ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಖ್ಯಾತಿಯ ನಟ ಧೃವ ಸರ್ಜಾ ಅವರಿಗೆ ನಾಡಿನಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ನಟನ ಹೊಸ ಸಿನಿಮಾ ಯಾವಾಗ? ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ ಅವರ ಅಭಿಮಾನಿಗಳು. ಪ್ರಸ್ತುತ ಮಾರ್ಟಿನ್ ಸಿನಿಮಾದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗ ಸಿನಿಮಾ ವಿಚಾರಗಳ ನಡುವೆಯೇ ನಟ ಧೃವ ಸರ್ಜಾ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇದು ಖಂಡಿತ ಅಭಿಮಾನಿಗಳಿಗೆ ಒಂದು ವಿಶೇಷವಾದ ಸುದ್ದಿಯಾಗಲಿದೆ. ಅಭಿಮಾನ ನಟನು ನೀಡಿದ ಈ ಸುದ್ದಿಯು ಈಗ ಅವರ ಅಭಿಮಾನಿಗಳಿಗೆ ಸಹಾ ಖುಷಿಯನ್ನು ನೀಡುತ್ತಿದೆ. ಹಾಗಾದರೆ ಏನಿದು ವಿಚಾರ ತಿಳಿಯೋಣ ಬನ್ನಿ.
ನಟ ಧೃವ ಸರ್ಜಾ ಅವರು ತಮ್ಮ ಮನೆಗೆ ಬರಲಿರುವ ಹೊಸ ಅತಿಥಿಯ ಕುರಿತಾದ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ನಟ ಧೃವ ಸರ್ಜಾ ಅವರು ತಾವು ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಸುಂದರ ವೀಡಿಯೋ ಮೂಲಕ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗುತ್ತಾ ಸಾಗಿದೆ. ಅಭಿಮಾನಿಗಳ ಕಡೆಯಿಂದ ಮೆಚ್ಚುಗೆಗಳು ಹರಿದು ಬರುತ್ತಿದೆ ಹಾಗೂ ಅಭಿಮಾನಿಗಳು ನಟನಿಗೆ ಅಪ್ಪನಾಗುತ್ತಿರುವ ಖುಷಿಯ ಹಿನ್ನೆಲೆಯಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಧೃವ ಅವರ ಪತ್ನಿ ಪ್ರೇರಣಾ ಅವರು ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದಾರೆ.
ಮುಂದಿನ ತಿಂಗಳು ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ. ಪ್ರೇರಣಾ ಅವರ ಬೇಬಿ ಬಂಪ್ ವೀಡಿಯೋವನ್ನು ನಟ ಧೃವ ಸರ್ಜಾ ಅವರು ಶೇರ್ ಮಾಡಿಕೊಂಡಿದ್ದಾರೆ. ಧೃವ ಅವರು ಶೀರ್ಷಿಕೆಯಲ್ಲಿ, ಜೀವನದ ಹೊಸ ಘಟ್ಟವನ್ನು ಪ್ರವೇಶ ಮಾಡುತ್ತಿದ್ದೇವೆ, ಒಂದು ದೈವಿಕವಾದ ಘಟ್ಟ, ಶೀಘ್ರದಲ್ಲೇ ಬರಲಿರುವ ಮಗುವನ್ನು ಹರಸಿ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ನೋಡಿ ಅವರ ಅಭಿಮಾನಿಗಳು ಸಾಕಷ್ಟು ಖುಷಿ ಪಟ್ಟಿದ್ದು, ಕಾಮೆಂಟ್ ಗಳನ್ನು ಮಾಡುವ ಮೂಲಕ ಧೃವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಶುಭವನ್ನು ಹಾರೈಸುತ್ತಿದ್ದಾರೆ.