮಾತಾದ ಮೇಘಾ ಶೆಟ್ಟಿ ಅವರ ಅದೃಷ್ಟ ಅವರನ್ನು ಕಿರುತೆರೆಯಿಂದ ಹಿರಿಯ ತೆರೆ ಕಡೆಗೆ ನಡೆಸಿತು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾ ನಾಯಕಿಯಾಗಿ ಸಿನಿಮಾಕ್ಕೆ ಮೇಘಾ ಶೆಟ್ಟಿ ಎಂಟ್ರಿ ನೀಡಿದ್ದಾರೆ.
ಲವ್ ಮಾಕ್ಟೇಲ್ ಖ್ಯಾತಿ ನಟ, ನಿರ್ದೇಶಕ, ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಸಿನಿಮಾದಲ್ಲಿ ಸಹಾ ಮೇಘಾ ಅವರು ನಾಯಕಿಯಾಗಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಮೇಘಾ ಶೆಟ್ಟಿ ಅವರು ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಹೌದು ನಟಿ ಮೇಘಾ ಶೆಟ್ಟಿ ಅವರು ಜೀ ಕನ್ನಡದಿಂದ ಇದೀಗ ಕಲರ್ಸ್ ಕನ್ನಡ ವಾಹಿನಿಗೆ ಹಾರಿದ್ದಾರೆ. ಏನು ಮೇಘಾ ಶೆಟ್ಟಿ ಅಲ್ಲಿ ಸೀರಿಯಲ್ ಗೆ ಹೋದ್ರಾ?? ಎಂದು ಕೊಂಡರೆ, ಹೋಗಿರುವುದೇನೋ ನಿಜ, ಆದರೆ ನಟಿಯಾಗಲ್ಲ ನಿರ್ಮಾಪಕಿಯಾಗಿ.
ಹೀಗೋದು ಹೊಸ ವಿಷಯವನ್ನು ನಟಿ ಮೇಘಾ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಮೇಘಾ ಅವರು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೀರಿಯಲ್ ಒಂದರ ಪ್ರೋಮೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಂಡ ಸಂಪಿಗೆ ಹೆಸರಿನ ಈ ಹೊಸ ಸೀರಿಯಲ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎನ್ನುವ ಮಾಹಿತಿ ನಮಗೆ ಪ್ರೋಮೋದಲ್ಲಿ ಸಿಗುತ್ತದೆ. ನಿರ್ಮಾಪಕಿಯಾಗಿ ಮೇಘಾ ಹೊಸ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
ಜೀ ಕನ್ನಡದ ಮೂಲಕ ನಟಿಯಾಗಿ ಕಿರುತೆರೆಗೆ ಎಂಟ್ರಿ ನೀಡಿದ ಮೇಘಾ ಇದೀಗ ಆ ವಾಹಿನಿಯಿಂದ ಮತ್ತೊಂದು ವಾಹಿನಿಗೆ ನಿರ್ಮಾಪಕಿಯಾಗಿ ಅಡಿಯಿಡುವ ಮೂಲಕ ಮತ್ತೊಂದು ಹೊಸ ಜರ್ನಿಗೆ ಸಿದ್ಧರಾಗಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಅವರು ಸಪೋರ್ಟ್ ಮಾಡಿ ಎಂದು ಪ್ರೇಕ್ಷಕರಿಗೆ ತಿಳಿಸಿದ್ದಾರೆ. ಕೆಂಡಸಂಪಿಗೆ ಹೇಗಿರಲಿದೆ? ಕಿರುತೆರೆಯ ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆ ನಟಿಯಿಂದ ನಿರ್ಮಾಪಕಿಯಾದ ಮೇಘಾ ಶೆಟ್ಟಿ ಅವರಿಗೆ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.