ಜೀವನದ ಹೊಸ ಘಟ್ಟಕ್ಕೆ ಪ್ರವೇಶ: ಸಿಹಿ ಸುದ್ದಿ ಹಂಚಿಕೊಂಡ ಮಹಾದೇವಿ ಖ್ಯಾತಿಯ ನಟಿ ಮಾನಸ ಜೋಶಿ

Entertainment Featured-Articles Movies News

ಕನ್ನಡ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯ ಎವರ್ ಗ್ರೀನ್ ನಟಿ ಮಾನಸ ಜೋಶಿ ಅವರು ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ಆದಂತಹ ಹೆಸರನ್ನು ಹಾಗೂ ಸ್ಥಾನವನ್ನು ಪಡೆದಿರುವ ನಟಿಯಾಗಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಅಪಾರ ಜನಾಭಿಮಾನವನ್ನು ಪಡೆದಿರುವ ಅಪ್ಪಟ ಕಲಾವಿದೆ ಮಾನಸ ಜೋಶಿ ಅವರು‌. ಕನ್ನಡ ಕಿರುತೆರೆಯಲ್ಲಿ ಮಹಾದೇವಿ ಸೀರಿಯಲ್ ನಲ್ಲಿ ಅಮ್ಮನವರ ಪಾತ್ರದಲ್ಲಿ ಕಾಣಿಸಿಕೊಂಡು ಜನರಿಂದ ಮೆಚ್ಚುಗೆಯನ್ನು ಪಡೆದವರು ಮಾನಸ ಜೋಶಿ ಅವರು. ಇದೀಗ ಅವರು ಹೊಸ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ನಟಿ ಮಾನಸ ಜೋಶಿ ಹಾಗೂ ಅವರ ಪತಿ ತಮ್ಮ ಜೀವನದಲ್ಲಿ ಹೊಸ ಅತಿಥಿಯ ಆಗಮನಕ್ಕೆ ಸಜ್ಜಾಗಿದ್ದಾರೆ. ನಟಿ ಮಾನಸ ಜೋಶಿ ಅವರು ತಾವು ತಾಯಿ ಆಗಲಿರುವ ಸಿಹಿ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಹೌದು, ನಟಿ ಮಾನಸ ಜೋಶಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಫೋಟೋ ಹಂಚಿಕೊಂಡು ತಾನು ತಾಯಿ ಆಗುತ್ತಿರುವ ಶುಭ ಸಮಾಚಾರವನ್ನು ಹಾಗೂ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ನಟಿ ಮಾನಸ ಅವರು ಫೋಟೋ ಹಂಚಿಕೊಂಡು, ಜೀವನದ ಹೊಸ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇವೆ. ನಾವು ಪ್ರೆಗ್ನೆಂಟ್ ಎಂದು ಖುಷಿಯಿಂದ ಬರೆದುಕೊಂಡು ಪತಿ ಪತ್ನಿ ಇಬ್ಬರೂ ಗರ್ಭಿಣಿಯರ ಹಾಗೆ ಸುಂದರವಾದ ಫೋಟೊ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಮಾನಸ ಜೋಶಿ ಅವರ ಅಭಿಮಾನಿಗಳು ನಟಿಗೆ ಶುಭವನ್ನು ಹಾರೈಸುತ್ತಿದ್ದಾರೆ. ಅನೇಕ ಮಂದಿ ಮಾನಸ ಅವರು ಹಂಚಿಕೊಂಡ ಫೋಟೋಗಳಿಗೆ ಮೆಚ್ಚುಗೆಯನ್ನು ನೀಡುತ್ತಾ ಸಾಗಿದ್ದಾರೆ.

ನಟಿ ಮಾನಸ ಅವರು ಹಂಚಿಕೊಂಡ ಶುಭ ಸುದ್ದಿಯನ್ನು ನೋಡಿ ನಟಿಯರಾದ ಸುಜಾತ ಅಕ್ಷಯ, ಸೋನು ಗೌಡ, ಸಿಂಧು ಕಳ್ಯ, ಐಶ್ವರ್ಯ ರಂಗರಾಜನ್, ಅನಪಮಾ ಗೌಡ, ಹಿತ ಚಂದ್ರಶೇಖರ್ ಅವರು ಮಾನಸ ಅವರಿಗೆ ಕ್ರಂಗ್ರಾಜುಲೇಶನ್ ಎಂದು ಹೇಳಿದ್ದಾರೆ. ಮಾನಸ ಅವರು ಕಡೆಯದಾಗಿ ಕಿರುತೆರೆಯ ಜನಪ್ರಿಯ ಸೀರಿಯಲ್ ಮಂಗಳ ಗೌರಿ ಮದುವೆಯಲ್ಲಿ ರಾಜೇಶ್ವರಿ ಎನ್ನುವ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Leave a Reply

Your email address will not be published.